ಉತ್ತರಪ್ರದೇಶದಲ್ಲಿ ಮತಾಂಧನಿಂದ ಹಿಂದೂ ಹುಡುಗಿಯ ಅಪಹರಣ ಮಾಡಿ ಆಕೆಯ ಮತಾಂತರ

‘ಲವ್‌ ಜಿಹಾದಿ’ನ ಇನ್ನೊಂದು ಘಟನೆ ಬಹಿರಂಗ !

ಉತ್ತರಪ್ರದೇಶದಲ್ಲಿ ಲವ್‌ ಜಿಹಾದಿನ ಕಾನೂನು ಇರುವಾಗಲೂ ಉದ್ಧಟ ಮತಾಂಧರು ಹಿಂದೂ ಹುಡುಗಿಯರನ್ನು ಸಿಲುಕಿಸುತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಭಯ ನಿರ್ಮಾಣ ಮಾಡಲು ಕಠೋರ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !

ಲಖನೌ – ಉತ್ತರಪ್ರದೇಶದ ಫತೇಹಪೂರ ಜಿಲ್ಲೆಯಲ್ಲಿನ ಓರ್ವ ಹಿಂದೂ ಹುಡುಗಿಯನ್ನು ಮತಾಂಧನು ಅಪಹರಣ ಮಾಡಿ ಆಕೆಯನ್ನು ಬಾಂದಾ ಜಿಲ್ಲೆಯಲ್ಲಿನ ಮಸೀದಿಗೆ ಕರೆದುಕೊಂಡು ಹೋದನು. ಅಲ್ಲಿ ಮೌಲ್ವಿಯು ಬಲವಂತದಿಂದ ಆಕೆಯ ಮತಾಂತರ ಮಾಡಿದನು ಮತ್ತು ನಂತರ ಸಂಬಂಧಿತ ಮತಾಂಧ ತರುಣನೊಂದಿಗೆ ಆಕೆಯ ವಿವಾಹ ಮಾಡಿಸಿದನು. ಹುಡುಗಿಯ ತಂದೆಯು ನೀಡಿದ ದೂರಿನ ಅನುಸಾರ ಪೊಲೀಸರು ಹುಡುಗಿಯನ್ನು ಮುಕ್ತಗೊಳಿಸಿ ಆರೋಪಿ ಸಾಬಿರ ಮಿರ್ಝಾನನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯು ಮಾರ್ಚ ೩೧, ೨೦೨೨ರಂದು ಪರೀಕ್ಷೆಗೆ ಕುಳಿತುಕೊಳ್ಳಲು ಮನೆಯಿಂದ ಹೊರಟಿದ್ದಳು. ಆಕೆಯು ಮನೆಗೆ ಹಿಂತಿರುಗದಿರುವಾಗ ಆಕೆಯ ತಂದೆ ಗಾಝೀಪುರ ಪೊಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿದರು. ತಮ್ಮ ಮಗಳಿಗೆ ಆಮೀಷವೊಡ್ಡಿ ಅಪಹರಿಸಿರುವ ಸಾಧ್ಯತೆಯನ್ನು ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ಮೌಲ್ವಿಯ ವಿಚಾರಣೆಯನ್ನೂ ಮಾಡಲಾಗುವುದಾಗಿ ಅವರು ಹೇಳಿದರು. ಈ ಘಟನೆಯ ೩ ದಿನಗಳ ಹಿಂದೆ ಫತೇಹಪುರ ಜಿಲ್ಲೆಯಲ್ಲಿನ ಲಾಲೋಲಿ ಪೊಲೀಸ ಠಾಣೆಯಲ್ಲಿ ‘ಲವ್‌ ಜಿಹಾದಿ’ನ ಪ್ರಕರಣ ಎದುರಿಗೆ ಬಂದಿತ್ತು.