ಮಾಸ್ಕೋ (ರಷ್ಯಾ) – ರಷ್ಯಾ ಮತ್ತು ಉಕ್ರೇನ ನಡುವಿನ ಯುದ್ಧದ ೫೬ ನೇ ದಿನವಾಗಿದೆ. ಎರಡೂ ದೇಶಗಳು ಬಾಗುವುದಕ್ಕೆ ಸಿದ್ದರಿಲ್ಲ. ರಷ್ಯಾದ ಸೇನೆಯು ಹೆಚ್ಚು ಆಕ್ರಮಣಕಾರಿಯಾಗುತ್ತಿದ್ದಂತೆ ಉಕ್ರೇನನ ಸೈನ್ಯವು ಅಮೇರಿಕಾ ಮತ್ತು ಇತರ ಪ್ರಬಲ ರಾಷ್ಟ್ರಗಳೊಂದಿಗೆ ಯುದ್ಧದಲ್ಲಿದೆ. ಈ ಹಿನ್ನಲೆಯಲ್ಲಿ ‘ಉಕ್ರೇನ್‌ನ ಸೈನ್ಯವು ಶರಣಾದರೆ ಮುಂದಿನ ಕಾರ್ಯಾಚರಣೆ ಮಾಡುವುದಿಲ್ಲ’,ವೆಂದು ರಷ್ಯಾದ ರಕ್ಷಣಾ ಸಚಿವರು ಹೇಳಿದ್ದಾರೆ.
ರಷ್ಯಾದ ಸೇನೆಯು ವಿಶ್ವದ ಅತ್ಯಂತ ಕ್ರೂರ ಸೇನೆಯಾಗಿದೆ ! – ಝೆಲೆಂಸ್ಕೀ
ರಷ್ಯಾದ ಸೇನೆಯು ವಿಶ್ವದ ಅತ್ಯಂತ ಕ್ರೂರ ಸೇನೆಯಾಗಿದೆ. ಅವರಿಗೂ ಮಾನವಿಯತೆಗೂ ಯಾವುದೇ ಸಂಬಂಧವಿಲ್ಲ, ಎಂದು ಉಕ್ರೇನಿಯನ ಅಧ್ಯಕ್ಷ ವ್ಲಾದಿಮಿರ ಝೆಲೆಂಸ್ಕೀ ಹೇಳಿದ್ದಾರೆ.
War: You’re most barbaric, inhumane army in history – Zelensky slams Russian forces https://t.co/BtNtjbHDDf
— Daily Post Nigeria (@DailyPostNGR) April 20, 2022
ಯುದ್ಧವನ್ನು ಕೊನೆಗೊಳಿಸುವ ಮನಸ್ಥಿತಿಯಲ್ಲಿ ಅಮೇರಿಕ ಇಲ್ಲ !
ಉಕ್ರೇನಗೆ ಅಮೇರಿಕಾ ಮತ್ತೊಮ್ಮೆ ಸೇನಾ ನೆರವು ನೀಡಲಿದೆ ಎಂದು ಅಮೇರಿಕನ ರಕ್ಷಣಾ ಸಚಿವಾಲಯ ‘ಪೆಂಟಗನ’ವು ಮಾಹಿತಿ ನೀಡಿದೆ. ರಷ್ಯಾದ ಪ್ರಾಬಲ್ಯವನ್ನು ಕಡಿಮೆ ಮಾಡುವ ಸಲುವಾಗಿ ಯುದ್ಧವನ್ನು ಕೊನೆಗೊಳಿಸಲು ಅಮೇರಿಕಾ ಬಯಸುವದಿಲ್ಲ ಎಂದು ಹೇಳಲಾಗುತ್ತದೆ.