ಹೊಲಿಗೆಯ, ಕಸೂತಿಯ ವಿನ್ಯಾಸ ಅಥವಾ ಬಟ್ಟೆಗಳ ಇತರ ಎಳೆಗಳು ಹೊರಗೆ ಬಂದಿದ್ದರೆ ಸಾಧಕರು ಅವುಗಳನ್ನು ಕೂಡಲೇ ಕತ್ತರಿಸಬೇಕು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

“ಹೆಚ್ಚಿನ ಬಾರಿ ಸಾಧಕರು ಮತ್ತು ಸಾಧಕಿಯರು ಉಪಯೋಗಿಸುತ್ತಿರುವ ಬಟ್ಟೆಗಳ ದಾರಗಳು ಹೊರಗೆ ಬಂದಿರುತ್ತವೆ. ಅಂದರೆ ಸಾಧಕರ ಜುಬ್ಬಾ, ಪೈಜಾಮಾ, ಧೋತರ, ಇತರ ಉಡುಪುಗಳು, ಹಾಗೆಯೇ ಸಾಧಕಿಯರ ಸೀರೆಗಳು ಅಥವಾ ಉಡುಪುಗಳು ಈ ಬಟ್ಟೆಗಳಿಂದ ಹೊಲಿಗೆಯ, ಅದೇ ರೀತಿ ಬಟ್ಟೆಯ ಎಳೆಗಳು ಹೊರಗೆ ಬರುತ್ತವೆ. ಕೆಲವೊಮ್ಮೆ ಬಟ್ಟೆಗಳ ಮೇಲೆ ಕಸೂತಿ ಅಥವಾ ಜರಿಯ ದಾರಗಳಿಂದ ನೇಯ್ಗೆಯನ್ನು ಮಾಡಿದ್ದರೆ ಅದರಿಂದಲೂ ದಾರಗಳು ಹೊರಗೆ ಬಂದಿರುವುದು ಕಾಣಿಸುತ್ತದೆ. ಈ ರೀತಿ ಎಳೆಗಳು ಹೊರಗೆ ಬರುವುದರಿಂದ ಆ ಬಟ್ಟೆಗಳು ಚೆನ್ನಾಗಿ ಕಾಣುವುದಿಲ್ಲ, ಹಾಗೆಯೇ ಆ ಬಟ್ಟೆಗಳ ಸ್ಪಂದನಗಳೂ ಹಾಳಾಗುತ್ತವೆ. ಆದ್ದರಿಂದ ಸಾಧಕರು ಬಟ್ಟೆಗಳ ಹೊರಗೆ ಬಂದ ಎಳೆಗಳನ್ನು ಕೂಡಲೇ ಕತ್ತರಿಸಬೇಕು. ಇತರರ ಬಟ್ಟೆಗಳ ಎಳೆಗಳು ಹೊರಗೆ ಬಂದಿರುವುದು ಕಾಣಿಸಿದರೆ ಅವರಿಗೂ ಎಳೆಗಳನ್ನು ಕತ್ತರಿಸುವ ಬಗ್ಗೆ ಹೇಳಬೇಕು. ‘ಈ ರೀತಿಯ ಕೃತಿಗಳ ಮೂಲಕ ಈಶ್ವರನ ‘ವ್ಯವಸ್ಥಿತ’ವೆಂಬ ಗುಣವನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ’, ಎಂದು ಸಾಧಕರು ಗಮನದಲ್ಲಿಡಬೇಕು”.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೩.೨೦೨೨)