ಲವ್ ಜಿಹಾದ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಲವ್ ಜಿಹಾದ್ ವಿರೋಧಿ ಕಾಯಿದೆಗೆ ವಿರೋಧವೇಕೆ ? – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತುವಿವಿಧ ರೀತಿಯ ‘ಜಿಹಾದ್’ಗಳಂತೆ ಲವ್ ಜಿಹಾದ್ ಕೂಡ ಜಿಹಾದಿಗಳು ಹಿಂದು ಸಮಾಜದ ವಿರೋಧದಲ್ಲಿ ಘೋಷಿಸಿದ ಯುದ್ಧವೇ ಆಗಿದೆ. ಸಾಮಾನ್ಯ ಮನೆಯ ಹಿಂದೂ ಯುವತಿಯಿಂದ ಹಿಡಿದು ಕ್ರೀಡಾಕ್ಷೇತ್ರ, ಚಿತ್ರರಂಗ ಮುಂತಾದ ಕ್ಷೇತ್ರದ ಅನೇಕ ಹಿಂದೂ ಯುವತಿ ಹಾಗೂ ಮಹಿಳೆಯರು ಇದು ವರೆಗೆ ಲವ್ ಜಿಹಾದ್ಗೆ ಬಲಿಯಾಗಿದ್ದಾರೆ. ಅವರನ್ನು ಮೋಸಗೊಳಿಸಲಾಗಿದೆ. ಹಾಗೆಯೇ ಅವರ ಹೃದಯ ವಿದ್ರಾವಕ ಶೋಷಣೆಯಾಗುತ್ತಿದೆ. ಇದರ ಅನೇಕ ಉದಾಹರಣೆಗಳು ವಿವಿಧ ಮಾಧ್ಯಮಗಳಿಂದ ಹೊರಬರುತ್ತಿವೆ. ‘ಲವ್ ಜಿಹಾದ್’ನಿಂದ ದೊಡ್ಡ ಪ್ರಮಾಣದಲ್ಲಿ ಭಾರತ ಮಾತ್ರವಲ್ಲದೇ ಭಾರತದ ಹೊರಗಿನ ಹಿಂದೂಗಳೊಂದಿಗೆ ಸಿಕ್ಖ್ ಯುವತಿಯರ ಮತಾಂತರವಾಗಿದ್ದು ಹಿಂದೂ ಕುಟುಂಬ ವ್ಯವಸ್ಥೆಯ ಮೇಲೆ ಇದರ ಗಂಭೀರ ಪರಿಣಾಮವಾಗುತ್ತಿದೆ. ಸದ್ಯ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್ ಸರಕಾರವು ‘ಲವ್ ಜಿಹಾದ್’ ವಿರುದ್ಧ ಕಾಯಿದೆಯನ್ನು ಮಾಡಿದೆ. ಲವ್ ಜಿಹಾದ್ ಅಸ್ತಿತ್ವದಲ್ಲಿ ಇಲ್ಲ, ಎಂದು ಹೇಳುವವರು ‘ಲವ್ ಜಿಹಾದ್’ ವಿರುದ್ಧದ ಕಾನೂನನ್ನು ಏಕೆ ವಿರೋಧಿಸುತ್ತಿದ್ದಾರೆ ?