ಆಸ್ಟ್ರೇಲಿಯಾದಲ್ಲಿ ಪ್ರಸಿದ್ಧ ಹಿಲಸಾಂಗ್ ಚರ್ಚ್‍ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಬ್ರಾಯನ್ ಹೌಸ್ಟನ್ ಇವರ ಅಸಭ್ಯ ವರ್ತನೆಯಿಂದ ಹುದ್ದೆಯಿಂದ ತೆಗೆದು ಹಾಕಲಾಯಿತು !

ಜಾತ್ಯತೀತದ ಹೆಸರಿನಲ್ಲಿ ಭಾರತಿಯ ಪ್ರಸಾರಮಾಧ್ಯಮಗಳು ಇಂತಹ ವಾರ್ತೆಗಳನ್ನು ಮುಚ್ಚಿಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! -ಸಂಪಾದಕರು 

ಬ್ರಾಯನ್ ಹೌಸ್ಟನ್

ಕ್ಯಾನಬೆರಾ (ಆಸ್ಟ್ರೇಲಿಯಾ) – ಇಬ್ಬರ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಪ್ರಸಿದ್ಧ ಹಿಲಸಾಂಗ್ ಚರ್ಚ್‍ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಬ್ರಾಯನ್ ಹೌಸ್ಟನ್ (68 ವರ್ಷ) ಇವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಆಂತರಿಕ ವಿಚಾರಣೆಯಲ್ಲಿ ಈ ಆರೋಪ ಸತ್ಯವಾಗಿರಬಹುದು ಕಂಡು ಬಂದಿರುವುದರಿಂದ ಅವರ ಮೇಲೆ ಈ ಕ್ರಮಕೈಗೊಳ್ಳಲಾಗಿದೆ. `ಬ್ರಾಯನ್ ಇವರ ತಂದೆ 1970 ರ ದಶಕದಲ್ಲಿ ನಡೆಸಿರುವ ಲೈಂಗಿಕ ದೌರ್ಜನ್ಯ ಮುಚ್ಚಿಡಲಾಗಿತ್ತು’, ಎಂಬ ಆರೋಪವೂ ಅವರ ಮೇಲಿದೆ.

ಈ ಚರ್ಚ್‍ನ ಸ್ಥಾಪನೆ ಬ್ರಾಯನ್ ಇವರು ಅವರ ಪತ್ನಿ ಬಾಬಿ ಇವರ ಜೊತೆ ಮಾಡಿದ್ದರು. ಈ ಚರ್ಚ್‍ನ ಶಾಖೆ ಯುರೋಪ, ಅಮೆರಿಕಾ ಮತ್ತು ಏಶಿಯಾ ಖಂಡದಲ್ಲಿಯೂ ಇವೆ. ವಿಶೇಷವೆಂದರೆ ಆಸ್ಟ್ರೇಲಿಯಾದ ಪ್ರಧಾನಿ ಸ್ಟಾಕ್ ಮಾರಿಸನ್ ಇವರು 2019 ರಲ್ಲಿ ಈ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.