ಮತಾಂಧ ಯುವಕನು ಹಿಂದೂ ತರುಣಿಯನ್ನು ಓಡಿಸಿಕೊಂಡು ಹೋಗಿದ್ದರಿಂದ ಪೊಲೀಸರಲ್ಲಿ ದೂರು ನೋಂದಾಯಿಸಿದ ಹಿಂದೂಗಳ ಮೇಲೆ ಮತಾಂಧರಿಂದ ಆಕ್ರಮಣ

  • ಕಾನಪುರದಲ್ಲಿನ ‘ಲವ್ ಜಿಹಾದಿ’ನ ಪ್ರಕರಣ

  • ಪೊಲೀಸರ ಮೇಲೂ ಕಲ್ಲುತೂರಾಟ

‘ಲವ್ ಜಿಹಾದ’ನ ವಿರುದ್ಧ ರಾಜ್ಯದಲ್ಲಿ ಕಾನೂನು ರಚಿಸಲಾಗಿದ್ದರೂ, ಮತಾಂಧರು ಅದರಿಂದ ಪಾಠ ಕಲಿಯಲಿಲ್ಲ. ಇದಕ್ಕಾಗಿ ಕಾನೂನಿನಲ್ಲಿ ಅತ್ಯಂತ ಕಠೋರ ಶಿಕ್ಷೆ ನೀಡುವ ಏರ್ಪಾಡು ಮಾಡಬೇಕಿದೆ !

ಕಾನಪುರ (ಉತ್ತರಪ್ರದೇಶ) – ಇಲ್ಲಿನ ಜೂಹಿ ಕಾಲನಿಯಲ್ಲಿನ ಓರ್ವ ಮತಾಂಧ ಯುವಕನು ಹಿಂದೂ ತರುಣಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಓಡಿಸಿಕೊಂಡು ಹೋಗಿರುವ ಘಟನೆಯ ನಂತರ ಎರಡೂ ಸಮುದಾಯಗಳ ನಡುವೆ ಜಗಳವಾಯಿತು. ಈ ಪ್ರಕರಣದಲ್ಲಿ ಪೊಲೀಸರು ಅರಬಾಜ, ಶಾದಾಬ ಮತ್ತು ಆಲಮ ಎಂಬ ಮೂವರನ್ನು ಬಂಧಿಸಿದ್ದಾರೆ. ಈ ಘಟನೆಯು ಮಾರ್ಚ ೨೬ರ ರಾತ್ರಿ ನಡೆದಿದೆ. ಪೊಲೀಸರು ಬಜರಂಗದಳದ ಜಿಲ್ಲಾ ಸಹಸಂಯೋಜಕರಾದ ವಿಶಾಲ ಬಜರಂಗಿಯವರ ದೂರಿನ ಮೇಲೆಗೆ ಒಟ್ಟೂ ೧೪ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ಈ ಜಗಳದಲ್ಲಿ ವಿಶಾಲ, ಆಕಾಶ ಶುಕ್ಲಾ, ಸೌರಭ ಮತ್ತು ಸಂಸ್ಕಾರ ಶರ್ಮಾ ಎಂಬ ತರುಣರು ಗಾಯಗೊಂಡಿದ್ದಾರೆ. ಈ ತರುಣರು ‘ಮತಾಂಧರಿಂದ ಸತತವಾಗಿ ನಮಗೆ ಬೆದರಿಕೆಗಳು ಬರುತ್ತಿದ್ದು ನಮಗೆ ಸಂರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಪೊಲೀಸರು ಮತಾಂಧ ಯುವಕನ ಮೇಲೆ ಕಾರ್ಯಾಚರಣೆಯನ್ನು ಮಾಡದಿರುವ ಬಗ್ಗೆ ಹಿಂದೂಗಳ ಆರೋಪ

ಹಿಂದೂ ಹುಡುಗಿಯ ಸಂಬಂಧಿಗಳು ಈ ಸಮಯದಲ್ಲಿ ಪೊಲೀಸ ಠಾಣೆಯ ಹೊರಗೆ ಆಂದೋಲನ ನಡೆಸಿದರು. ಅವರು ‘ಪೊಲೀಸರು ಮತಾಂಧ ಯುವಕನ ವಿರುದ್ಧ ಯಾವುದೇ ಕಾರ್ಯಾಚರಣೆಯನ್ನು ಮಾಡಿಲ್ಲ’ ಎಂದು ಆರೋಪಿಸಿದ್ದಾರೆ. (ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಪೊಲೀಸರಿಂದ ಹಿಂದೂಗಳ ಮೇಲಿನ ಅತ್ಯಾಚಾರಗಳ ಸಂದರ್ಭದಲ್ಲಿ ಇಂತಹ ಅಸಂವೇದನಾಶೀಲತೆಯು ಅಪೇಕ್ಷಿತವಿಲ್ಲ !- ಸಂಪಾದಕರು) ಈ ಪ್ರತಿಭಟನೆಯ ನಂತರ ಮನೆಗೆ ಹಿಂತಿರುಗುವಾಗ ೨೦೦ಕ್ಕೂ ಹೆಚ್ಚು ಮತಾಂಧರು ಅವರ ಮೇಲೆ ಆಕ್ರಮಣ ಮಾಡಿದರು. ಇದರ ಮಾಹಿತಿ ದೊರೆಯುತ್ತಲೇ ಬಜರಂಗದಳದ ಕಾರ್ಯಕರ್ತರು ಅಲ್ಲಿ ತಲುಪಿ ಅವರಿಗೆ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದರು. ಈ ಸಮಯದಲ್ಲಿ ಅಲ್ಲಿ ತಲುಪಿದ್ದ ಪೊಲೀಸರಿಗೂ ನೂಕುನುಗ್ಗಲಾಯಿತು. ಪೊಲೀಸರ ಮೇಲೆಯೂ ಕಲ್ಲುತೂರಾಟ ಮಾಡಿದರು. ಅನಂತರ ಪೊಲೀಸರು ಬಲಪ್ರಯೋಗಿಸಿ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸಿದರು. ಪೊಲೀಸರು ಮತಾಂಧ ಯುವಕ ಹಾಗೂ ಹಿಂದೂ ತರುಣಿಯನ್ನು ಹುಡುಕುತ್ತಿದ್ದಾರೆ. ಸದ್ಯ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಇಡಲಾಗಿದೆ.

ಲವ್ ಜಿಹಾದಿಗಾಗಿ ಕುಖ್ಯಾತವಾಗಿರುವ ಜುಹೀ ಕಾಲನಿ !

ಜುಹೀ ಕಾಲನಿಯಲ್ಲಿ ಇದು ‘ಲವ್ ಜಿಹಾದಿ’ನ ಮೊದಲನೇ ಘಟನೆಯಲ್ಲ. ೨೦೨೦ರಲ್ಲಿ ಇಲ್ಲಿ ‘ಲವ್ ಜಿಹಾದಿ’ನ ಪ್ರಕರಣದಲ್ಲಿ ವಿಶೇಷ ಪೊಲೀಸ ದಳದಿಂದ ತನಿಖೆ ನಡೆದಿತ್ತು. ಆಗ ಈ ಕಾಲನಿಯಲ್ಲಿನ ೪ ಮತಾಂಧ ಯುವಕನ ಮಾಹಿತಿ ದೊರೆತಿತ್ತು. ಈ ನಾಲ್ವರೂ ಹಿಂದೂ ತರುಣಿಯರನ್ನು ಗುರಿಯಾಗಿಸಿ ಅವರನ್ನು ಪ್ರೇಮದ ಬಲೆಗೆ ಸೆಳೆಯುತ್ತಿದ್ದರು. ಅದರಲ್ಲಿ ಅಪ್ರಾಪ್ತ ಹುಡುಗಿಯೂ ಇದ್ದಳು. ಅವರ ವಿರುದ್ಧ ೧೪ ವರ್ಷದ ಹುಡುಗಿ ಮತ್ತು ೧೯ ವರ್ಷದ ಒಂದು ಹುಡುಗಿಯನ್ನು ಅಪಹರಿಸಿದ್ದ ಬಗ್ಗೆ ಅಪರಾಧವನ್ನು ದಾಖಲಿಸಲಾಗಿತ್ತು.