ಅರ್ಚಕರಿಂದ ಪೊಲೀಸ ಕ್ರಮ ನಿಷೇಧಿಸಿ ಆಮರಣ ಉಪವಾಸ
ಜಾಲೌನ್ (ಉತ್ತರಪ್ರದೇಶ) – ತುಳಸಿ ನಗರ ಎಂಬಲ್ಲಿ ಮಸೀದಿಯಿಂದ ಭೋಂಗದಲ್ಲಿ ಅಜಾನ ಬಿತ್ತರಿಸುವಾಗ ದೇವಸ್ಥಾನದ ಅರ್ಚಕರಾದ ಮಚ್ಚೇಂದ್ರ ಗೋಸ್ವಾಮಿಯವರು ಮಸೀದಿಯ ಎದುರಿಗೆ ಹನುಮಾನ ಚಾಲಿಸ ಪಠಿಸಿರುವುದರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಾಗಿತ್ತು. ಆದ್ದರಿಂದ ಬೆಸರಿಸಿರುವ ಗೋಸ್ವಾಮಿರವರು ಪೊಲೀಸರ ಕ್ರಮದ ವಿರುದ್ಧ ಆಮರಣ ಉಪವಾಸ ಮಾಡುತ್ತಿದ್ದಾರೆ. ಪೊಲೀಸರು ತಪ್ಪು ಮಾಹಿತಿಯ ಆಧಾರದಲ್ಲಿ ನನ್ನ ಮೇಲೆ ಕ್ರಮ ಕೈಗೊಂಡಿದ್ದಾರೆ. ಈ ಮಸೀದಿಯ ಎದುರಿಗೆ ಹನುಮಾನ್ ಚಾಲೀಸ್ ಪಾರಾಯಣ ನಡೆಸಲಾಗಿತ್ತು. ಆ ಸಮಯದಲ್ಲಿ ಭೋಂಗಾ ಉಪಯೋಗಿಸಿರಲಿಲ್ಲ ಎಂದು ಗೋಸ್ವಾಮಿರವರು ಹೇಳಿದ್ದಾರೆ. ಅರ್ಚಕರಾದ ಗೋಸ್ವಾಮಿಯವರು ಈ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಸಂಪಾದಕೀಯ ನಿಲುವುಮಸೀದಿಯ ಎದುರಿಗೆ ಹನುಮಾನ್ ಚಾಲೀಸಾ ಪಠಿಸಬಾರದು ಎಂದು ಕಾನೂನು ಇದೆಯಾ ? ಪೊಲೀಸರು ಯಾವ ಕಾನೂನಿನ ಆಧಾರದಲ್ಲಿ ದೂರನ್ನು ದಾಖಲಿಸಿಕೊಂಡಿದ್ದಾರೆ ಎಂದು ಅವರು ಜನರಿಗೆ ತಿಳಿಸಬೇಕು ! |