ಪಾಕಿಸ್ತಾನದಲ್ಲಿ ಕನಸಿನಲ್ಲಿ ಧರ್ಮನಿಂದನೆ ಮಾಡಿದ್ದರಿಂದ ೩ ಶಿಕ್ಷಕರಿಂದ ಸಹಕಾರಿ ಶಿಕ್ಷಕಿಯ ಕತ್ತು ಸೀಳಿ ಹತ್ಯೆ !

ಎಲ್ಲಿ ಪಾಕಿಸ್ತಾನದಲ್ಲಿ ಕನಸಿನಲ್ಲಿಯೂ ಶ್ರದ್ಧಾಸ್ಥಾನಗಳ ಅಪಮಾನ ಮಾಡುವವರ ವಿರುದ್ಧ ಕಾನೂನನ್ನು ಕೈಗೆತ್ತಿಕೊಳ್ಳುವ ಮುಸಲ್ಮಾನ ಮಹಿಳೆ, ಮತ್ತು ಎಲ್ಲಿ ತಾವೇ ತಮ್ಮ ದೇವತೆಗಳ ಅಪಮಾನ ಮಾಡುವ ಜನ್ಮ ಹಿಂದೂಗಳು !

(ಧರ್ಮನಿಂದನೆ ಅಂದರೆ ಶ್ರದ್ಧಾಸ್ಥಾನಗಳ ಅಪಮಾನ ಮಾಡುವುದು)

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಡೆರಾ ಇಸ್ಮಾಯಿಲ ಖಾನದಲ್ಲಿ ೩ ಮಹಿಳಾ ಶಿಕ್ಷಕಿಯರು ಧರ್ಮನಿಂದನೆ ಮಾಡಿರುವ ಆರೋಪದಲ್ಲಿ ತಮ್ಮ ಓರ್ವ ಸಹಾಯಕ ಶಿಕ್ಷಕಿಯ ಕತ್ತು ಕುಯ್ದು ಹತ್ಯೆ ಮಾಡಿದ್ದಾರೆ. ವಿಶೇಷವೆಂದರೆ ಕನಸಿನಲ್ಲಿ ಈ ಮೃತ ಶಿಕ್ಷಕಿಯು ಧರ್ಮನಿಂದನೆ ಮಾಡಿದ್ದಾಗಿ ಆರೋಪಿಸಲಾಗಿದೆ. ಪೊಲೀಸರು ಮೂರೂ ಶಿಕ್ಷಕಿಯರನ್ನು ಬಂಧಿಸಿದ್ದಾರೆ.

೧. ‘ಇಂದು ೧೩ ವರ್ಷದ ಹುಡುಗಿಗೆ ರಾತ್ರಿ ಒಂದು ಕನಸು ಬಿತ್ತು, ಅದರಲ್ಲಿ ಆಕೆಗೆ ಮೃತ ಶಿಕ್ಷಕಿಯು ಮಾಡಿದ ಧರ್ಮನಿಂದನೆಯ ಬಗ್ಗೆ ತಿಳಿಯಿತು. ಕನಸಿನಲ್ಲಿ ಆಕೆಗೆ ಆ ಮಹಿಳೆಯನ್ನು ಕೊಲ್ಲುವ ಆದೇಶ ನೀಡಲಾಯಿತು’, ಎಂದು ಪೊಲೀಸ ಅಧಿಕಾರಿಗಳು ಹೇಳಿದ್ದಾರೆ. ಈ ಕನಸಿನ ಬಗ್ಗೆ ಆಕೆ ತನ್ನ ಸಂಬಂಧಿಯಾದ ಶಿಕ್ಷಕಿಗೆ ಹೇಳಿದಾಗ ಆಕೆ ಇತರ ಶಿಕ್ಷಕರೊಂದಿಗೆ ಸೇರಿ ಈ ಸಹಾಯಕ ಶಿಕ್ಷಕಿಯ ಹತ್ಯೆ ಮಾಡಿದ್ದಾಳೆ.

೨. ಪೊಲೀಸರು ‘ಮೃತ ಮಹಿಳೆಯು ಧಾರ್ಮಿಕ ನೇತಾರ ಮೌಲಾನಾ ತಾರೀಕ ಜಮೀಲರವರು ಅನುಯಾಯಿಯಾಗಿದ್ದಳು. ಇದು ಆರೋಪಿಗೆ ಇಷ್ಟವಿರಲಿಲ್ಲ. ಆರೋಪಿ ಮಹಿಳೆಯು ದಕ್ಷಿಣ ವಿಝಿರಿಸ್ತಾನ ಆದಿವಾಸಿ ಜಿಲ್ಲೆಯಲ್ಲಿರುವ ಮೆಹಸೂದ ಜಮಾತಿನವಳಾಗಿದ್ದಳು.