ಕರ್ನಾಟಕದಲ್ಲಿ ಸಮಸ್ತ ಹಿಂದೂ ಸಂಘಟನೆಯ ಸಂಘದ ಒತ್ತಾಯ !
ಹಿಂದೂಗಳಿಗೆ ಹಲಾಲ್ ಮಾಂಸಗಳ ಮೇಲೆ ನಿಷೇಧ ಹೇರಬೇಕೆಂಬ ಆಗ್ರಹ !
ವಾಸ್ತವದಲ್ಲಿ ಹಿಮದೂಗಳು ಈ ರೀತಿಯ ಬೇಡಿಕೆಯನ್ನು ಮಾಡದೇ ಸರಕಾರ ತಾವಾಗಿಯೇ ಈ ವ್ಯವಸ್ಥೆಯನ್ನು ಮಾಡುವುದು ಅಗತ್ಯವಾಗಿದೆ !
ಬೆಂಗಳೂರು – ಹಿಂದೂಗಳು ಯುಗಾದಿಯ ಮರುದಿನ ನಡೆಯುವ ‘ಹೊಸತೊಡಕು’ ಹಬ್ಬದಲ್ಲಿ ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಬಳಸಬೇಕು. ಹಲಾಲ್ ಮಾಂಸದ ಮೂಲಕ ಆಗಲೇ ಅವರು ಅಲ್ಲಾಹ್‌ನಿಗೆ ಅರ್ಪಣೆ ಮಾಡಿದ್ದನ್ನು, ಅಂದರೆ ಎಂಜಲು ಮಾಡಿದ ಮಾಂಸವನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮದ ವಿರುದ್ಧವಾಗಿದೆ. ಹಾಗಾಗಿ ಸರಕಾರವು ಹಿಂದೂಗಳ ಧಾರ್ಮಿಕ ಹಕ್ಕನ್ನು ಗಮನದಲ್ಲಿರಿಸಿ ರಾಜ್ಯದ ಎಲ್ಲ ಕಡೆ ‘ಜಟ್ಕಾ’ ಮಾಂಸವನ್ನು ಸಿಗುವ ಹಾಗೆ ವ್ಯವಸ್ಥೆಯನ್ನು ಮಾಡಬೇಕು ಎಂದು ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು ಪತ್ರಿಕಾಗೋಷ್ಠಿಯ ಮೂಲಕ ಆಗ್ರಹಿಸುತ್ತಿದೆ.
Activist group Hindu Janajagruti Samiti demands a ban on halal meat, says it is a step towards making India an Islamic state https://t.co/ZV78ZIsSAP
— OpIndia.com (@OpIndia_com) March 28, 2022
ಹಲಾಲ್ ಪ್ರಮಾಣಪತ್ರದ ಮೇಲೆ ನಿರ್ಬಂಧ ಹೇರಿ !
ಈ ಒಕ್ಕೂಟದಿಂದ, ಇಂದು ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳ ಮೇಲೆ ಬಹಿಷ್ಕಾರ ಹಾಕುವ ಬಗ್ಗೆ ಒತ್ತಾಯಿಸಲಾಗುತ್ತಿರುವುದು ಕೇಳಿಬರುತ್ತಿದೆ. ಹಲಾಲ್ ಪ್ರಮಾಣಪತ್ರದ ಮಾಧ್ಯಮದಿಂದ ದೇಶದ ಅರ್ಥವ್ಯವಸ್ಥೆಗೆ ಸಮಾನವಾದ ಸ್ವಾತಂತ್ರ್ಯವು ಇಸ್ಲಾಮಿ ಅರ್ಥವ್ಯವಸ್ಥೆಯನ್ನು ನಿರ್ಮಿಸುವ ಸಂಚನ್ನು ಇಸ್ಲಾಮಿ ಸಂಘಟನೆಗಳು ಮಾಡುತ್ತಿದೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಾರಕವಾಗಿದೆ. ದೇಶದಲ್ಲಿ ಆಹಾರ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರ ನೀಡಲು ಎಸ್.ಎ.ಐ.(ಫುಡ್ ಸೇಫ್ಟೀ ಆಂಡ್ ಸ್ಟೆಂಡರ್ಡ ಅಥಾರಟಿ ಆಫ್ ಇಂಡಿಯಾ – ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಮತ್ತು ಎಫ್.ಡಿ.ಎ. (ಫುಡ್ ಆಂಡ್ ಅಡಮಿನಿಸ್ಟ್ರೇಶನ್ – ಅನ್ನ ಮತ್ತು ಔಷಧ ಆಡಳಿತ) ನಂತಹ ಅಧಿಕೃತ ಸರಕಾರಿ ಸಂಸ್ಥೆಗಳು ಇರುವಾಗ ಹಣ ತೆಗೆದುಕೊಂಡು ಇಸ್ಲಾಮಿ ಪದ್ದತಿ ಪ್ರಮಾಣಪತ್ರ ನೀಡುವುದು ಇದು ಪ್ರಜಾಪ್ರಭುತ್ವದ ವಿರುದ್ಧವಾಗಿದೆ ಮತ್ತು ದೇಶದ ಬಹುಸಂಖ್ಯಾತ ಉದ್ಯಮಿಗಳ ಮೇಲೆ, ವಂಶಪರಂಪರೆಯಿಂದ ವ್ಯಪಾರ ಮಾಡುವ ಹಿಂದೂ ಖಾಟಿಕ ಸಮುದಾಯದ ಮೇಲೆ ಮಾಡಿರುವ ಅನ್ಯಾಯವಾಗಿದೆ. ತಮ್ಮ ಆರ್ಥಿಕ ಹಿತದ ರಕ್ಷಣೆ ಮಾಡಲು ಸಂವಿಧಾನವು ಕಲಂ ೪೬ ರ ಉಲ್ಲಂಘನೆಯಾಗಿದೆ. ಅದಕ್ಕಾಗಿ ಹಲಾಲ್ ಪ್ರಮಾಣಪತ್ರದ ಮೇಲೆ ಶೀಘ್ರವಾಗಿ ನಿರ್ಬಂಧ ಹೇರಬೇಕು.
‘ಹಲಾಲ್’ ಮಾಂಸ ಎಂದರೇನು? * ಜಟ್ಕಾ ಮಾಂಸ ಎಂದರೇನು? |
೧. ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
೨. ಶ್ರೀ. ಪ್ರಶಾಂತ ಸಂಬರಗಿ, ಉದ್ಯಮಿಗಳು
೩. ಶ್ರೀ. ಅಮರ, ಕಾರ್ಯದರ್ಶಿ, ಶ್ರೀರಾಮ ಸೇನೆ, ಕರ್ನಾಟಕ
೪. ಶ್ರೀ ಮುನಿ ಗೌಡ, ಸಂಸ್ಥಾಪಕರು, ಹಿಂದವಿ ಜಟ್ಕಾ ಮೀಟ್, ಬೆಂಗಳೂರು.
೫. ಶ್ರೀ. ಗೋಪಾಲಕೃಷ್ಣ, ಪ್ರಾಂತ್ಯ ಪ್ರಮುಖರು, ಬೆಂಗಳೂರು ಉತ್ತರ ಭಾಗ, ಹಿಂದೂ ಜಾಗರಣ ವೇದಿಕೆ
೬. ಶ್ರೀ. ಸುರೇಶ ಜೈನ್, ಅಧ್ಯಕ್ಷರು, ಅಖಿಲ ಭಾರತ ಹಿಂದೂ ಮಹಾಸಭಾ
೭. ಶ್ರೀ. ಎಸ್. ಭಾಸ್ಕರನ್, ಅಧ್ಯಕ್ಷರು, ವಿಶ್ವ ಸನಾತನ ಪರಿಷತ್, ಬೆಂಗಳೂರು.
೮. ಸೌ. ಶುಭಾ ಬಿ ನಾಯ್ಕ, ವಕೀಲರು, ಬೆಂಗಳೂರು ಉಚ್ಚ ನ್ಯಾಯಾಲಯ.