ಗಂಗಾವರಮ್ ಇಲ್ಲಿ ರಾಮನ ದೇವಸ್ಥಾನದಲ್ಲಿ ನುಗ್ಗಿ ಮತಾಂಧ ಕ್ರೈಸ್ತರಿಂದ ಏಸುವಿಗೆ ಪ್ರಾರ್ಥನೆ !

ಕ್ರೈಸ್ತ ಬಹುಸಂಖ್ಯಾತದತ್ತ ಸಾಗುತ್ತಿರುವ ಆಂಧ್ರಪ್ರದೇಶದಲ್ಲಿನ ಘಟನೆ !

ಭಾಜಪ ನಾಯಕ ಸುನಿಲ ದೇವಧರ ಇವರು ಈ ಘಟನೆಯ ವಿಡಿಯೋ ಟ್ವೀಟ್ ಮಾಡಿದ್ದಾರೆ !

ಪೊಲೀಸರಿಂದ ನಿರಾಕರಣೆ !

* ಈ ಘಟನೆ ಸತ್ಯವಾಗಿದ್ದರೆ, ಇದರಿಂದ ಮತಾಂಧ ಕ್ರೈಸ್ತರ ಧೈರ್ಯ ಎಷ್ಟು ಹೆಚ್ಚಿದೆ ಇದು ಗಮನಕ್ಕೆ ಬರುತ್ತದೆ. ಭವಿಷ್ಯದಲ್ಲಿ ಆಂಧ್ರಪ್ರದೇಶ ಕ್ರೈಸ್ತ ಬಹುಸಂಖ್ಯಾತರಾದರೆ ಆಶ್ಚರ್ಯವೇನೂ ಇಲ್ಲ. ಸ್ವಾತಂತ್ರ್ಯವೀರ ಸಾವರಕರ ಇವರು ಹೇಳಿರುವ ಪ್ರಕಾರ, `ಮತಾಂತರವೇ ರಾಷ್ಟ್ರಾತಂರವಾಗಿದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳೇ, ಈಗಲಾದರೂ ಸಂಘಟಿತರಾಗಿ ಮತ್ತು ಹಿಂದೂರಾಷ್ಟ್ರ ಸ್ಥಾಪನೆ ಮಾಡಿರಿ !- ಸಂಪಾದಕರು 

* ಕ್ರೈಸ್ತ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರು ಆಂಧ್ರಪ್ರದೇಶದಲ್ಲಿ ಕ್ರೈಸ್ತರಿಗೆ ಮತಾಂತರಕ್ಕಾಗಿ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿರುವ ಆರೋಪ ಮೇಲಿಂದ ಮೇಲೆ ಕೇಳಿಬರುತ್ತಿದೆ. ಈ ರೀತಿ ಇರುವಾಗ ಅವರ ಪೊಲೀಸರಿಂದಲೇ `ಈ ಘಟನೆ ನಡೆದೇ ಇಲ್ಲ’, ಎಂದು ಹೇಳುತ್ತಾ ವಾದವನ್ನು ನಿರಾಕರಿಸಿರುವುದು ಆಶ್ಚರ್ಯವೇನೂ ಇಲ್ಲ ?- ಸಂಪಾದಕರು 

ಭಾಗ್ಯನಗರ (ಆಂಧ್ರಪ್ರದೇಶ) – ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕ್ರೈಸ್ತ ಮಿಶನರಿಗಳ ಕೋಟೆಗಳಾಗುತ್ತೇವೆ. ಕಳೆದ ವರ್ಷ ಆಂಧ್ರ ಪ್ರದೇಶದಲ್ಲಿ ಆಢಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಾಂಸದ ರಘು ರಾಮಕೃಷ್ಣ ರಾಜು ಇವರು ರಾಜ್ಯದಲ್ಲಿ ಕ್ರೈಸ್ತರ ಸಂಖ್ಯೆ ಶೇ. 25 ರಷ್ಟು ಆಗಿದೆ ಎಂದು ಹೇಳಿರುವುದು, ಇದು ಉದಾಹರಣೆ ಸಹಿತವಾಗಿ ಸ್ಪಷ್ಟಪಡಿಸಿದ್ದರು. ಈಗ ರಾಜ್ಯದಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಗಂಗಾವರಮ್ ಇಲ್ಲಿ ಕ್ರೈಸ್ತ ಮಿಶನರಿಗಳು ಒಂದು ದೇವಸ್ಥಾನದಲ್ಲಿ ನುಗ್ಗಿ ಏಸುವಿಗೆ ಪ್ರಾರ್ಥನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 31 ರಂದು ಈ ಸಂದರ್ಭದ ಒಂದು ವಿಡಿಯೋ `ವೈರಲ್'(ದೊಡ್ಡ ಪ್ರಮಾಣದಲ್ಲಿ ಪ್ರಸಾರ) ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಭಾಜಪದ ಉಸ್ತುವಾರಿ ಮತ್ತು ರಾಷ್ಟ್ರೀಯ ಸಚಿವ ಸುನಿಲ ದೇವಧರ ಇವರು ಒಂದು ವಿಡಿಯೋ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಒಬ್ಬ ಪಾದ್ರಿಯ ನೇತೃತ್ವದಲ್ಲಿ ಕ್ರೈಸ್ತರ ಒಂದು ಗುಂಪು ಗಂಗಾವರಮ್ ಗ್ರಾಮದ ರಾಮ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿರುವುದು ಕಾಣುತ್ತಿದೆ. ಎಲ್ಲಿ ಪಾದ್ರಿ ಕುಳಿತಿದ್ದನು ಅವರ ಹಿಂದೆ ಪ್ರಭು ಶ್ರೀರಾಮಚಂದ್ರನ ಗರ್ಭಗುಡಿಯಲ್ಲಿನ ಮೂರ್ತಿ ಕಾಣುತ್ತಿದೆ. ಚರ್ಚ್ ಅದರ ಗಡಿದಾಟಿ ಕಾನೂನುಬಾಹಿರ ಪದ್ಧತಿಯಿಂದ ರಾಮ ದೇವಸ್ಥಾನದಲ್ಲಿ ನಿಯಂತ್ರಣ ಪಡೆದಿದ್ದಾರೆ ಮತ್ತು ಕ್ರೈಸ್ತ ಪರಂಪರೆಯ ಪಾಲನೆ ಮಾಡಿರುವ ಆರೋಪವೂ ಅವರು ಮಾಡಿದ್ದಾರೆ. ದೇವಧರ ಇವರು ಎಲ್ಲಾ ಕ್ರೈಸ್ತ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿಯವರ ಮೇಲೆ `ಅವರ ರಾಜ್ಯದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮದಲ್ಲಿ ಮತಾಂತರಗೊಳಿಸುವ ಸಂಚು ದೊಡ್ಡಪ್ರಮಾಣದಲ್ಲಿ ನಡೆಸುತ್ತಿದ್ದಾರೆ’, ಎಂಬ ಆರೋಪ ಕೂಡ ದೇವಧರ ಇವರು ಮಾಡಿದ್ದಾರೆ. ಭಾಜಪದ ಹಿರಿಯ ನಾಯಕ ವಿಷ್ಣು ವರ್ಧನ್ ರೆಡ್ಡಿ ಇವರು ಕೂಡ ಈ ಘಟನೆಯನ್ನು ಖಂಡಿಸುತ್ತಾ ಆಂಧ್ರಪ್ರದೇಶದಲ್ಲಿ ಹಿಂದೂಗಳಿಗೆ ಯಾವುದೇ ಸ್ಥಾನ ಇಲ್ಲವೆಂದು ಹೇಳಿದ್ದಾರೆ.

`ಸಾಂಸದ ದೇವಧರ ಇವರ ವಾದದಲ್ಲಿ ಸತ್ಯಾಂಶವಿಲ್ಲ !’ (ಅಂತೆ) – ಪೊಲೀಸರು

ಇನ್ನೊಂದು ಕಡೆಗೆ ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಅಧಿಕಾರಿ ರವೀಂದ್ರನಾಥ ಬಾಬು ಇವರು ಸಾಂಸದ ದೇವಧರ ಇವರು ಮಾಡಿರುವ ಆರೋಪ ಹುರುಳಿಲ್ಲ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಹೇಳಿದ್ದಾರೆ, ಎಂಬ ಮಾಹಿತಿಯನ್ನು `ದ ಹಿಂದೂ’ ನೀಡಿದೆ.