ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚು !

  • ರಾಷ್ಟ್ರೀಯ ತನಿಖಾ ದಳಕ್ಕೆ ದೊರೆತ ಪತ್ರದಿಂದ ಮಾಹಿತಿ ಬಹಿರಂಗ !

  • ಮೋದಿಯವರ ಹತ್ಯೆಗಾಗಿ ದೇಶದಾದ್ಯಂತ ೨೦ ಭೂಗತ ಗುಂಪುಗಳು ಕಾರ್ಯನಿರತ !

ಪ್ರಧಾನಿಗಳ ಹತ್ಯೆಯ ಸಂಚು ರೂಪಿಸುತ್ತಿರುವ ಭಯೋತ್ಪಾದಕರನ್ನು ರೆಂಬೆಕೊಂಬೆ ಸಹಿತ ಹುಡುಕಿ ಅವರನ್ನು ನಾಶಗೊಳಿಸಲು ಸರಕಾರವು ಈಗಲಾದರೂ ಅತ್ಯಂತ ಕಠೋರ ಹೆಜ್ಜೆ ಇಡಬೇಕು ! ಇದರೊಂದಿಗೆ ಭಯೋತ್ಪಾದನೆಯ ನಿರ್ಮಾಣ ಮಾಡುವ ಪಾಕಿಸ್ತಾನವನ್ನೂ ನಾಶ ಮಾಡಬೇಕು, ಇದೇ ಭಯೋತ್ಪಾದನೆಯನ್ನು ಮುಗಿಸುವ ಏಕೈಕ ಉಪಾಯವಾಗಿದೆ !

ಮುಂಬಯಿ – ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವಕ್ಕೆ ಅಪಾಯವಿರುವ ಮಾಹಿತಿಯು ಎದುರಿಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದ ಮುಂಬೈ ಶಾಖೆಗೆ ಬಂದಿರುವ ಒಂದು ‘ಈ-ಮೇಲ್‌’ನಲ್ಲಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಪ್ರಧಾನಿ ಮೋದಿಯವರ ಮೇಲೆ ಆಕ್ರಮಣ ಮಾಡಲು ಭಯೋತ್ಪಾದಕರ ೨೦ ಭೂಗತ ಗುಂಪುಗಳು (ಸ್ಲೀಪರ್‌ ಸೆಲ್‌) ಸಕ್ರೀಯವಾಗಿರುವ ಬಗ್ಗೆ ಈ ‘ಈ-ಮೇಲ್‌’ನಲ್ಲಿ ನಮೂದಿಸಲಾಗಿದೆ.

‘ಆರ್‌.ಡಿ.ಎಕ್ಸ್‌’ನ ಸಹಾಯದಿಂದ ಸ್ಫೋಟ ನಡೆಸಿ ಪ್ರಧಾನಿ ಮೋದಿಯವರ ರಕ್ತಪಾತ ಮಾಡಿಸಲಾಗುವುದು’ ಎಂದು ಇದರಲ್ಲಿ ನಮೂದಿಸಲಾಗಿದೆ. ಸದ್ಯ ದೇಶದಲ್ಲಿನ ತನಿಖಾದಳದಿಂದ ಈ ‘ಈ-ಮೇಲ್‌’ನ ಸಂದರ್ಭದಲ್ಲಿ ತನಿಖೆ ನಡೆಯುತ್ತಿದೆ.

(ಸೌಜನ್ಯ – Tv9 Kannada)

ನಮ್ಮ ಪರಿಚಯವು ಬಹಿರಂಗವಾಗಿ ನಮ್ಮ ಸಂಚು ನಿಷ್ಫಲವಾಗಬಾರದೆಂದು ‘ಈ-ಮೇಲ್‌’ ಮಾಡಿದ ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂಬಂಧಿತ ವ್ಯಕ್ತಿಯು ಹೇಳಿದ್ದಾನೆ. ‘ಈ-ಮೇಲ್‌’ನಲ್ಲಿ ಹೇಳಿದಂತೆ ಆಕ್ರಮಣದ ಸಂಪೂರ್ಣ ಯೋಜನೆಯು ಸಿದ್ಧವಾಗಿದೆ. ಈ ‘ಮೇಲ್‌’ ಕಳುಹಿಸಿರುವ ವ್ಯಕ್ತಿಗೆ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿರುವುದಾಗಿ ಹೇಳಲಾಗುತ್ತಿದೆ.