ರಾಜ್ಯದಲ್ಲಿ ಮದರಸಾಗಳು ಕೇವಲ ಕಾಗದದಲ್ಲಿ ಮಾತ್ರ !
ಮದರಸಾಗಳ ಆಧುನೀಕರಣದ ಮೇಲೆ ಸರಕಾರವು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆ; ಆದರೆ ಅದರ ಫಲನಿಷ್ಪತ್ತಿ ಏನು ? ಇದರಲ್ಲಿ ಮದರಸಾಗಳಿಗೆ ಸಿಗುವ ಹಣವನ್ನು ನುಂಗಲಾಗುತ್ತಿರುವುದೂ ಬಹಿರಂಗವಾಗುತ್ತಿದೆ. ಈ ಎಲ್ಲ ಸಂಗತಿಗಳನ್ನು ನೋಡಿ ಮದರಸಾಗಳಿಗೆ ಬೀಗ ಜಡಿಯಿರಿ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಸುವ ಬಗ್ಗೆ ರಾಜ್ಯಸರಕಾರವು ಆದೇಶ ನೀಡಿದೆ. ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಕೇವಲ ಸರಕಾರಿ ಕಾಗದಗಳ ಮೇಲೆಯೇ ಮದರಸಾಗಳು ಕಂಡುಬರುತ್ತಿದ್ದು ಪ್ರತ್ಯಕ್ಷದಲ್ಲಿ ಅವುಗಳ ಅಸ್ತಿತ್ವ ಇಲ್ಲದಿರುವ ದೂರುಗಳು ದೊರೆತಿವೆ. ಅನಂತರ ಈ ಆದೇಶವನ್ನು ನೀಡಲಾಗಿದೆ.
ಕೇಂದ್ರಸರಕಾರದಿಂದ ಮದರಸಾಗಳ ಆಧುನೀಕರಣಕ್ಕಾಗಿ ಒಂದು ವಿಶೇಷ ಯೋಜನೆಯನ್ನು ನಡೆಸಲಾಗುತ್ತದೆ. ಇದರ ಅನ್ವಯ ಅಲ್ಲಿನ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಪ್ರತಿಯೊಂದು ಮದರಸಾದಲ್ಲಿ ೩ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಅದರಲ್ಲಿ ಪದವಿಧರ ಶಿಕ್ಷಕನಿಗೆ ೬ ಸಾವಿರ, ಪದವ್ಯೋತ್ತರ ಪದವಿಧರ ಶಿಕ್ಷಕನಿಗೆ ೧೨ ಸಾವಿರ ರೂಪಾಯಿ ನೀಡಲಾಗುತ್ತದೆ. ಉತ್ತರಪ್ರದೇಶ ಸರಕಾರವೂ ಈ ಶಿಕ್ಷಕರಿಗೆ ಹೆಚ್ಚುವರಿ ಮಾನಧನವನ್ನು ನೀಡುತ್ತದೆ. ಸದ್ಯ ಮದರಸಾಗಳಲ್ಲಿ ಒಟ್ಟೂ ೨೧ ಸಾವಿರದ ೧೨೬ ಶಿಕ್ಷಕರು ಕಲಿಸುತ್ತಿದ್ದಾರೆ. ಕೇವಲ ಸರಕಾರಿ ಕಾಗದಗಳ ಮೇಲೆಯೇ ನಡೆಯುತ್ತಿರುವ ಮದರಸಾಗಳ ಈ ಪ್ರಶ್ನೆಯು ಹಳೆಯದಾಗಿದೆ. ೨೦೧೩ರಲ್ಲಿಯೂ ರಾಜ್ಯದಲ್ಲಿ ಕೇವಲ ಕಾಗದದಲ್ಲಿಯೇ ಅಸ್ತಿತ್ವದಲ್ಲಿದ್ದ ೧೧೮ ಕಾನೂನು ಬಾಹಿರ ಮದರಸಾಗಳು ಕಂಡುಬಂದಿದ್ದವು.