ಭಾರತವು ಮುಸ್ಲಿಮರ ನರಮೇಧದಲ್ಲಿ ಸಹಭಾಗ !(ಅಂತೆ)

ಪಾಕಿಸ್ತಾನದ ರಾಷ್ಟ್ರಪತಿ ಡಾ. ಆರಿಫ್ ಅಲ್ವಿ ಅವರ ಹುರುಳಿಲ್ಲದ ಆರೋಪ !

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತವು ಮುಸ್ಲಿಮರ ನರಮೇಧ ಮಾಡುತ್ತಿದೆ ಮತ್ತು ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಎಂದು ಪಾಕಿಸ್ತಾನ ಅಧ್ಯಕ್ಷ ಡಾ. ಆರಿಫ್ ಅಲ್ವಿಯವರು ಹುರುಳಿಲ್ಲದ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಪ್ರವಾಸದಲ್ಲಿರುವ ಅಮೆರಿಕಾದ ಮಹಿಳಾ ಸಂಸದೆ ಅಲ್ಹಾನ ಉಮರ ಅವರೊಂದಿಗೆ ಮಾತನಾಡುವಾಗ ಅಧ್ಯಕ್ಷ ಅಲ್ವಿ ಈ ಆರೋಪ ಮಾಡಿದ್ದಾರೆ. ‘ಮೋದಿ ಸರಕಾರ ಅಧಿಕಾರದಲ್ಲಿರುವ ಭಾರತದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಶೋಷಣೆಗೆ ಒಳಗಾಗುತ್ತಿದ್ದಾರೆ’, ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಇದನ್ನೇ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುತ್ತಾರೆ ! ಪಾಕಿಸ್ತಾನವು ಸೃಷ್ಟಿಯಾದಾಗಿನಿಂದ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಇತರ ಧಮ್ದವರ ನರಮೇಧ ನಡೆಯುತ್ತಲೇ ಇದೆ. ಪಾಕಿಸ್ತಾನದಲ್ಲಿ ಹಿಂದೂಗಳು ಶೇ. ೯ ರಷ್ಟಿದ್ದು ಈಗ ಕೇವಲ ಶೇ. ೧ ರಷ್ಟು ಮಾತ್ರ ಉಳಿದಿದ್ದರೆ ಭಾರತದಲ್ಲಿ ಆಗ ಶೇ. ೩ ರಷ್ಟಿದ್ದ ಮುಸ್ಲಿಮರು ಇಗ ಶೇ. ೧೫ ರಷ್ಟಿದ್ದಾರೆ. ಡಾ. ಅಲ್ವಿಯವರು ಇದನ್ನೇಕೆ ಹೇಳುವುದಿಲ್ಲ !