ಗಾಝಿಯಾಬಾದ (ಉತ್ತರಪ್ರದೇಶ) – ಗಾಝಿಯಾಬಾದಿನಲ್ಲಿನ ಸಂಪೂರ್ಣ ಜಿಲ್ಲೆಯಲ್ಲಿ ಚೈತ್ರ ನವರಾತ್ರಿಯ ಸಮಯದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಲಿಖಿತ ಆದೇಶವನ್ನು ಮಹಾಪೌರ ಆಶಾ ಶರ್ಮಾರವರು ನೀಡಿದ್ದರು; ಆದರೆ ಕೇವಲ ೧೨ ಗಂಟೆಗಳಲ್ಲಿಯೇ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಆದೇಶವು ಕೇವಲ ದೇವಸ್ಥಾನದ ಸುತ್ತಮುತ್ತಲಿರುವ ಅಂಗಡಿಗಳಿಗಾಗಿ ಇದೆ ಎಂಬ ಸುಧಾರಿತ ಆದೇಶವನ್ನು ಅವರು ನೀಡಿದ್ದಾರೆ. ಪ್ರಸಾರಮಾಧ್ಯಮಗಳು ಸಂಪೂರ್ಣ ಜಿಲ್ಲೆಯಲ್ಲಿ ನಿರ್ಬಂಧ ಹೇರಿರುವ ತಪ್ಪು ವಾರ್ತೆಯನ್ನು ಪ್ರಸಾರ ಮಾಡಿದ್ದಾರೆ ಎಂಬ ಹೇಳಿಕೆಯನ್ನೂ ಅವರು ಈ ಸಮಯದಲ್ಲಿ ನೀಡಿದ್ದಾರೆ.
೧. ಮಹಾಪೌರ ಶರ್ಮಾರವರು ಮಾತನಾಡುತ್ತ, ನಮಗೆ ರಾಜ್ಯ ಸರಕಾರದಿಂದ ಆದೇಶ ಬಂದ ನಂತರ ದೇವಸ್ಥಾನದ ಬಳಿ ಇರುವ ಎಲ್ಲ ಅಂಗಡಿಗಳನ್ನು ಮುಚ್ಚಿಸಿದ್ದೇವೆ. ಮಾಂಸ ಮತ್ತು ಮದ್ಯದ ನಡುವೆ ಯಾವುದೇ ತುಲನೆಯಾಗಲು ಸಾಧ್ಯವಿಲ್ಲ. ಆದುದರಿಂದ ಮದ್ಯದ ಅಂಗಡಿಗಳ ಬಗ್ಗೆ ನಮ್ಮ ಯಾವುದೇ ಆಕ್ಷೇಪವಿಲ್ಲ, ಎಂದು ಹೇಳಿದರು.
೨. ಅಂಗಡಿ ಮಾಲಿಕರು ಹೇಳುವಂತೆ, ಈ ಹಿಂದೆ ಯಾವಾಗಲೂ ಇಂತಹ ಆದೇಶವನ್ನು ನೀಡಲಾಗಿಲ್ಲ. ಅಂಗಡಿಗಳ ಮೇಲೆ ನಿರ್ಬಂಧ ಹೇರಲೇ ಬೇಕಾಗಿದ್ದರೆ ಮದ್ಯದ ಅಂಗಡಿಗಳ ಮೇಲೆಯೂ ನಿರ್ಬಂಧವನ್ನು ಹೇರಬೇಕಿತ್ತಯ. ಅವುಗಳನ್ನು ಹಾಗೆಯೇ ಬಿಡಲಾಗಿದೆ.