ಭಾರತದಲ್ಲಿ ಮಾವೋವಾದದ ಅಂತ್ಯ ?

ಭಾರತದ ಗೃಹಸಚಿವಾಲಯವು ಸುರಕ್ಷಾ ದಳಗಳಿಗೆ ದೇಶದ ಮಾವೋವಾದಿಗಳ ಷಡ್ಯಂತ್ರಗಳು, ಅವರ ಯೋಜನೆಗಳು ಮತ್ತು ಅವರ ಸಹಾಯಕರ ಜಾಲವನ್ನು ಧ್ವಂಸ ಮಾಡಲು ಆದೇಶ ನೀಡಿದೆ. ಅದಕ್ಕಾಗಿ ಭೂಗತ ನಕ್ಸಲರು ಮತ್ತು ಅವರ ನಗರ ಜಾಲದ ಮೇಲೆ ಏಕಕಾಲದಲ್ಲಿ ಕ್ರಮತೆಗೆದುಕೊಳ್ಳುವ ಯೋಜನೆಯಿದೆ. ‘ಅನೇಕ ನಗರಗಳಲ್ಲಿ ಭೂಗತವಾಗಿರುವ ನಕ್ಸಲರಿಗೆ ಮಾವೋವಾದಿಗಳು ಸಹಾಯ ಮಾಡುತ್ತಿದ್ದಾರೆ’, ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆಯು ಸರಕಾರಕ್ಕೆ ಈಗ ಮತ್ತು ಇದಕ್ಕೂ ಮೊದಲು ಕೊಟ್ಟಿದೆ. ಕೇಂದ್ರೀಯ ಮೀಸಲು ಪೊಲೀಸ್ ದಳ ಮತ್ತು ಮಾವೋವಾದಿ ವಿರೋಧಿ ದಳದವರು ಅನೇಕ ನಗರಗಳಲ್ಲಿ ಭೂಗತ ಮಾವೋವಾದಿ ಬೆಂಬಲಿಗರನ್ನು ಗುರುತಿಸಲು ಹಾಗೂ ಅವರನ್ನು ಬಂಧಿಸಲು ರಾಜ್ಯ ಪೊಲೀಸ್ ದಳದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ತಡವಾದರೂ ಸರಿ ನಗರ ನಕ್ಸಲವಾದವನ್ನು ಬಗ್ಗುಬಡಿಯಲು ಇದರಿಂದ ವೇಗ ಸಿಗಬಹುದು. ಈ ಹಿಂದೆ ಆಂಧ್ರದಲ್ಲಿನ ನಕ್ಸಲವಾದವನ್ನು ಮುಗಿಸಲು ‘ಗ್ರೇಹೌಂಡ್ಸ್’ ಎನ್ನುವ ನಕ್ಸಲ್‌ವಿರೋಧಿ ವ್ಯವಸ್ಥೆಯು ಕಾರ್ಯ ನಡೆಸುತ್ತಿತ್ತು. ಇದೇ ಪದ್ಧತಿಯಲ್ಲಿ ಛತ್ತೀಸ್‌ಗಡ, ಬಿಹಾರ, ಝಾರ್‌ಖಂಡ, ಒಡಿಶಾಗಾಗಿಯೂ ಒಂದು ವಿಶೇಷ ದಳವನ್ನು ಸ್ಥಾಪಿಸಲು ಕೇಂದ್ರ ಸರಕಾರ ನಿಧಿಯನ್ನು ನೀಡುವುದಾಗಿ ಘೋಷಿಸಿದೆ.

ಜನರನ್ನು ದಾರಿತಪ್ಪಿಸುವ ನಗರ ಮಾವೋವಾದ !

ಬೌದ್ಧಿಕ ಸ್ತರದಲ್ಲಿ ಮಾವೋವಾದದ ಬಗ್ಗೆ ಮನವರಿಕೆ ಮಾಡಿಕೊಡುವ ತಥಾಕಥಿತ ವಿಚಾರವಂತರು, ಪ್ರಾಧ್ಯಾಪಕರು, ಲೇಖಕರು ನಕ್ಸಲರ ಮೇಲೆ ಅನ್ಯಾಯವಾಗಿದೆ ಎಂದು ಎಷ್ಟು ಪ್ರಭಾವಪೂರ್ಣವಾಗಿ ಮನದಟ್ಟು ಮಾಡುತ್ತಾರೆಂದರೆ, ಒಂದು ಕ್ಷಣ ಯಾರಾದರೂ ಬುದ್ಧಿವಾದಿಗಳು ಕೂಡ ಗೊಂದಲಕ್ಕೀಡಾಬಹುದು. ಅದರಿಂದಾಗಿ ಯುವ ಪೀಳಿಗೆಯು ಅವರ ವೈಯಕ್ತಿಕ ಅಧೀನತೆಗೊಳಗಾಗಿ ಸಹಜವಾಗಿಯೇ ನಕ್ಸಲವಾದಿ ಅಥವಾ ಉಗ್ರವಾದಿ ಕಾರ್ಯಾಚರಣೆಯಲ್ಲಿ ತೊಡಗುತ್ತಾರೆ. ‘ಸಾಕಷ್ಟು ಅನ್ನ, ನಿವಾಸ, ಔಷಧಗಳು ಸಿಗದಿರುವವರು ನಕ್ಸಲರಾಗುತ್ತಾರೆ’, ಎಂದು ಚಿತ್ರಣವನ್ನು ಅವರಿಂದ ಬಣ್ಣಿಸಲಾಗುತ್ತದೆ. ಭಾರತದಾದ್ಯಂತ ಬಡವರಿದ್ದಾರೆ; ಆದರೆ ಅವರು ನಕ್ಸಲರಾಗುವುದಿಲ್ಲ. ಆದ್ದರಿಂದ ಅವರ ಈ ಅಭಿಪ್ರಾಯವು ಅತ್ಯಂತ ಮೋಸಗಾರಿಕೆಯ ಹಾಗೂ ದಾರಿತಪ್ಪಿಸುವುದಾಗಿದೆ. ‘ಹಿಂಸಾತ್ಮಕ ಕೃತ್ಯವೆಸಗುವುದು, ಅವುಗಳ ನಿಯೋಜನೆ ಮಾಡುವುದು ಹಾಗೂ ಕ್ರಾಂತಿಕಾರಿ ವಿಚಾರಗಳನ್ನು ಮಂಡಿಸುತ್ತಾ ಕ್ರಾಂತಿಯ ಪ್ರಯತ್ನಗಳ ವಿಷಯದಲ್ಲಿ ಸಹಾನುಭೂತಿಯನ್ನು ಮೂಡಿಸುವುದು, ಇವು ಮೂರೂ ಬೇರೆ ಬೇರೆ ವಿಚಾರಗಳಾಗಿವೆ. ಇವುಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಪ್ರತ್ಯೇಕವಾದ ವೈಚಾರಿಕ ನಿಲುವಿರುವವರ ಮೇಲೆ ಪೊಲೀಸ್ ಕ್ರಮ ತೆಗೆದುಕೊಳ್ಳುವುದು ತಪ್ಪಾಗುತ್ತದೆ’, ಎಂಬ ಮೋಸಗಾರಿಕೆಯ ತರ್ಕವನ್ನು ಈ ನಗರ ನಕ್ಸಲರು ಜನರನ್ನು ದಾರಿ ತಪ್ಪಿಸಲು ಕಂಡು ಹಿಡಿದಿದ್ದಾರೆ. ೨೦೧೮ ರಲ್ಲಿ ಮಹಾರಾಷ್ಟ್ರದಲ್ಲಿ ಬಹಿರಂಗವಾಗಿ ನಗರ ನಕ್ಸಲರನ್ನು ಬಂಧಿಸುವುದು ಆರಂಭವಾದಾಗ, ‘ನಾವು ಕೇವಲ ಪೀಡಿತ, ಆದಿವಾಸಿಗಳು ಮತ್ತು ಬಡ ಸಮಾಜದ ಪರವಾಗಿ ಕಾರ್ಯವನ್ನು ಮಾಡುವವರು. ಅವರಿಗೆ ಸಹಾನುಭೂತಿಯನ್ನು ತೋರಿಸುವವರಾಗಿದ್ದೇವೆ’, ಎನ್ನುವ ಚಿತ್ರಣವನ್ನು ಅವರು ಮೂಡಿಸಿದರು. ವಾಸ್ತವದಲ್ಲಿ ‘ಅವರು ಸಶಸ್ತ್ರ ನಕ್ಸಲರೊಂದಿಗೆ ಕೈಜೋಡಿಸಿ ರುವುದರಿಂದ ಸರಕಾರವಿರೋಧಿ, ಅಂದರೆ ದೇಶವಿರೋಧಿ ವಿಚಾರವನ್ನು ಹರಡುವುದರಲ್ಲಿ ಅವರ ಎಷ್ಟು ದೊಡ್ಡ ಕೈವಾಡವಿದೆ ?, ಎನ್ನುವ ಚಿತ್ರಣವು ಬೆಳಕಿಗೆ ಬರಬೇಕು. ನಗರ ನಕ್ಸಲರನ್ನು ಬಂಧಿಸಿದಾಗ ‘ಇದು ಅಭಿವ್ಯಕ್ತಿಸ್ವಾತಂತ್ರ್ಯದ ಮೇಲಿನ ಆಘಾತವಾಗಿದೆ, ಎಂದು ಅವರ ಮಿತ್ರರಾಗಿರುವ ಜಾತ್ಯತೀತ ಪ್ರಸಾರಮಾಧ್ಯಮಗಳು ಬೊಬ್ಬೆ ಹೊಡೆದವು. ಆಗ ‘ಸಾಮಾನ್ಯ ನಕ್ಸಲವಾದಿಗಳು ಬಹುಸಂಖ್ಯಾತರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ’, ಎನ್ನುವ ಸತ್ಯವನ್ನು ಮಾತ್ರ ಯಾರೂ ಹೇಳಿಲ್ಲ. ನಗರ ನಕ್ಸಲವಾದಿಗಳು ‘ನಕ್ಸಲರನ್ನು ಕೊಲ್ಲಲಾಗುತ್ತದೆ, ಸೈನ್ಯಕ್ಕೆ ಸರಕಾರದ ರಕ್ಷಣೆ ಸಿಗುತ್ತದೆ’, ಎಂಬ ಉಲ್ಟಾ ಪ್ರಸಾರ ಮಾಡುತ್ತಾರೆ.

ಶಾರೀರಿಕ ಸ್ತರದ ಮಾವೋವಾದ, ಅಂದರೆ ನಕ್ಸಲರನ್ನು ಒಮ್ಮೆ ಶಸ್ತ್ರಗಳ ಸಹಾಯದಿಂದ ಮುಗಿಸಿ ಬಿಟ್ಟರಾಯಿತು, ಎಂದಾಗುತ್ತದೆ; ಆದರೆ ಅದು ಯಾವುದರಿಂದ ನಿರ್ಮಾಣವಾಯಿತೋ, ಆ ವೈಚಾರಿಕ ಸ್ತರದ ಮಾವೋವಾದವು ಎಷ್ಟು ಸೂಕ್ಷ್ಮವಾಗಿರುತ್ತದೆಯೆಂದರೆ, ಅದು ಎಲ್ಲೆಲ್ಲಿ ಬೇರೂರಿದೆ, ಎಂಬುದರ ಮೂಲವನ್ನು ಹುಡುಕುವುದು, ಯಾರೆಲ್ಲರ ತಲೆಯಲ್ಲಿ ಹಾಗೂ ಮನಸ್ಸಿನಲ್ಲಿ ಹೊಕ್ಕಿದೆ ಎಂಬುದನ್ನು ಹುಡುಕುವುದು ಕಠಿಣವಾಗಿದೆ. ವೈಚಾರಿಕ ಮಾವೋವಾದಿಗಳು ಒಳಗಿಂದ ಉಗ್ರವಾದಿಗಳೊಂದಿಗೆ ಸಂಧಾನ ಮಾಡಿಕೊಂಡಿರುತ್ತಾರೆ, ಎಂಬುದು ಇಷ್ಟರವರೆಗೆ ಅನೇಕ ವೇಳೆ ಬೆಳಕಿಗೆ ಬಂದಿದೆ.

‘ಜೆ.ಎನ್.ಯು. ಅದಕ್ಕೆ ದೊಡ್ಡ ಉದಾಹರಣೆಯಾಗಿದೆ. ಮಾವೋವಾದಿಗಳು ಒಂದೆಡೆ ಚೀನಾವನ್ನು ಬೆಂಬಲಿಸುವುದು, ಅಲ್ಲಿಂದ ನಿಧಿಯನ್ನು ಪಡೆಯುವುದು ಹಾಗೂ ಇನ್ನೊಂದೆಡೆ ಭಾರತದ ತಥಾಕಥಿತ ಬಂಡವಾಳದಾರರ ವಿರುದ್ಧ ಇದ್ದೇವೆಯೆಂದು ತೋರಿಸುತ್ತಾ ತಮ್ಮ ಹೋರಾಟವನ್ನು ‘ವೈಚಾರಿಕ ಸಮರ್ಥನೆ’ ಎಂದು ಮಾಡುತ್ತಾರೆ. ಪ್ರತ್ಯಕ್ಷ ‘ಮಾವೋನ ಮೂಲ ದೇಶ ರಷ್ಯಾ ಹಾಗೂ ಚೀನಾವು ಮೇಲುಮೇಲಿನದ್ದಾಗಿ ಮಾವೋವಾದಿ ತತ್ತ್ವದ್ದಾಗಿದೆ’ ಎಂದು ತೋರಿಸುತ್ತಿದ್ದರೂ, ನಿಜವಾಗಿಯೂ ಒಳಗಿಂದ ಅದು ದೊಡ್ಡ ಬಂಡವಾಳಶಾಹಿ ದೇಶವಾಗಿದೆ. ಭಾರತದ ನಗರ ಮಾವೋವಾದಿಗಳು ಈ ವೈಚಾರಿಕ ಅಂತರ್ವಿರೋಧಕ್ಕೆ ಉತ್ತರವನ್ನು ಏಕೆ ಕೊಡುವುದಿಲ್ಲ ? ಏಕೆಂದರೆ ಅವರಿಗೆ ಕೇವಲ ಸರಕಾರ ಮತ್ತು ಅವರ ವ್ಯವಸ್ಥೆಯನ್ನು ವಿರೋಧಿಸಿ ಸ್ವಾರ್ಥ ಸಾಧಿಸಲಿಕ್ಕಿದೆ. ಬಡವರಿಗಾಗಿ ಹಾಗೂ ತತ್ತ್ವಕ್ಕಾಗಿ ಅವರು ಹೋರಾಡುತ್ತಿರುವ ಢೋಂಗಿತನವನ್ನು ಮಾಡುತ್ತಿದ್ದಾರೆ, ಆ ತತ್ತ್ವಗಳು ನಿಜವಾಗಿಯೂ ಇವೆಯೇ ? ಮಾವೋವಾದಿಗಳ ಮೂಲವನ್ನು ಶೀಘ್ರದಲ್ಲಿಯೇ ಮುಗಿಸುವ ಅವಶ್ಯಕತೆಯಿದೆ. ಆ ದೃಷ್ಟಿಯಲ್ಲಿ ಗೃಹಸಚಿವಾಲಯವು ಇಟ್ಟಿರುವ ಹೆಜ್ಜೆಯು ಸ್ವಾಗತಾರ್ಹವಾಗಿದೆ.

ಮಾವೋವಾದವನ್ನು ಸಂಪೂರ್ಣ ನಾಶಗೊಳಿಸಬೇಕು !

ಟಾಟಾ ಸಮಾಜವಿಜ್ಞಾನ ಸಂಸ್ಥೆ ಅಥವಾ ‘ಜೆ.ಎನ್.ಯು.’ ಇದರಲ್ಲಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಬುದ್ಧಿಭ್ರಷ್ಟ ಮಾಡಿ ಅವರನ್ನು ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿದೆ ಎಂದು ರಾಷ್ಟ್ರೀಯ ತನಿಖಾ ದಳವು (‘ಎನ್.ಐ.ಎ’) ವಿಶೇಷ ನ್ಯಾಯಾಲಯದಲ್ಲಿ ಈ ಹಿಂದೆಯೇ ಹೇಳಿದೆ. ಇಷ್ಟು ಮಾತ್ರವಲ್ಲ, ಅವರಿಗೆ ‘ಸರಕಾರಿ ವ್ಯವಸ್ಥೆಯನ್ನು ಬುಡಮೇಲೆ ಮಾಡಿ ತಮ್ಮದೆ ಸರಕಾರವನ್ನು ಸ್ಥಾಪನೆ ಮಾಡಲಿಕ್ಕಿದೆ’, ಎಂದು ಕೂಡ ತನಿಖಾ ದಳ ಹೇಳಿತ್ತು. ‘ಪ್ರಧಾನಮಂತ್ರಿಗಳ ಹತ್ಯೆಯ ಸಂಚನ್ನು ರಚಿಸುವಷ್ಟು ನಕ್ಸಲರು ಮುಂದುವರಿದಿದ್ದಾರೆ’, ಎಂಬುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಅವರ ಹೋರಾಟದ ಸ್ವರೂಪ ಎಷ್ಟು ಗಂಭೀರ ಹಾಗೂ ದೇಶದ್ರೋಹಿ ಸ್ವರೂಪದ್ದಾಗಿದೆ’, ಎಂಬುದು ಅರಿವಾಗುತ್ತದೆ. ಅದರಿಂದ ೨೦೧೮ ರಲ್ಲಿ ಬಂಧಿಸಲ್ಪಟ್ಟಿರುವ ನಗರ ನಕ್ಸಲರ ಮೇಲಿನ ಆರೋಪದಲ್ಲಿ ದೇಶದ ವಿರುದ್ಧ ಯುದ್ಧವನ್ನು ಸಾರಿರುವ ಗಂಭೀರ ಕಲಮ್ ನೋಂದಣಿಯಾಗಿದೆ. ವಿಶೇಷವೆಂದರೆ ಕೋರೆಗಾವ್ ಭೀಮಾ ಪ್ರಕರಣದಲ್ಲಿ ಯಾವಾಗಲೂ ನಗರ ನಕ್ಸಲವಾದಿಗಳ ಪಕ್ಷವನ್ನು ವಹಿಸುವ ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷ ಶರದ ಪವಾರರು ನವೆಂಬರ್ ೨೦೨೧ ರಲ್ಲಿ ನಾಶಿಕ್‌ನಲ್ಲಿ ಒಂದು ಭಾಷಣದಲ್ಲಿ ನಗರ ನಕ್ಸಲವಾದಿಗಳ ಮೇಲೆ ಕ್ರಮತೆಗೆದುಕೊಳ್ಳುವ ವಿಷಯದಲ್ಲಿ ಸರಕಾರಕ್ಕೆ ಸೂಚನೆ ನೀಡಿದ್ದರು. ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರು ಕೆಲವು ವರ್ಷಗಳ ಹಿಂದೆ ನಗರ ನಕ್ಸಲವಾದದ ಕುರಿತು ಬರೆದಿರುವ ಒಂದು ದೊಡ್ಡ ಆಂಗ್ಲ ಪುಸ್ತಕ ಮತ್ತು ಅದರಲ್ಲಿನ ‘ಬುದ್ಧಾ ಇನ್ ಟ್ರಾಫಿಕ್ ಜಾಮ್’ ಈ ಹಿಂದೀ ಚಲನಚಿತ್ರವು ನಗರ ನಕ್ಸಲವಾದಿಗಳು ಮತ್ತು ನಕ್ಸಲವಾದಿಗಳ ಸಂಬಂಧವನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಆದ್ದರಿಂದ ಕೇಂದ್ರ ಸರಕಾರದ ಈ ಆಂದೋಲನವು ನಕ್ಸಲವಾದ ಅಥವಾ ಮಾವೋವಾದವನ್ನು ಸಂಪೂರ್ಣ ಕಿತ್ತೆಸೆಯಲು ಈಗ ಪ್ರಯತ್ನಿಸಬೇಕು, ಎಂದು ಜನರಿಗೆ ಅನಿಸುತ್ತದೆ !