ಸರಕಾರಿ ನೌಕರ ಇರ್ಫಾನ ಶೇಖನ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದ ಅಲಹಾಬಾದ ಉಚ್ಚ ನ್ಯಾಯಾಲಯ !

೧ ಸಾವಿರ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಪ್ರಕರಣ

ಲಕ್ಷ್ಮಣಪುರಿ(ಉತ್ತರಪ್ರದೇಶ) – ೧ ಸಾವಿರ ಜನರನ್ನು ಇಸ್ಲಾಂಗೆ ಮತಾಂತರಿಸಿ ಭಾರತದ ವಿರುದ್ಧ ಯುದ್ಧ ಘೋಷಿಸಿದ ಆರೋಪ ವಿರುವ ಇರ್ಫಾನ ಶೇಖನನ್ನು ಕೇಂದ್ರ ಸರಕಾರಿ ನೌಕರರ ಜಾಮೀನು ಅರ್ಜಿಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ತಿರಸ್ಕರಿಸಿದೆ.

ನ್ಯಾಯಮೂರ್ತಿ ರಮೇಶ ಸಿನ್ಹಾ ಮತ್ತು ನ್ಯಾಯಮೂರ್ತಿ ಬೃಜರಾಜ ಸಿಂಹ ಇವರ ಖಂಡಪೀಠವು ಲಕ್ಷ್ಮಣಪುರಿಯ ಉಗ್ರ ನಿಗ್ರಹ ದಳದ (‘ಎ.ಟಿ.ಎಸ್.’ನ) ವಿಶೇಷ ನ್ಯಾಯಾಧೀಶರು ಅಕ್ಟೋಬರ ೨೦೨೧ ರಲ್ಲಿ ನೀಡಿದ ಆದೇಶವನ್ನು ಎತ್ತಿಹಿಡಿದು ಶೇಖನಿಗೆ ಜಾಮೀನು ನಿರಾಕರಿಸಿತು.

ಆರೋಪಿ ಇರ್ಫಾನ ಶೇಖ ಮತ್ತು ಸಹ ಆರೋಪಿ ಉಮರ ಗೌತಮ ಇವರು ಕೆಲವು ದೇಶದ್ರೋಹಿ ಗುಂಪು ಮತ್ತು ಐ.ಎಸ್.ಐ.ನ ಪಾಕಿಸ್ತಾನ ಗೂಢಚಾರ ಇಲಾಖೆಯ ಸೂಚನೆಯಂತೆ ವಿದೇಶಿ ಹಣವನ್ನು ಪಡೆದುಕೊಂಡು ಜನರನ್ನು ಇಸ್ಲಾಂಗೆ ಮತಾಂತರಗೊಳಿಸಿ ಭಾರತದ ವಿರುದ್ಧ ಯುದ್ಧಕ್ಕೆ ಕರೆನೀಡಿರುವುದನ್ನು ಪುಷ್ಟೀಕರಿಸುವ ಸಾಕಷ್ಟು ದಾಖಲೆಗಳು ತನಿಖಾಧಿಕಾರಿಗಳಿಗೆ ದೊರಕಿತ್ತು. ಆರೋಪಿಗಳು ಒಂದು ಗುಂಪನ್ನು ತಯಾರಿಸಿ ಸುಮಾರು ೧ ಸಾವಿರ ಜನರನ್ನು ಮತಾಂತರಗೊಳಿಸಿದ್ದರು.

‘ಸಾಂಕೇತಿಕ ಭಾಷಾ ಪ್ರಶಿಕ್ಷಣ ಮತ್ತು ಸಂಶೋಧನೆ ಕೇಂದ್ರ’ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇರ್ಫಾನ ಶೇಖ !

ಆರೋಪಿ ಇರ್ಫಾನ ಶೇಖ ‘ಸಾಂಕೇತಿಕ ಭಾಷಾ ಪ್ರಶಿಕ್ಷಣ ಮತ್ತು ಸಂಶೋಧನ ಕೇಂದ್ರ, ಹೊಸ ದೆಹಲಿ’ಯಲ್ಲಿ ದ್ವಿಭಾಷಿಕನೆಂದು ಕಾರ್ಯನಿರ್ವಹಿಸುತ್ತಿದ್ದನು. ಶೇಖನು ತನ್ನ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ಮೂಗ, ಕಿವುಡು ಜನರನ್ನು ಮತಾಂತರಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವುದು ವಿಚಾರಣೆಯಲ್ಲಿ ಸಾಬೀತಾಗಿದೆ.