ಭಾರತದ ವಿಭಜನೆಯಿಂದಲೂ ಪಾಕಿಸ್ತಾನದಲ್ಲಿ ಹಿಂದೂ ಆಸುರಕ್ಷಿತವಾಗಿದ್ದಾರೆ. ಅಲ್ಲಿ ಸತತವಾಗಿ ನರಸಂಹಾರ ಆಗುತ್ತಲೇ ಇದೆ. ವಿಭಜನೆಯ ಸಮಯದಿಂದಲೂ ಪಾಕಿಸ್ತಾನದಲ್ಲಿರುವ ಹಿಂದೂಗಳ ಪ್ರಮಾಣ ಶೇ. 22 ರಿಂದ ಶೇ. 3 ಕ್ಕೆ ಇಳಿದಿದೆ. ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇದು ಜಾತ್ಯತೀತರ, ಪ್ರಗತಿಪರರ ಮಾನವ ಹಕ್ಕುಗಳ ಸಂಘಟನೆಯವರ ಬೂಟಾಟಿಕೆಯೇ ಆಗಿದೆ ! -ಸಂಪಾದಕರು
ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ರೋಹಿ ಸುಕ್ಕೂರ ಇಲ್ಲಿ ಪೂಜಾ ಒಡ ಎಂಬ 18 ವರ್ಷದ ಯುವತಿಯನ್ನು ಮತಾಂಧರು ಗುಂಡುಹಾರಿಸಿ ಹತ್ಯೆಗೈದಿದ್ದಾರೆ. ಪೂಜಾ ಇವಳ ಅಪಹರಣ ನಡೆಸುವ ಪ್ರಯತ್ನ ಮಾಡಲಾಗುತ್ತಿರುವಾಗ ಆಕೆ ಅದನ್ನು ವಿರೋಧಿಸಿದರಿಂದ ಮತಾಂಧರು ಆಕೆಯ ಮೇಲೆ ಗುಂಡು ಹಾರಿಸಿದರು. ನಡುರಸ್ತೆಯಲ್ಲಿ ಹಾಡುಹಗಲೇ ಈ ಘಟನೆ ನಡೆದಿದೆ.
#BREAKING | 18-year old Hindu girl shot dead during abduction attempt in Pakistan’s Sindh provincehttps://t.co/TlR0sIZFvl pic.twitter.com/CC1HKjSsYW
— Republic (@republic) March 22, 2022
1. ಮಾನವ ಹಕ್ಕುಗಳ ಕಾರ್ಯಕರ್ತರ ಹೇಳಿಕೆಯ ಪ್ರಕಾರ, ಅಲ್ಪಸಂಖ್ಯಾತ ಯುವತಿ ಮತ್ತು ನಾಗರಿಕರ ಮೇಲೆ ನಡೆಯುವ ದಾಳಿ ಇದೇನು ಮೊದಲಲ್ಲ. ಪ್ರತಿವರ್ಷ ಕ್ರೈಸ್ತ ಮತ್ತು ಹಿಂದೂ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತದೆ. ಇಂತಹ ಹೆಚ್ಚುತ್ತಿರುವ ಅಪರಾಧದ ಪಾಕಿಸ್ತಾನ ಸರಕಾರದಿಂದ ಬಗ್ಗೆ ಅಗತ್ಯವಿರುವ ಕಠಿಣ ಕ್ರಮ ಕೈಗೊಳ್ಳುವ ಹಾಗೆ ಕಾಣದೆ ಇರುವುದು ಅನೇಕ ಮಾನವ ಹಕ್ಕುಗಳ ಸಂಘಟನೆಯಿಂದ ಟೀಕಿಸಲಾಗುತ್ತಿದೆ.
2. ಸಿಂಧನಲ್ಲಿ ಪ್ರಾಂತೀಯ ಸರಕಾರವು ಬಲವಂತವಾಗಿ ಮತಾಂತರ ಮತ್ತು ವಿವಾಹಗಳ ಮೇಲೆ ನಿಷೇಧ ಹೇರುವ ಪ್ರಯತ್ನ ಮಾಡಿದೆ; ಆದರೆ `ಮುಸಲ್ಮಾನ ಪುರುಷರಿಂದ ಕಪಟ ಪ್ರೀತಿಯಿಂದ ಹೆಣ್ಣುಮಕ್ಕಳು ಇಸ್ಲಾಂ ಸ್ವೀಕರಿಸುತ್ತಿದ್ದಾರೆ’, ಎಂದು ಹೇಳುತ್ತಾ ಮತಾಂಧರು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
3. `ಪೀಪಲ್ಸ್ ಕಮೀಷನ್ ಫಾರ್ ಮೈನಾರಿಟಿ ರೈಟ್ಸ್’ ಮತ್ತು `ಸೆಂಟರ್ ಫಾರ್ ಸೋಷಲ ಜಸ್ಟಿಸ್’ ಇವರ ಪ್ರಕಾರ, ಪೊಲೀಸರು 2013 ರಿಂದ 2019 ಈ ವರೆಗಿನ ಕಾಲಾವಧಿಯಲ್ಲಿ ಬಲವಂತವಾಗಿ ಮತಾಂತರ ಮಾಡಿದ 156 ಪ್ರಕರಣಗಳ ದಾಖಲು ಮಾಡಿಕೊಂಡಿದ್ದಾರೆ.
4. `ಪಾಕಿಸ್ತಾನ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್’ ಪ್ರಕಾರ ಪಾಕಿಸ್ತಾನದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ. 1.60 ರಷ್ಟು ಹಾಗೂ ಸಿಂಧದಲ್ಲಿ ಶೇ. 6.51 ಹಿಂದೂ ಸಮುದಾಯ ವಾಸಿಸುತ್ತಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಹಿಂದೂಗಳು ವಾಸಿಸುತ್ತಾರೆ. ಇಲ್ಲಿಯ ಮುಸಲ್ಮಾನರ ಜೊತೆ ಅವರು ಅವರ ಸಂಸ್ಕೃತಿ ಮತ್ತು ಭಾಷೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ; ಆದರೆ ಇದೇ ಭಾಗದಲ್ಲಿ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಮಾಣ ಹೆಚ್ಚಾಗಿ ಆಗುತ್ತಿರುವುದು ಕೆಲವು ವರ್ಷಗಳ ಹಿಂದೆ ಬೆಳಕಿಗೆ ಬಂದಿದೆ.