ರಾಮನವಮಿ ಮೆರವಣಿಗೆಗಳ ಮೇಲೆ ದಾಳಿ ಮಾಡುವವವರು ಮೂರ್ತಿಭಂಜಕ ಮೊಘಲರ ವಂಶಜರು ! – ಹಿಂದೂ ಜನಜಾಗೃತಿ ಸಮಿತಿ

ದೇಶದಲ್ಲಿ ಧಾರ್ಮಿಕ ಸೌಹಾರ್ದತೆಗೆ ಭಂಗ ತರುವ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ !

ಶ್ರೀ. ರಮೇಶ ಶಿಂದೆ

ನಿನ್ನೆ ಶ್ರೀರಾಮನವಮಿಯ ದಿನದಂದು ದೇಶದ ರಾಜ್ಯಗಳಲ್ಲಿ ಉತ್ಸಾಹದಿಂದ ನೆರವೇರಿದ ರಾಮನವಮಿಯ ಮೆರವಣಿಗೆಗಳ ಮೇಲೆ ಕಲ್ಲು ತೂರಾಟದ ಮೂಲಕ ಭೀಕರ ದಾಳಿಗಳು ನಡೆದಿದ್ದವು. ಕರ್ನಾಟಕ, ಮಹಾರಾಷ್ಟ್ರ, ಗುಜರಾತ, ಗೋವಾ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಬಂಗಾಳ ಇತ್ಯಾದಿ ಅನೇಕ ರಾಜ್ಯಗಳಲ್ಲಿ ಮತಾಂಧ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಒಂದೆಡೆ, ದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಕೋಮುವಾದದ ಕಾರಣ ನೀಡುತ್ತಾ ಕಮ್ಯುನಿಸ್ಟರು, ಜಾತ್ಯತೀತರು ಮತ್ತು ಪ್ರಗತಿಪರರು ನಿರಂತರವಾಗಿ ಹಿಂದೂ ಸಂತರು ಮತ್ತು ಧರ್ಮಾಚಾರ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ, ಆದರೆ ಹಿಂದೂಗಳ ಹಬ್ಬದ ಸಮಯದಲ್ಲಿ ಮತಾಂಧರು ಮಾಡುವ ದಾಳಿಗಳ ಬಗ್ಗೆ ಈ ಮಂಡಳಿಯು ಮೌನಕ್ಕೆ ಜಾರಿದ್ದಾರೆ. ಮೂರ್ತಿಭಂಜಕ ಮೊಘಲರ ಇತಿಹಾಸ ಎಲ್ಲರಿಗೆ ತಿಳಿದಿದೆ. ಮೊಘಲರು ಭಾರತದಲ್ಲಿ ಲಕ್ಷಾಂತರ ದೇವಾಲಯಗಳ ಮೇಲೆ ದಾಳಿ ನಡೆಸಿ ನಾಶ ಮತ್ತು ಅಪವಿತ್ರಗೊಳಿಸಿದರು, ಅದೇ ರೀತಿ ಸಾವಿರಾರು ದೇವಾಲಯಗಳ ಮೇಲೆ ದಾಳಿ ಮಾಡಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿದರು. ಇತ್ತೀಚೆಗೆ ಶ್ರೀರಾಮಜನ್ಮಭೂಮಿ ಪ್ರಕರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿ ಶ್ರೀರಾಮ ಮಂದಿರದ ಶಂಕುಸ್ಥಾಪನೆ ನಡೆಯುತ್ತಿರುವ ಸಮಯದಲ್ಲಿ ಕೆಲವು ಮತಾಂಧರು ದೇಶಾದ್ಯಂತ ರಾಮನವಮಿಯಂದು ಮೆರವಣಿಗೆಗಳ ಮೇಲೆ ದಾಳಿ ಮಾಡಿದರು. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಕೇಂದ್ರ ಸರಕಾರ ಕೂಡಲೇ ಹಸ್ತಕ್ಷೇಪ ಮಾಡಬೇಕು. ಹಿಂದೂಗಳ ತಾಳ್ಮೆಯ ಅಂತ್ಯವನ್ನು ಯಾರೂ ನೋಡಬಾರದು. ರಾಮನವಮಿಯ ಮೆರವಣಿಗೆಯ ಮೇಲೆ ದಾಳಿ ಮಾಡಿದವರು ಮೂರ್ತಿಭಂಜಕ ಮೊಗಲರ ವಂಶಜರಾಗಿದ್ದು ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

ದೇಶದೆಲ್ಲೆಡೆ ಹಿಂದೂಗಳ ಹಬ್ಬಗಳ ಸಮಯದಲ್ಲಿ ಘಟಿಸುವ ಈ ಘಟನೆಗಳು ಖೇದಕರವಾಗಿದ್ದರೂ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಘಟನೆಗಳ ಬಗ್ಗೆ ವಿಶೇಷ ಚರ್ಚೆ ನಡೆಯುತ್ತಿಲ್ಲ. ಕಳೆದ ವಾರ ರಾಜಸ್ಥಾನದ ಕರೌಲಿಯಲ್ಲಿ ಯುಗಾದಿಯಂದು ಹಿಂದೂ ಹೊಸ ವರ್ಷದ ಮೆರವಣಿಗೆಯ ಮೇಲೆ ಮತಾಂಧರು ಭೀಕರ ದಾಳಿ ಮಾಡಿದರು. ಅಲ್ಲಿಯ ಅನೇಕ ಹಿಂದೂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮಾರಾಟ ಮಾಡಿ ಹೋಗುವ ಸಿದ್ಧತೆಯಲ್ಲಿದ್ದಾರೆ. ಅಂದರೆ 1990 ರಲ್ಲಿ ಕಾಶ್ಮೀರದಲ್ಲಿ ಹಿಂದೂಗಳೊಂದಿಗೆ ಏನಾಗಿತ್ತು ಅದು ಭಾರತದ ಇತರೆಡೆಯೂ ಆಗತೊಡಗಿದೆ. ನವರಾತ್ರಿ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಇದೇ ರೀತಿಯ ದಾಳಿಗಳು ನಡೆದಿವೆ.
‘ಜೆಎನ್‌ಯು’ದಲ್ಲಿ ರಾಕ್ಷಸ ಮಹಿಷಾಸುರನ ಜಯಂತಿಯನ್ನು ಆಚರಿಸುವುದರಿಂದ ಹಿಡಿದು, ‘ಭಾರತ ತೇರೆ ತುಕಡೆ ಹೊಂಗೆ |’ ಎಂಬ ಘೋಷಣೆಗಳನ್ನು ನೀಡಿದರೆ ಅಭ್ಯಂತರವಿಲ್ಲ; ಆದರೆ, ‘ಜೈ ಶ್ರೀರಾಮ್’ ಘೋಷಣೆ ಹಾಗೂ ರಾಮನವಮಿಯ ಪೂಜೆ ನಡೆಯುವುದಿಲ್ಲ. ನಿನ್ನೆ ಕೂಡ ಜೆಎನ್‌ಯುನಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿದ್ದವು. ದೇಶಾದ್ಯಂತ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಇದು ಯೋಜಿತ ಷಡ್ಯಂತ್ರವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಆದರೂ ಮಾನ್ಯ ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರಲ್ಲಿ ಈ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಸಮಿತಿಯು ಒತ್ತಾಯಿಸುತ್ತಿದೆ.