‘ಕಣ್ಣುಗಳಿಗೆ ಉಪಾಯ ಮಾಡಿದಾಗ ನಿಜವಾದ ತೊಂದರೆಗಳು ಹೇಗೆ ಪ್ರಕಟವಾಗುತ್ತವೆ ಹಾಗೂ ಕಣ್ಣುಗಳಿಗೆ ಉಪಾಯ ಮಾಡುವುದರ ಮಹತ್ವ’, ಇದರ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳರಿಗೆ ಕಲಿಯಲು ಸಿಕ್ಕಿದ ವಿಷಯಗಳು !

ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಪರಸ್ಪರ ಜೋಡಿಸಿ ಮತ್ತು ಮಣಿಕಟ್ಟುಗಳನ್ನು ತಲೆಗೆ ಎರಡೂ ಬದಿಗಳಿಗೆ ತಾಗಿಸಿ ಗೋಪುರದಂತೆ ಮಾಡಿದ ಮುದ್ರೆಯನ್ನು ತೋರಿಸುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

 

ಎಡ ಅಂಗೈಯನ್ನು ಭೂಮಿಯ ದಿಕ್ಕಿನಲ್ಲಿಟ್ಟು ಅದರ ಮೇಲೆ ಬಲ ಅಂಗೈಯನ್ನು ಆಕಾಶದ ದಿಕ್ಕಿಗೆ ಇಟ್ಟು ಮಾಡಿದ ಮುದ್ರೆ ತೋರಿಸುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

‘೧೫.೧೧.೨೦೨೧ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ನನಗೆ ವಿದೇಶದಲ್ಲಿರುವ ಓರ್ವ ಸಂತರಿಗೆ ಆಧ್ಯಾತ್ಮಿಕ ಉಪಾಯವನ್ನು ಮಾಡಲು ಹೇಳಿದರು. ಆ ಸಂತರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬಂದು ಅವರು ಇತರರೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದ್ದರು. ಈ ವಿಷಯವನ್ನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಿದಾಗ ಅವರು ಇದು ಕೆಟ್ಟ ಶಕ್ತಿಗಳ ತೊಂದರೆಯಿಂದಾಗಿ ಆಗುತ್ತಿದ್ದು ಅದಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡಬೇಕೆಂದು ಹೇಳಿದರು’.

೧. ತೊಂದರೆ ಆಗುತ್ತಿರುವ ಸಂತರಿಗೆ ತಲೆಯಿಂದ ಹೊಟ್ಟೆಯ ವರೆಗೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವಿದೆ ಎಂದು ಅರಿವಾಯಿತು ಹಾಗೂ ಮೊದಲು ಅದನ್ನು ದೂರಗೊಳಿಸಲಾಯಿತು

ನಾನು ಆ ಸಂತರಿಗೆ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಮಾಡಲು ಆರಂಭಿಸಿದೆನು. ಅದಕ್ಕಾಗಿ ನಾನು ಮೊದಲು ಅವರ ಸ್ಮರಣೆ ಮಾಡಿದೆನು. (‘ದೂರದಲ್ಲಿರುವ ಯಾವುದಾದರೊಬ್ಬ ವ್ಯಕ್ತಿಗೆ ಉಪಾಯವನ್ನು ಮಾಡುವಾಗ ವ್ಯಕ್ತಿಯನ್ನು ಸ್ಮರಣೆ ಮಾಡಿದಾಗ ಆ ವ್ಯಕ್ತಿಯ ಸ್ಪಂದನಗಳು ನಮಗೆ ನಮ್ಮ ಶರೀರದಲ್ಲಿ ಅರಿವಾಗುತ್ತದೆ. ಆಗ ನಾವು ನಮ್ಮ ಮೇಲೆ ಉಪಾಯ ಮಾಡಿದರೆ ಆ ವ್ಯಕ್ತಿಗೆ ಉಪಾಯವಾಗಿ ಅವರ ತೊಂದರೆಯು ದೂರವಾಗುತ್ತದೆ’. – ಸಂಕಲನಕಾರರು)

ನಾನು ಆ ಸಂತರಿಗಾಗಿ ಉಪಾಯವನ್ನು ಕಂಡುಹಿಡಿದಾಗ ನನಗೆ ಅವರ ತಲೆಯಿಂದ ಹೊಟ್ಟೆಯವರೆಗೆ ತೊಂದರೆದಾಯಕ ಶಕ್ತಿಯ ಆವರಣವಿರುವುದು ಅರಿವಾಯಿತು. ನಾನು ಜಪವನ್ನು ಕಂಡು ಹಿಡಿದಾಗ ನನಗೆ ‘ನಿರ್ಗುಣ’ ಈ ನಾಮಜಪ ಸಿಕ್ಕಿತು. ಆವರಣವನ್ನು ತೆಗೆಯಲು ನಾನು ಎರಡೂ ಕೈಗಳ ಮಧ್ಯಮ ಬೆರಳುಗಳನ್ನು ಜೋಡಿಸಿ ಮಣಿಕಟ್ಟನ್ನು ತಲೆಯ ಎರಡೂ ಬದಿಗೆ ತಗಲಿಸಿ ಗೋಪುರದ ಆಕಾರದಲ್ಲಿ ಮುದ್ರೆಯನ್ನು ಮಾಡಿದೆನು. (ಛಾಯಾಚಿತ್ರ ಕ್ರ. ೧) ಅನಂತರ ಆ ಮುದ್ರೆಯನ್ನು ನನ್ನ ಕುಂಡಲಿನಿ ಚಕ್ರಗಳ ಮೇಲಿಂದ ಆರಂಭಿಸಿ ‘ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲೆ ಹೀಗೆ ೭-೮ ಸಲ ತಿರುಗಿಸಿದೆನು. ಆಗ ನಾನು ‘ನಿರ್ಗುಣ’ ಈ ನಾಮಜಪವನ್ನು ಮಾಡಿದೆನು. ಆ ಸಂತರ ಮೇಲಿನ ಆವರಣವನ್ನು ದೂರಗೊಳಿಸಲು ನನಗೆ ೧೦ ನಿಮಿಷ ತಗಲಿತು.

೨. ಮುಕ್ಕಾಲು ಗಂಟೆ ಉಪಾಯ ಮಾಡಿದ ನಂತರ ಸಂತರ ಎಲ್ಲ ಚಕ್ರಗಳಲ್ಲಿನ ತೊಂದರೆದಾಯಕ ಶಕ್ತಿ ದೂರವಾಗಿರುವುದು ಅರಿವಾಯಿತು

ಆ ಸಂತರ ಮೇಲಿನ ಆವರಣವನ್ನು ತೆಗೆದ ನಂತರ ಮುಂದಿನ ಉಪಾಯಕ್ಕಾಗಿ ನಾನು ಒಂದು ಕೈಯ ಅಂಗೈಯನ್ನು ನನ್ನ ಆಜ್ಞಾಚಕ್ರದ ಮೇಲೆ ಮತ್ತು ಇನ್ನೊಂದು ಕೈಯ ಅಂಗೈಯನ್ನು ಮಣಿಪುರಚಕ್ರದ ಮೇಲೆ ಇಟ್ಟುಕೊಂಡು ಮುಕ್ಕಾಲು ಗಂಟೆ ‘ನಿರ್ಗುಣ’ ಈ ನಾಮಜಪವನ್ನು ಮಾಡುತ್ತಾ ಅವರಿಗಾಗಿ ಉಪಾಯ ಮಾಡಿದೆನು. ಈ ಉಪಾಯ ಮಾಡಿದ ನಂತರ ಆ ಸಂತರ ಆ ಎರಡೂ ಚಕ್ರಗಳ ಮೇಲಿನ ತೊಂದರೆದಾಯಕ ಶಕ್ತಿಯು ಸಂಪೂರ್ಣವಾಗಿ ದೂರವಾಗಿರುವುದು ನನಗೆ ಅರಿವಾಯಿತು. ಅನಂತರ ನನಗೆ ಅವರ ಯಾವುದೇ ಚಕ್ರಗಳ ಮೇಲೆ ತೊಂದರೆ ಇರುವುದು ಅರಿವಾಗಲಿಲ್ಲ.

೩. ಸಂತರ ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸಲು ಆರಂಭಿಸಿದಾಗ ಮೊದಲು ಅರಿವಾಗದ ಅವರ ಅನಾಹತ ಚಕ್ರದ ಮೇಲಿನ ತೊಂದರೆಯು ಹೊರಹೊಮ್ಮಿತು ಹಾಗೂ ಕೆಟ್ಟ ಶಕ್ತಿಗಳು ಆ ಸಂತರ ಅನಾಹತ ಚಕ್ರದ ಮೇಲಿನ ತೊಂದರೆಯನ್ನು ಅಪ್ರಕಟವಾಗಿಟ್ಟು ಮೋಸಗೊಳಿಸುತ್ತಿರುವುದು ಅರಿವಾಯಿತು

ನಾನು ಕೊನೆಯ ಉಪಾಯವೆಂದು ಕಣ್ಣುಗಳ ಮೇಲೆ ಉಪಾಯ ಮಾಡಲು ಆರಂಭಿಸಿದೆನು. (ಎಲ್ಲ ಚಕ್ರಗಳ ಮೇಲಿನ ತೊಂದರೆದಾಯಕ ಶಕ್ತಿಯು ದೂರವಾದರೂ ಕಣ್ಣುಗಳ ಮೇಲೆ ಸ್ವಲ್ಪ ತೊಂದರೆದಾಯಕ ಶಕ್ತಿಯು ಬಾಕಿಯಿತ್ತು. ಅದನ್ನು ದೂರಗೊಳಿಸಿದ ನಂತರವೇ ಉಪಾಯ ಪೂರ್ಣವಾಗುತ್ತದೆ. – ಸಂಕಲನಕಾರರು) ಕಣ್ಣುಗಳ ಮೇಲೆ ಉಪಾಯ ಮಾಡಲು ನನಗೆ ಮಹಾಶೂನ್ಯ ಈ ನಾಮಜಪ ಸಿಕ್ಕಿತು. ನಾನು ನನ್ನ ಒಂದು ಕೈಯ ಅಂಗೈಯನ್ನು ಎರಡೂ ಕಣ್ಣುಗಳಿಗೆ ಮತ್ತು ಇನ್ನೊಂದು ಕೈಯ ಅಂಗೈಯನ್ನು ತಲೆಯ ಹಿಂದೆ ಇಟ್ಟು ೧೦ ನಿಮಿಷ ನಾಮಜಪದ ಉಪಾಯ ಮಾಡಿದೆನು. ಈ ಉಪಾಯ ಮಾಡಿದಾಗ ನನಗೆ ಆ ಸಂತರ ತೊಂದರೆ ಕಡಿಮೆಯಾಗುವ ಬದಲು ಹೆಚ್ಚಾಗಿದೆ ಎಂದು ಅರಿವಾಯಿತು; ಆದ್ದರಿಂದ ನಾನು ಚಕ್ರಗಳ ಮೇಲೆ ಕೈಗಳ ಬೆರಳನ್ನು ತಿರುಗಿಸಿ ‘ಯಾವ ಚಕ್ರದಲ್ಲಿ ತೊಂದರೆಯ ಅರಿವಾಗುತ್ತದೆ?’, ಎಂದು ನೋಡಿದೆನು. ಆಗ ನನಗೆ ಆ ಸಂತರ ಅನಾಹತಚಕ್ರದ ಮೇಲೆ ತೊಂದರೆದಾಯಕ ಶಕ್ತಿಯ ಒತ್ತಡವು ದೊಡ್ಡ ಪ್ರಮಾಣದಲ್ಲಿರುವುದು ಅರಿವಾಯಿತು. ಆ ಸಂತರ ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸುತ್ತಿರುವಾಗ ಮೊದಲು ಅರಿವಾಗದಿರುವ ಅವರ ಅನಾಹತಚಕ್ರದ ಮೇಲಿನ ತೊಂದರೆಯು ಹೊರಹೊಮ್ಮಿತು. ಇದನ್ನು ನಾನು ಮೊತ್ತಮೊದಲ ಬಾರಿಗೆ ಅನುಭವಿಸುತ್ತಿದ್ದೇನೆ. ಇದರಿಂದ ‘ಕೆಟ್ಟ ಶಕ್ತಿಗಳು ಹೇಗೆ ಮೋಸಗೊಳಿಸುತ್ತವೆ’, ಎಂಬುದು ಅರಿವಾಯಿತು. ಕೆಟ್ಟ ಶಕ್ತಿಗಳು ಆ ಸಂತರ ಅನಾಹತಚಕ್ರದ ಮೇಲಿನ ತೊಂದರೆಯನ್ನು ಅಪ್ರಕಟವಾಗಿಟ್ಟು ನನ್ನನ್ನು ಮೋಸಗೊಳಿಸಿದ್ದವು; ಆದರೆ ಕಣ್ಣುಗಳ ಮೇಲೆ ಉಪಾಯ ಮಾಡಿದಾಗ ಅವುಗಳ ಮೋಸಗಾರಿಕೆ ಬೆಳಕಿಗೆ ಬಂತು.

೪. ಸಂತರ ಅನಾಹತ ಚಕ್ರದಲ್ಲಿ ಕೆಟ್ಟ ಶಕ್ತಿಗಳು ಸಂಗ್ರಹಿಸಿದ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸಲು ಒಂದುವರೆ ಗಂಟೆ ಉಪಾಯ ಮಾಡಬೇಕಾಯಿತು ಹಾಗೂ ಈ ತೊದರೆದಾಯಕ ಶಕ್ತಿಯಿಂದಲೇ ಆ ಸಂತರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬಂದಿದ್ದವು.

ಅನಂತರ ನಾನು ಉಪಾಯ ಮಾಡಲು ಒಂದು ಕೈಯ ಅಂಗೈಯನ್ನು ನನ್ನ ಆಜ್ಞಾಚಕ್ರದ ಮೇಲೆ ಮತ್ತು ಇನ್ನೊಂದು ಕೈಯ ಅಂಗೈಯನ್ನು ಅನಾಹತ ಚಕ್ರದ ಮೇಲಿಟ್ಟು ‘ನಿರ್ಗುಣ’ ಈ ನಾಮಜಪವನ್ನು ಆರಂಭಿಸಿದೆನು. ಆ ಸಂತರ ಅನಾಹತಚಕ್ರದಲ್ಲಿ ಕೆಟ್ಟ ಶಕ್ತಿಗಳು ಎಷ್ಟು ತೊಂದರೆದಾಯಕ ಶಕ್ತಿಯನ್ನು ಸಂಗ್ರಹಿಸಿದ್ದವು ಎಂದರೆ, ಅದನ್ನು ದೂರಗೊಳಿಸಲು ನನಗೆ ಒಂದುವರೆ ಗಂಟೆ ಉಪಾಯ ಮಾಡಬೇಕಾಯಿತು. ಅನಾಹತಚಕ್ರದಲ್ಲಿನ ಈ ತೊಂದರೆದಾಯಕ ಶಕ್ತಿಯಿಂದಲೇ ಆ ಸಂತರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬಂದಿತ್ತು.

ಉಪಾಯದಿಂದ ಆರಂಭದಲ್ಲಿ ಆವಶ್ಯಕವಿದ್ದ ‘ನಿರ್ಗುಣ’ ಈ ನಾಮಜಪವು ಬದಲಾಗಿ ಅದು ‘ಮಹಾಶೂನ್ಯ’ ಮತ್ತು ಅನಂತರ ‘ಶೂನ್ಯ’ವಾಯಿತು. (‘ಶೂನ್ಯ’, ‘ಮಹಾಶೂನ್ಯ’ ಮತ್ತು ‘‘ ಈ ಕ್ರಮದಲ್ಲಿ ಮೇಲು ಮೇಲಿನ ಹಂತದ ನಾಮಜಪಗಳಿವೆ. ತೊಂದರೆಯ ಸ್ವರೂಪವು ವಿಪರೀತವಾಗಿದ್ದರೆ, ಈ ನಾಮಜಪವನ್ನು ಮಾಡಬೇಕಾಗುತ್ತದೆ. ಆ ನಾಮಜಪವನ್ನು ಮಾಡುತ್ತಾ ಉಪಾಯ ಮಾಡಿದಾಗ ತೊಂದರೆಯ ಸ್ವರೂಪವು ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ಆವಶ್ಯಕವಿರುವ ನಾಮಜಪದ ಸ್ತರವೂ ಕಡಿಮೆಯಾಗುತ್ತಾ ಹೋಗುತ್ತದೆ, ಅಂದರೆ ‘ನಿರ್ಗುಣ’, ‘ಮಹಾಶೂನ್ಯ’ ಮತ್ತು ‘‘ ಅನಂತರ ‘ಶೂನ್ಯ’ ಹೀಗೆ ಆಗುತ್ತದೆ. ತೊಂದರೆಯನ್ನು ಇನ್ನೂ ಕಡಿಮೆಗೊಳಿಸಲು ಮುಂದೆ ಪಂಚಮಹಾಭೂತಗಳ ನಾಮಜಪಗಳನ್ನು ಮಾಡಬೇಕಾಗುತ್ತದೆ. – ಸಂಕಲನಕಾರರು)

೫. ಕೆಟ್ಟ ಶಕ್ತಿಗಳು ಸಂತರ ತಲೆಯ ಮೇಲೆ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಬಿಡುತ್ತಿರುವುದು ಅರಿವಾಗುವುದು ಹಾಗೂ ಆಗ ಎಡ ಅಂಗೈಯನ್ನು ಭೂಮಿಯ ದಿಕ್ಕಿನಲ್ಲಿಟ್ಟು ಅದರ ಮೇಲೆ ಬಲ ಅಂಗೈಯನ್ನು ಆಕಾಶದ ದಿಕ್ಕಿಗೆ ಇಟ್ಟು ಉಪಾಯ ಮಾಡಿದಾಗ ಮೇಲಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ನಿಲ್ಲಿಸಲು ಸಾಧ್ಯವಾಯಿತು

ಆ ಸಂತರಿಗೆ ಉಪಾಯ ಮಾಡುತ್ತಿರುವಾಗ ‘ಕೆಟ್ಟ ಶಕ್ತಿಗಳು ಆ ಸಂತರಿಗೆ ಇನ್ನೂ ಯಾವ ಯಾವ ರೀತಿಯಲ್ಲಿ ತೊಂದರೆ ಕೊಡುತ್ತಿವೆ ?’, ಎಂಬುದು ನನಗೆ ಅರಿವಾಯಿತು. ಆ ಸಂತರು ವಾಸಿಸುತ್ತಿದ್ದ ಕೋಣೆಯಲ್ಲಿ ನನಗೆ ಬಹಳ ಪ್ರಮಾಣದಲ್ಲಿ ತೊಂದರೆದಾಯಕ ಶಕ್ತಿಯ ಒತ್ತಡದ ಅರಿವಾಗುತ್ತಿತ್ತು. ಮೊದಲು ಅದು ನನಗೆ ಅರಿವಾಗಿರಲಿಲ್ಲ. ಕೆಟ್ಟ ಶಕ್ತಿಗಳು ಆ ಸಂತರ ತಲೆಗೆ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಬಿಡುತ್ತಿದ್ದವು. ಆದ್ದರಿಂದ ನಾನು ಕೆಲವು ಗಂಟೆಗಳ ಕಾಲ ಉಪಾಯ ಮಾಡಿಯೂ ಆ ಸಂತರ ತೊಂದರೆಯು ಕಡಿಮೆಯಾಗುತ್ತಿರಲಿಲ್ಲ. ಮೇಲಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ತಡೆಗಟ್ಟಲು ನಾನು ನನ್ನ ಎಡ ಅಂಗೈಯನ್ನು ಭೂಮಿಯ ದಿಕ್ಕಿಗೆ ಇಟ್ಟು ಅದರ ಮೇಲೆ ನನ್ನ ಬಲ ಅಂಗೈಯನ್ನು ಆಕಾಶದ ದಿಕ್ಕಿಗೆ ಮುಖಮಾಡಿ ಇಟ್ಟೆನು. (ಛಾಯಾಚಿತ್ರ ಕ್ರ. ೨) ಅದರಿಂದ ಉಪಾಯವಾಗಿ ನನ್ನ ಆಕಾಶದ ದಿಕ್ಕಿಗಿರುವ ಅಂಗೈಯಿಂದ ಮೇಲಿಂದ ಸಂತರ ಕೋಣೆಗೆ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವು ನಿಂತಿತು ಹಾಗೂ ಅದೇ ಸಮಯದಲ್ಲಿ ಭೂಮಿಯ ದಿಕ್ಕಿಗೆ ಮಾಡಿದ ಅಂಗೈಯಿಂದ ಕೋಣೆಗೆ ಉಪಾಯವಾಗಿ ಅಲ್ಲಿನ ತೊಂದರೆದಾಯಕ ಶಕ್ತಿಯು ನಷ್ಟವಾಯಿತು. ಆಗ ನಾನು ‘ನಿರ್ಗುಣ’ ಈ ನಾಮಜಪವನ್ನು ಮಾಡಿದೆನು. ನಾನು ಈ ಉಪಾಯವನ್ನು ೧೦ ನಿಮಿಷ ಮಾಡಬೇಕಾಯಿತು. ಅನಂತರ ಕೋಣೆಯಲ್ಲಿ ಮೊದಲು ಅರಿವಾಗುತ್ತಿದ್ದ ಒತ್ತಡವು ಇಲ್ಲದಂತಾಯಿತು.

೬. ಸಂತರು ವಾಸಿಸುತ್ತಿದ್ದ ಕೋಣೆಯಲ್ಲಿನ ಒತ್ತಡವು ದೂರವಾದ ನಂತರ ಆ ಸಂತರ ಅನಾಹತಚಕ್ರದ ಮೇಲೆ ಉಪಾಯ ಮಾಡಿದೆನು ಹಾಗೂ ಕೊನೆಗೆ ಅವರ ಕಣ್ಣುಗಳಿಗೂ ಉಪಾಯ ಮಾಡಿದೆನು, ಅನಂತರ ಆ ಸಂತರಿಗೆ ಆಗುತ್ತಿದ್ದ ತೊಂದರೆಯು ದೂರವಾಗಿರುವುದು ಅರಿವಾಯಿತು.

ಸಂತರು ವಾಸಿಸುತ್ತಿದ್ದ ಕೋಣೆಯಲ್ಲಿನ ಒತ್ತಡವು ಇಲ್ಲದಂತಾದಾಗ ನಾನು ಆ ಸಂತರ ಅನಾಹತಚಕ್ರದ ಮೇಲೆ ಉಪಾಯ ಮಾಡಲು ಪುನಃ ಜಪವನ್ನು ಹುಡುಕಿದೆನು. ನನಗೆ ‘ಹೆಬ್ಬೆರಳಿನ ಮೂಲಕ್ಕೆ ತರ್ಜನಿಯ ತುದಿಯನ್ನು ತಾಗಿಸುವುದು’, ಈ ಆಕಾಶತತ್ತ್ವದ ಮುದ್ರೆ ಮತ್ತು ‘ಆಕಾಶದೇವತೆಯ ನಾಮಜಪ’, ಸಿಕ್ಕಿತು. ನಾನು ಎರಡೂ ಕೈಗಳಿಂದ ಆ ಮುದ್ರೆಯನ್ನು ಮಾಡಿ ಒಂದು ಕೈಯ ಮುದ್ರೆಯಿಂದ ಆಜ್ಞಾಚಕ್ರದ ಮೇಲೆ ಮತ್ತು ಇನ್ನೊಂದು ಕೈಯ ಮುದ್ರೆಯಿಂದ ಅನಾಹತಚಕ್ರದ ಮೇಲೆ ನ್ಯಾಸವನ್ನು ಮಾಡಿದೆನು ಮತ್ತು ಆಕಾಶದೇವತೆಯ ನಾಮಜಪವನ್ನು ಮಾಡುತ್ತಾ ಉಪಾಯವನ್ನು ಮಾಡಿದೆನು. ಈ ಉಪಾಯವನ್ನು ೩೦ ನಿಮಿಷ ಮಾಡಿದಾಗ ಆ ಸಂತರ ಅನಾಹತಚಕ್ರದ ಮೇಲಿನ ತೊಂದರೆಯು ಸಂಪೂರ್ಣ ದೂರವಾಯಿತು. ಅನಂತರ ನಾನು ಆ ಸಂತರ ಕಣ್ಣುಗಳಿಗೆ ಉಪಾಯವಾಗಲು ನನ್ನ ಕಣ್ಣುಗಳಿಗೆ ಉಪಾಯ ಮಾಡಿದೆನು ಹಾಗೂ ಅಲ್ಲಿನ ತೊಂದರೆದಾಯಕ ಶಕ್ತಿಯನ್ನೂ ದೂರಗೊಳಿಸಿದೆನು. ಅನಂತರ ನನಗೆ ಆ ಸಂತರಿಗೆ ಆಗುತ್ತಿದ್ದ ತೊಂದರೆಯು ಸಂಪೂರ್ಣ ದೂರವಾಗಿರುವುದು ಅರಿವಾಯಿತು.

೭. ಆ ಸಂತರಿಗಾಗಿ ಉಪಾಯ ಪೂರ್ಣಗೊಂಡಾಗ ಅದರ ಪರಿಣಾಮವು ಒಂದು ಗಂಟೆಯ ಒಳಗೇ ನೋಡಲು ಸಿಕ್ಕಿತು, ಅಂದರೆ ಅವರು ಇತರರನ್ನು ತಾನಾಗಿಯೇ ಸಂಪರ್ಕ ಮಾಡಿದರು

ಕಳೆದ ಎರಡು ದಿನಗಳಿಂದ ಯಾರನ್ನೂ ಸಂಪರ್ಕಿಸದ ಆ ಸಂತರು ಉಪಾಯ ಪೂರ್ಣವಾದ ನಂತರ ಒಂದು ಗಂಟೆಯ ಒಳಗೆ ತಾನಾಗಿಯೇ ಇತರರನ್ನು ಸಂಪರ್ಕಿಸಿದರು. ಇದರಿಂದ ಈಗ ಅವರ ಮನಃಸ್ಥಿತಿ ಚೆನ್ನಾಗಿರುವುದು ಅರಿವಾಯಿತು.

ಕೃತಜ್ಞತೆ : ‘ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದಲೇ ನಾನು ಆ ಸಂತರಿಗೆ ಉಪಾಯ ಮಾಡಲು ಸಾಧ್ಯವಾಯಿತು ಹಾಗೂ ನನಗೆ ಉಪಾಯಗಳಿಗೆ ಸಂಬಂಧಿಸಿದ  ಹೊಸ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ಇದಕ್ಕಾಗಿ ನಾನು ಅವರ ಚರಣಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೨.೨೦೨೨)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.