ಮಸೀದಿಗಳ ಮೇಲಿನ ಬೋಂಗಾಗಳನ್ನು ತೆರವುಗೊಳಿಸದಿದ್ದರೆ ನಾವು ಧ್ವನಿವರ್ಧಕದಿಂದ ಭಜನೆಗಳನ್ನು ಹಾಕುತ್ತೇವೆ !

ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕರ ಎಚ್ಚರಿಕೆ

ಸರ್ವೋಚ್ಚ ನ್ಯಾಯಾಲಯದ ಆದೇಶವಿರುವಾಗಲೂ ಮಸೀದಿಗಳ ಮೇಲಿನ ಬೊಂಗಾಗಳ ಮೇಲೆ ಕಾರ್ಯಾಚರಣೆಯನ್ನು ಮಾಡದ ಪೊಲೀಸರು ಈ ಪ್ರಕರಣದಲ್ಲಿ ಶ್ರೀ. ಪ್ರಮೋದ ಮುತಾಲಿಕರವರಿಗೆ ತತ್ಪರತೆಯಿಂದ ನೊಟೀಸು ಕಳಿಸುವರು, ಎಂಬುದನ್ನು ಗಮನದಲ್ಲಿಡಿ !

ಮಸೀದಿಗಳ ಮೇಲಿನ ಭೋಂಗಾಗಳಿಂದಾಗಿ ನಾಗರೀಕರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ಈ ವಿಷಯದಲ್ಲಿ ಕೆಲವು ಜಾಗೃತ ನಾಗರೀಕರು ಸರಕಾರ ಮತ್ತು ಪೊಲೀಸರನ್ನು ಸತತವಾಗಿ ಬೆಂಬತ್ತುತ್ತಾರೆ; ಆದರೆ ಇದರಿಂದ ಈಗ ಯಾವುದೇ ಉಪಯೋಗವಿಲ್ಲ. ಆದುದರಿಂದಲೇ ಹಿಂದುತ್ವನಿಷ್ಠರಿಗೆ ಇಂತಹ ಭೂಮಿಕೆಯನ್ನು ತಳೆಯಬೇಕಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !

ಬೆಂಗಳೂರು (ಕರ್ನಾಟಕ) – ಶಬ್ದಮಾಲಿನ್ಯವನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶದ ಅನುಸಾರ ಮಸೀದಿಗಳ ಮೇಲಿನ ಭೋಂಗಾಗಳ ಮೇಲೆ ನಿರ್ಬಂಧ ಹೇರಬೇಕು. ಶಾಲೆ, ಆಸ್ಪತ್ರೆಗಳಂತಹ ಶಾಂತತೆಯ ಪರಿಸರದ ಬಗೆಗಿನ ಆದೇಶವನ್ನೂ ಮಸೀದಿಯ ವ್ಯವಸ್ಥಾಪಕರು ಮೂಲೆಗಟ್ಟುತ್ತಾರೆ. ಬೆಳಿಗ್ಗೆ ೫ ಗಂಟೆಗೆ ನಡೆಯುವ ಮಸೀದಿಯ ಭೋಂಗಾಗಳ ಮೇಲೆ ನಿರ್ಬಂಧ ಹೇರುವ ಬಗ್ಗೆ ಬೆಳಗಾವಿಯ ತಹಸೀಲ್ದಾರರ ಬಳಿ ಮನವಿ ಮಾಡಲಾಗಿದೆ. ಮಸೀದಿಗಳ ಭೋಂಗಾಗಳಿಂದ ತೊಂದರೆಯಾಗುತ್ತಿರುವುದಾಗಿ ದೂರು ನೀಡಿದ್ದರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅದರ ಮೇಲೆ ಯಾವುದೇ ಕಾರ್ಯಾಚರಣೆಯನ್ನು ಮಾಡಿಲ್ಲ. ನಾವು ಪ್ರಾರ್ಥನೆಯನ್ನು ವಿರೋಧಿಸುವುದಿಲ್ಲ ಭೋಂಗಾವನ್ನು ವಿರೋಧಿಸುತ್ತೇವೆ. ಇದರಿಂದಾಗಿ ಮಸೀದಿಗಳ ಮೇಲಿನ ಭೋಂಗಾಗಳನ್ನು ತೆಗೆಸದಿದ್ದರೆ ನಾವು ಬೆಳಿಗ್ಗೆ ಧ್ವನಿಕ್ಷೇಪಕಗಳನ್ನು ಬಳಸಿ ಭಜನೆ ಹಚ್ಚುತ್ತೇವೆ, ಎಂಬ ಎಚ್ಚರಿಕೆಯನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕರು ಕರ್ನಾಟಕ ಸರಕಾರಕ್ಕೆ ನೀಡಿದ್ದಾರೆ. ಈ ಹಿಂದೆಯೂ ಈ ಬಗ್ಗೆ ಮನವಿ ಮಾಡಲಾಗಿತ್ತು; ಆದರೆ ಇದರ ಕಡೆಗೆ ದುರ್ಲಕ್ಷಿಸಲಾಯಿತು. ಆದುದರಿಂದ ಮಸೀದಿಗಳ ವ್ಯವಸ್ಥಾಪಕರಿಗೆ ಈ ಬಗ್ಗೆ ತಿಳಿಸಿ ಭೋಂಗಾಗಳ ಬಳಕೆಯನ್ನು ತಡೆಯಬೇಕು’ ಎಂದು ಅವರು ಹೇಳಿದರು.

ಬಜರಂಗದಳದ ಸದಸ್ಯರಾದ ಭರತ ಶೆಟ್ಟಿಯವರ ಹೇಳಿಕೆಯ ಅನುಸಾರ ಮಸೀದಿಗಳ ಮೇಲಿನ ಭೋಂಗಾಗಳ ವಿರುದ್ಧದ ಆಂದೋಲನವು ಬೆಂಗಳೂರಿನ ಆಂಜನೇಯ ದೇವಸ್ಥಾನದಿಂದ ಆರಂಭವಾಗುವುದು ಮತ್ತು ಸಂಪೂರ್ಣ ರಾಜ್ಯದಾದ್ಯಂತ ಈ ಆಂದೋಲನವನ್ನು ನಡೆಸಲಾಗುವುದು.

ಕರ್ನಾಟಕದಲ್ಲಿನ ದೇವಸ್ಥಾನಗಳಲ್ಲಿ ಮುಂಜಾನೆ ನಾಮಜಪ ಮಾಡಲು ಅಭಿಯಾನ ನಡೆಸುವೆವು ! – ಕಾಳಿ ಮಠದ ಪೂಜಾರಿ ಯೋಗೇಶ್ವರ ಋಷಿಕುಮಾರ ಸ್ವಾಮಿ

ಕಾಳಿ ಮಠದ ಪೂಜಾರಿಗಳಾದ ಯೋಗೇಶ್ವರ ಋಷಿ ಕುಮಾರ ಸ್ವಾಮಿಗಳು, ರಾಜ್ಯದಲ್ಲಿನ ಎಲ್ಲ ದೇವಸ್ಥಾನಗಳಲ್ಲಿ ಮುಂಜಾನೆ ನಾಮಜಪ ಹಾಗೂ ಶ್ಲೋಕಪಠಣ ಮಾಡಲು ಒಂದು ಅಭಿಯಾನವನ್ನು ನಡೆಸಲಿದ್ದೇವೆ, ಎಂದು ಹೇಳಿದರು. ಕೆಲವು ವಾರಗಳ ಹಿಂದೆ ಅವರನ್ನು ಒಂದು ಮಸೀದಿಯನ್ನು ಕೆಡವಲು ಕರೆ ನೀಡಿರುವ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಮುಸಲ್ಮಾನರೊಂದಿಗೆ ಚರ್ಚಿಸಿ ಇದರ ಮೇಲೆ ಉತ್ತರ ಹುಡುಕಬಹುದು ! – ರಾಜ್ಯದ ಮಂತ್ರಿ ಕೆ. ಎಸ್‌. ಈಶ್ವರಪ್ಪಾ

ಕರ್ನಾಟಕದಲ್ಲಿನ ಮಂತ್ರಿ ಕೆ. ಎಸ್‌. ಈಶ್ವರಪ್ಪಾರವರೂ ಈ ಮನವಿಯನ್ನು ಸಮರ್ಥಿಸಿದರು. ಅವರು ‘ಮುಸಲ್ಮಾನರೊಂದಿಗೆ ಚರ್ಚಿಸಿ ಈ ಪ್ರಶ್ನೆಗೆ ಉತ್ತರ ಹುಡುಕಬಹುದು. ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳನ್ನು ಗಮನಕ್ಕೆ ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಮಹಾರಾಷ್ಟ್ರದಲ್ಲಿ ಮನಸೆ ಪ್ರಮುಖರಾದ ರಾಜ ಠಾಕ್ರೆಯವರು ಮಸೀದಿಗಳ ಮೇಲಿನ ಭೋಂಗಾಗಳನ್ನು ಇಳಿಸಲು ಮನವಿ ಮಾಡಿದ್ದರು. ಹಾಗೆಯೇ ಧ್ವನಿಕ್ಷೇಪಕಗಳಲ್ಲಿ ಹನುಮಾನ ಚಾಲಿಸಾ ಹಚ್ಚುವುದಾಗಿ ಹೇಳಿದ್ದರು. ಆದರೆ ಈ ರೀತಿಯಲ್ಲಿ ರಸ್ತೆಗಿಳಿದು ಹೋರಾಡುವ ಮಾತನಾಡಿದರೆ ಅದರಿಂದ ೨ ಸಮುದಾಯಗಳ ನಡುವೆ ಸಂಘರ್ಷ ನಿರ್ಮಾಣವಾಗಬಹುದು. ಆದುದರಿಂದಲೇ ಮುಸಲ್ಮಾನ ಬಾಂಧವರು ಮಸಿದಿಗೆ ಸೀಮಿತವಾಗಿ ಭೋಂಗಾಗಳನ್ನು ಬಳಸಿದರೆ ಅದರಿಂದ ಇತರ ನಾಗರೀಕರಿಗೆ ತೊಂದರೆಯಾಗುವುದಿಲ್ಲ’ ಎಂದು ಹೇಳಿದರು.

ಉಚ್ಚ ನ್ಯಾಯಾಲಯದ ನಿರ್ಣಯವಿದ್ದರೂ ಎಲ್ಲರಿಗೂ ಅದನ್ನು ಒಪ್ಪಬೇಕೆಂದು ಒತ್ತಾಯ ಮಾಡಲಾಗುವುದಿಲ್ಲ ! – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಭೋಂಗಾದ ಬಗ್ಗೆ ಉಚ್ಚ ನ್ಯಾಯಾಲಯದ ಆದೇಶವಿದೆ, ಆದರೆ ಅದನ್ನು ಒಪ್ಪಲು ಜನರ ಮೇಲೆ ಒತ್ತಡ ಹೇರಲು ಆಗುವುದಿಲ್ಲ. ಸಂಬಂಧಿತರೊಂದಿಗೆ ಚರ್ಚಿಸಿ ಅವರಿಗೆ ತಿಳಿಸಿ ಹೇಳಬೇಕಿದೆ. ಇದು ಕೇವಲ ಆಜಾನಿನ ಸಂದರ್ಭದಲ್ಲಿ ಅಲ್ಲ, ಎಲ್ಲ ಭೋಂಗಾಗಳ ಬಗ್ಗೆ ಇದೆ. ಆದುದರಿಂದ ಇದರ ಮೇಲೆ ಶೀಘ್ರವೇ ನಿರ್ಣಯ ತೆಗೆದುಕೊಳ್ಳುತ್ತೇವೆ, ಎಂಬ ಪ್ರತಿಕ್ರಿಯೆಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವ್ಯಕ್ತಪಡಿಸಿದ್ದಾರೆ.