ಶ್ರೀನಗರದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಈ ಹಿಂದೆ ಪತ್ರಕರ್ತನಾಗಿದ್ದ ಒಬ್ಬ ಭಯೋತ್ಪಾದಕ !

* ಕಾಶ್ಮೀರದಲ್ಲಿ ಎಷ್ಟೇ ಭಯೋತ್ಪಾದಕರ ಹತ್ಯೆಯಾದರೂ, ಪಾಕಿಸ್ತಾನವನ್ನು ನಾಶಗೊಳಿಸದೇ ಇದ್ದರೆ ಅಲ್ಲಿಯ ಭಯೋತ್ಪಾದನೆ ನಷ್ಟವಾಗುವುದಿಲ್ಲ !- ಸಂಪಾದಕರು 

ಶ್ರೀನಗರ (ಜಮ್ಮೂ-ಕಾಶ್ಮೀರ) – ಇಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಮಾರ್ಚ 29 ರಂದು ಜರುಗಿದ ಚಕಮಕಿಯಲ್ಲಿ ಲಷ್ಕರ-ಎ- ತೋಯಬಾ ಸಂಘಟನೆಯ ರಯೀಸ ಅಹ್ಮದ್ ಭಟ ಮತ್ತು ಹಿಲಾಲ ಅಹ್ ರಾಹಾ ಹೆಸರಿನ 2 ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ರಯೀಸ ಈ ಹಿಂದೆ ಪತ್ರಕರ್ತನೆಂದು ಕೆಲಸ ಮಾಡುತ್ತಿದ್ದನು. ಆತ ಅನಂತನಾಗದಲ್ಲಿ `ಹಾಲಿ ನ್ಯೂಸ ಸರ್ವಿಸ್’ ಹೆಸರಿನಿಂದ ಆನ್‍ಲೈನ ವೃತ್ತ ಒತ್ರಿಕೆಯನ್ನು ನಡೆಸುತ್ತಿದ್ದನು. (ಕಾಶ್ಮೀರದಲ್ಲಿ ಭಯೋತ್ಪಾದಕ ವಿಚಾರ ಸರಣಿಯ ಜನರು ವಾರ್ತಾ ಜಾಲತಾಣವನ್ನು ನಡೆಸುತ್ತಾರೆ, ಇದು ನಾಚಿಕೆಗೇಡು ! – ಸಂಪಾದಕರು) ಅವನು ಹಿಂದಿನ ವರ್ಷ ಅಗಸ್ಟ್‍ನಲ್ಲಿ ಲಷ್ಕರ್-ಎ-ತೋಯಬಾ ಸೇರಿದ್ದನು.