‘ದಿ ಕಾಶ್ಮೀರ ಫೈಲ್ಸ್’ ನಿಮಿತ್ತ…

ವಿವೇಕ ಅಗ್ನಿಹೋತ್ರಿಯವರ ಬಹುಚರ್ಚಿತ ‘ದಿ ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರವು ಮಾರ್ಚ್ 11 ರಂದು ಪ್ರದರ್ಶನಗೊಂಡಿತು. ೧೯೯೦ ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಮತಾಂಧತೆಯು ತಾರಕ್ಕೇರಿದಾಗ ಕಾಶ್ಮೀರಿ ಪಂಡಿತರ ನರಕಯಾತನೆಗಳ ಸತ್ಯಾನ್ವೇಷಣೆಯನ್ನು ಮಾಡುವ ಈ ‘ದಿ ಕಾಶ್ಮೀರ ಫೈಲ್ಸ್’

೧೯೯೦ ರಲ್ಲಿ ಏನು ನಡೆಯಿತು ?

೧೯೯೦ ರಲ್ಲಿ ಏನು ನಡೆಯಿತು ?, ಈ ಬಗ್ಗೆ ದುರದೃಷ್ಟವಶಾತ್ ಆಧುನಿಕ ಭಾರತೀಯ ಪೀಳಿಗೆಗೆ ಏನೂ ಗೊತ್ತಿಲ್ಲ. 19 ಜನವರಿ 1990 ಈ ದಿನದಂದು ‘ಹಿಂದೂಗಳು ಇಡೀ ಕಾಶ್ಮೀರದಿಂದಲೇ ಹೊರಟು ಹೋಗಬೇಕು’, ಎಂದು ವಿವಿಧೆಡೆ ಬಹಿರಂಗವಾಗಿ ಆದೇಶವನ್ನು ಹೊರಡಿಸಲಾಯಿತು. ಇದಕ್ಕಾಗಿ ವರ್ತಮಾನಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಲಾಯಿತು. ರೇಡಿಯೋ, ಮಸೀದಿಗಳಲ್ಲಿನ ಧ್ವನಿವರ್ಧಕಗಳು ಮುಂತಾದವುಗಳಲ್ಲಿ ಘೋಷಣೆಯನ್ನು ನೀಡಲಾಯಿತು. ಸಾರ್ವಜನಿಕ ಗೋಡೆಗಳಿಗೆ ಬಣ್ಣ ಬಳಿಯಲಾಯಿತು ಮತ್ತು ಸಂಪೂರ್ಣ ಹಿಂದೂ ಸಮುದಾಯವು ಅಲ್ಲಿಂದ ಹೊರಟು ಹೋಗಬೇಕಾಯಿತು. ಅವರೆದುರು, ಕಾಶ್ಮೀರಿ ಭಾಷೆಯಲ್ಲಿ ಮೂರು ಆಯ್ಕೆಗಳನ್ನು ಇಡಲಾಯಿತು ! ರಲಿವ್ಹ, ತ್ಸಲೀವ್ಹ ಯಾ ಗಲಿವ್ಹ ! ಅಂದರೆ ‘ಮತಾಂತರಗೊಳ್ಳಿರಿ, ಕಾಶ್ಮೀರ ಬಿಟ್ಟು ತೊಲಗಿ ಅಥವಾ ಮೃತ್ಯುವನ್ನು ಸ್ವೀಕರಿಸಿ.’

ಶ್ರೀ. ವಿನೋದ ಕಾಮತ

ಈ ಮೂರು ಘೋಷಣೆಗಳ ನಂತರ ಕಾಶ್ಮೀರಿ ಪಂಡಿತರ ಭೀಕರ ಹತ್ಯಾಕಾಂಡ ಆರಂಭವಾಗಿ ನಾಲ್ಕುವರೆ ಲಕ್ಷ ಕಾಶ್ಮೀರಿ ಹಿಂದೂಗಳು ಕಾಶ್ಮೀರದಿಂದ ನಿರಾಶ್ರಿತರಾಗಬೇಕಾಯಿತು. ಕಾಶ್ಮೀರಿ ಹಿಂದೂಗಳು ಧರ್ಮವನ್ನು ಉಳಿಸಿಕೊಳ್ಳಲು ತಮ್ಮ ಮಾತೃಭೂಮಿ, ತಮ್ಮ ನೆನಪುಗಳು, ತಮ್ಮ ಬಾಲ್ಯ, ತಮ್ಮ ನೌಕರಿ-ವ್ಯವಸಾಯ ಎಲ್ಲವನ್ನೂ ತ್ಯಜಿಸಿದರು. ಇಂದಿಗೂ ಧರ್ಮಕ್ಕಾಗಿ ಈ ಅಸಾಧಾರಣ ತ್ಯಾಗವು ಒಂದರ್ಥದಲ್ಲಿ ಶ್ಲಾಘನೀಯವಾಗಿದೆ ; ಆದರೆ ಇನ್ನೊಂದು ಅರ್ಥದಲ್ಲಿ ಬಹುಸಂಖ್ಯಾತ ಹಿಂದೂಗಳ ರಾಷ್ಟ್ರದಲ್ಲಿ ಹಿಂದೂಗಳ ಮೇಲೆಯೇ ಇಂತಹ ಪ್ರಮೇಯ ಬರುತ್ತಿದೆ ಇದರ ಬಗ್ಗೆ ನಮಗೆ ಖೇದವೆನಿಸಬೇಕು. ಕಾಶ್ಮೀರಿ ಹಿಂದೂಗಳು ತಮ್ಮದೇ ದೇಶದಲ್ಲಿ ಸ್ಥಳಾಂತರಗೊಳ್ಳುವ ಸಮಯ ಬಂದಿರುವುದಕ್ಕಿಂತ ದುರದೃಷ್ಟಕರ ಸಂಗತಿ ಮತ್ತೊಂದಿಲ್ಲ. ಈ ಸಮಯದಲ್ಲಿ ದೇಶದಲ್ಲಿನ ಅಸಹಿಷ್ಣುತೆಯ ಬಗ್ಗೆ ಮಾತನಾಡುವವರು ಬಾಯಿ ಮುಚ್ಚಿಕೊಂಡಿದ್ದರು, ಎಂಬುದನ್ನೂ ಮರೆಯುವಂತಿಲ್ಲ. ‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರವು ದೌರ್ಜನ್ಯ ಮತ್ತು ಅನಂತರದ ‘ಪ್ರೊಪೊಗಂಡಾ’ದ ಬಗ್ಗೆ ಸತ್ಯಾನ್ವೇಷಣೆ ಮಾಡುತ್ತದೆ.

ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ !

ಭಾರತೀಯ ಪ್ರಜಾಪ್ರಭುತ್ವವನ್ನು ಕೊಂಡಾಡುವವರಿಗೆ ‘ದಿ ಕಾಶ್ಮೀರಿ ಫೈಲ್ಸ್’ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಕಾಶ್ಮೀರದ ‘ಬುರ್ಖಾಧಾರಿ’ ರಾಜಕಾರಣಿಗಳು ಜನವರಿ ೧೯೯೦ ರಲ್ಲಿ ಏನಾಗುತ್ತಿದೆಯೋ ಅದಕ್ಕಾಗಿ ಏನಾದರೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆಗಿನ ರಾಜ್ಯಪಾಲರಾದ ಜಗಮೋಹನ ಇವರು ಕೇಂದ್ರ ಸರಕಾರಕ್ಕೆ ಪರಿಸ್ಥಿತಿಯ ಗಾಂಭೀರ್ಯದ ಬಗ್ಗೆ ಹೇಳುವಾಗ ಅವರನ್ನೇ ಅಲ್ಲಿಂದ ಎತ್ತಂಗಡಿ ಮಾಡುವ ಪ್ರಕ್ರಿಯೆಯನ್ನು ಮಾಡಲಾಯಿತು. ಭಾರತೀಯ ಸಂಸತ್ತಿನಲ್ಲಿ ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿಲ್ಲ. ಅಂದಿನ ಸಂಸತ್ತಿನಲ್ಲಿ ೮೫ ಸಂಸದರು, ಈಗಿನ ರಾಷ್ಟ್ರವಾದಿ ಆಡಳಿತ ಪಕ್ಷದವರೇ ಆಗಿದ್ದರು; ಆದರೆ ಅವರೂ ವಿ.ಪಿ ಸಿಂಗ್ ಸರಕಾರವನ್ನು ಉಳಿಸಲು ದುರದೃಷ್ಟವಶಾತ್ ನಿಷ್ಕ್ರಿಯರಾಗಿದ್ದರು. ಭಾರತೀಯ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಯಾವುದೇ ರೀತಿಯ ‘ಸು-ಮೋಟೊ’ ಕಾರ್ಯಾಚರಣೆಯನ್ನು ಮಾಡದೇ ಕಣ್ಣುಗಳ ಮೇಲೆ ಪಟ್ಟಿಯನ್ನು ಕಟ್ಟಿಕೊಂಡಿತು. ಭಾರತೀಯ ಸೇನೆಯು ತನ್ನ ಸಾಂವಿಧಾನಿಕ ಮಿತಿಗಳ ಗುರಾಣಿಯನ್ನು ತೋರಿಸಿ ಕೌರವಸಭೆಯ ಭೀಷ್ಮಾಚಾರ್ಯವಾಯಿತು. ಯಾವ ಸಂವಿಧಾನವು ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಸುರಕ್ಷಿತ ಜೀವನವನ್ನು ನಡೆಸುವ ಅಭಿವಚನವನ್ನು ನೀಡುತ್ತದೋ, ಅದು ಕಾಶ್ಮೀರದಲ್ಲಿ ವಿಫಲವೆಂದು ಸಿದ್ಧವಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗವೂ ತಮ್ಮ ಕರ್ತವ್ಯದಲ್ಲಿ ವಿಫಲವಾದವು. ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭವೆಂದು ಕೊಂಡಾಡುವ ದೊಡ್ಡ ‘ಮೀಡಿಯಾ ಹೌಸ್’ಗಳು ಈ ದೌರ್ಜನ್ಯಗಳನ್ನು ಮೌನವಾಗಿ ಅನುಮೋದಿಸಿದವು. ಆದ್ದರಿಂದ ೧೯೯೦ ರಲ್ಲಿ ನಡೆದ ಕಾಶ್ಮೀರಿ ಹಿಂದೂಗಳ ನರಮೇಧವು ಭಾರತೀಯ ಪ್ರಜಾಪ್ರಭುತ್ವದ ಬುರ್ಖಾದಡಿ ಆಯಿತು, ಇದಕ್ಕೆ ಇತಿಹಾಸವು ಸಾಕ್ಷಿಯಾಗಿದೆ. ಈ ಕಳಂಕವನ್ನು ಅಳಿಸಿ ಹಾಕದೇ ಭಾರತೀಯ ಪ್ರಭಾಪ್ರಭುತ್ವಕ್ಕೆ ‘ಮಹಾನ’ ಎಂದು ಕರೆಯಿಸಿಕೊಳ್ಳುವ ಯಾವುದೇ ಅಧಿಕಾರವಿಲ್ಲ. !

‘ದಿ ಕಾಶ್ಮೀರ ಫೈಲ್ಸ್’ ನೋಡಿರಿ !

ಇಂದು ಬಾಲಿವೂಡ್‌ನಲ್ಲಿ ಕಾಶ್ಮೀರಿ ಫೈಲ್ಸ್ ಈ ಚಲನಚಿತ್ರವು ಆಗಿದ್ದರೂ ಅದರೊಂದಿಗೆ ಅಸ್ಪೃಶ್ಯತೆಯನ್ನು ಕಾಪಾಡಲಾಗುತ್ತದೆ. ಕಪಿಲ ಶರ್ಮಾರಂತಹ ಬಾಲಿವುಡ್ ಪ್ರಮೋಟರ್ರ‍್ಸ್ ಇದನ್ನು ಏಕಪಕ್ಷೀಯ ಕಥೆಯೆಂದು ಕರೆಯುತ್ತಿದ್ದರೆ, ಸ್ವರಾ ಭಾಸ್ಕರ್ ಇವರು ಚಲನಚಿತ್ರವನ್ನು ತಿರಸ್ಕರಿಸುತ್ತಿದ್ದಾರೆ. ಈ ಸಿನೆಮಾವನ್ನು ೧೦೦ ಕೋಟಿ ಹಿಂದೂಗಳು ನೋಡುತ್ತಾರೆ ಮತ್ತು ಅದು ಸುಪರ್-ಡೂಪರ್ ಹಿಟ್ ಆಗಬಹುದು ಎಂಬ ಭಯ ‘ಉರ್ದುವೂಡ್’ಗೆ ಇದೆ. ಒಂದು ವೇಳೆ ಹೀಗೆ ನಡೆದರೆ, ನಾಳೆ ‘೧೯೪೭ ಪಾರ್ಟಿಶನ್ ಫೈಲ್ಸ್’, ‘೧೯೭೧ ಬಾಂಗ್ಲಾದೇಶಿ ಹಿಂದೂ ಅಟ್ರಾಸಿಟಿಸ್ ಫೈಲ್ಸ್’, ‘1976 ಇಮರಜೆನ್ಸಿ ಫೈಲ್ಸ್’, ‘1989 ಅಯೋಧ್ಯಾ ಫೈಲ್ಸ್’, ‘2002 ಗೋಧ್ರಾ ಫೈಲ್ಸ್’ ಹೀಗೆ ಹಲವು ಹತ್ತಿಕ್ಕಲಾದ ಸತ್ಯವನ್ನು ಸಾರುವ ಸಿನೆಮಾಗಳು ಬರುವವು. ದೇಶದ ಜನಪ್ರಿಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರೂ ‘ದಿ ಕಾಶ್ಮೀರ ಫೈಲ್ಸ್’ನ ಕಲಾವಿದರೊಂದಿಗೆ ಮಾತನಾಡುವಾಗ “ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯಗಳ ಸತ್ಯವನ್ನು ಅನೇಕ ವರ್ಷಗಳ ಕಾಲ ಹತ್ತಿಕ್ಕಲು ಪ್ರಯತ್ನಿಸಲಾಯಿತು”, ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಕಾಶ್ಮೀರ ಫೈಲ್ಸ್ ಚಲನಚಿತ್ರದಲ್ಲಿ ಪ್ರಜಾಪ್ರಭುತ್ವದ ಎಲ್ಲ ಸ್ತಂಭಗಳು ಮತ್ತು ಸರ್ವಪಕ್ಷ ಪ್ರಜಾಪ್ರಭುತ್ವವು ಮರೆಮಾಚಿದ್ದ ಈ ದೌರ್ಜನ್ಯವನ್ನು ತೋರಿಸಲಾಗಿದೆ. ಪ್ರತಿವರ್ಷ ಬಾಲಿವುಡ್‌ನಲ್ಲಿ ಗೂಂಡಾ, ಮಾಫಿಯಾ, ‘ಡ್ರಗ್ಸ್ ಪೆಡ್ಲರ್‌ಗಳು’, ಗಂಗಬಾಯಿಯವರಂತಹ ವೇಶ್ಯಾಗೃಹಗಳ ಮಾಲೀಕರನ್ನು ಉತ್ತೇಜಿಸುವ ಅನೇಕ ‘ಡ್ರಾಮಾ ಫಿಲ್ಮ್ಸ್’ಗಳು ಪ್ರದರ್ಶನಗೊಳ್ಳುತ್ತವೆ. ಇಂತಹ ಸಿನೆಮಾಗಳನ್ನು ನೋಡುವುದಕ್ಕಿಂತ ಭಾರತೀಯರು ‘ದಿ ಕಾಶ್ಮೀರ ಫೈಲ್ಸ್’ ನೋಡುವುದು ದೇಶಹಿತದ್ದಾಗಿದೆ. ಆದುದರಿಂದ ಈ ಚಲನಚಿತ್ರವನ್ನು ಒಮ್ಮೆಯಾದರೂ ಖಂಡಿತ ನೋಡಿ ! – ಶ್ರೀ. ವಿನೋದ ಕಾಮತ್, ಕರ್ನಾಟಕ ರಾಜ್ಯ ವಕ್ತಾರರು, ಸನಾತನ ಸಂಸ್ಥೆ