ಲಂಡನ್‌ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮೇಲೆ ದಾಳಿ

ಇಮ್ರಾನ್ ಖಾನ್ ಇವರ ಪಕ್ಷದ ಕಾರ್ಯಕರ್ತರ ಕೈವಾಡ ಇರುವ ಆರೋಪ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಇವರ ಮೇಲೆ ಏಪ್ರಿಲ್ ೨ ರಂದು ಲಂಡನ್‌ನಲ್ಲಿ ದಾಳಿ ನಡೆದಿದೆ. ಈ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರ ‘ಪಾಕಿಸ್ತಾನ ತಹರಿಕೆ-ಎ-ಇಂಸಾನ’ (ಪಿಟಿಅಯ್) ಪಕ್ಷದ ಕಾರ್ಯಕರ್ತರ ಕೈವಾಡವಿರುವುದು ಹೇಳಲಾಗುತ್ತಿದೆ. ಈ ದಾಳಿಯಲ್ಲಿ ಶರೀಫ್ ಇವರ ಅಂಗರಕ್ಷಕರು ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿನ ಆಡಳಿತ ಪಕ್ಷದ ವಿರುದ್ಧ ಅವಿಶ್ವಾಸಮತ ಪ್ರಸ್ತಾಪದ ಮತದಾನದ ಹಿಂದಿನದಿನ ಈ ಘಟನೆ ನಡೆದಿದೆ. ಪಾಕಿಸ್ತಾನದಲ್ಲಿನ ವಿರೋಧಿ ಪಕ್ಷದಿಂದ ನವಾಜ್ ಷರೀಫ್ ಇವರ ಸಹೋದರ ಶಹಬಾಜ್ ಶರೀಫ್ ಇವರು ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.

ಈ ದಾಳಿಯ ಕುರಿತು ಪ್ರತಿಕ್ರಿಯಿಸುತ್ತಾ ನವಾಜ್ ಷರೀಫ್ ಇವರ ಮಗಳು ಮರಿಯನ್, ಹಿಂಸಾಚಾರವನ್ನು ಅವಲಂಬಿಸುವ ಪಿಟಿಐ ನಾಯಕರನ್ನು ಬಂಧಿಸಿ ಜೈಲಿಗೆ ಕಳಿಸಬೇಕು, ಇದರಲ್ಲಿ ಇಮ್ರಾನ್ ಖಾನ್ ಇವರೂ ಸೇರಿದ್ದಾರೆ. ಅವರ ವಿರುದ್ಧ ದೇಶದ್ರೋಹದ ಅಪರಾಧ ದಾಖಲಿಸಬೇಕು ಎಂದು ಹೇಳಿದರು.