ಬರೇಲಿಯಲ್ಲಿ ‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ

ಒಂದು ಪ್ರಕರಣದಲ್ಲಿ ಮತಾಂಧ ಯುವಕನು ದಲಿತ ಯುವತಿಯನ್ನು ಬಲೆಗೆ ಸಿಲಿಕಿಸಿದನು, ಇನ್ನೊಂದು ಪ್ರಕರಣದಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ನಡೆದಿದೆ !

ಸರಕಾರವು ಇನ್ನೂ ಎಷ್ಟು ಹಿಂದೂ ಹುಡುಗಿಯರು ಲವ್ ಜಿಹಾದಿಗೆ ಬಲಿಯಾದ ನಂತರ ಲವ್ ಜಿಹಾದನ್ನು ತಡೆಯಲು ಕಠೋರ ಕ್ರಮ ಕೈಗೊಳ್ಳುವುದು ?

ಬರೇಲಿ (ಉತ್ತರಪ್ರದೇಶ) – ಇಲ್ಲಿ ‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ. ಎರಡೂ ಘಟನೆಗಳಲ್ಲಿನ ಆರೋಪಿಗಳ ಹೆಸರು ಆಸೀಫ ಎಂದೇ ಇದೆ. ಒಂದು ಪ್ರಕರಣದಲ್ಲಿನ ಆಸೀಫನ ಮೇಲೆ ದಲಿತ ಹುಡುಗಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ ಆಕೆಯನ್ನು ಅಪಹರಿಸಿರುವ ಆರೋಪವಿದೆ, ಇನ್ನೊಂದು ಪ್ರಕರಣದಲ್ಲಿನ ಆಸೀಫನ ಮೇಲೆ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಮತಾಂತರ ಮಾಡಿರುವ ಆರೋಪವಿದೆ. ಕಳೆದ ೧ ವರ್ಷದಿಂದ ಅವನು ಈ ಹುಡುಗಿಯ ಹಿಂದೆ ಬಿದ್ದಿದ್ದನು. ಅವನು ಆಕೆಯನ್ನು ದೆಹಲಿಗೆ ಕರೆದೊಯ್ದು ಚಹಾದಲ್ಲಿ ಮತ್ತಿನ ಔಷಧಿಯನ್ನು ಹಾಕಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದನು. ಒಂದು ದಿನ ಆಕೆಯು ಆಸೀಫನ ಮನೆಗೆ ಹೋದಾಗ ಅವನು ಮತಾಂಧ ಆಗಿರುವುದು ಬಹಿರಂಗವಾಯಿತು. ಅನಂತರ ಅವಳು ತನ್ನ ಕುಟುಂಬದವರಿಗೆ ಈ ಬಗ್ಗೆ ತಿಳಿಸಿದಾಗ ಅವರು ಪೊಲೀಸರಲ್ಲಿ ಅವನ ವಿರುದ್ಧ ಅಪರಾಧ ದಾಖಲಿಸಿದರು. ಅನಂತರ ಪೊಲೀಸರು ಅವನನ್ನು ಬಂಧಿಸಿದರು.