ಬಿಹಾರದಲ್ಲಿ ಪೊಲೀಸರ ಹೊಡೆತದಿಂದ ಓರ್ವ ಯುವಕನ ಮೃತ್ಯುವಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು !

ಓರ್ವ ಪೊಲೀಸನ ಸಾವು

ಪೊಲೀಸರ ವಶದಲ್ಲಿರುವಾಗ ಆರೋಪಿಯ ಮೃತ್ಯುವಾಗಿರುವ ಘಟನೆಗಳು ಅನೇಕ ಬಾರಿ ಘಟಿಸುತ್ತವೆ. ಆದರೆ ಇದು ಜನರು ರೊಚ್ಚಿಗೆದ್ದು ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿರುವ ಅಪರೂಪದ ಉದಾಹರಣೆಯಾಗಿದೆ. ಈ ಉದ್ರೇಕಕ್ಕೆ ಯಾರು ಕಾರಣ? ಪೊಲೀಸರು ತಮ್ಮಲ್ಲಿ ಬದಲಾವಣೆಗಳನ್ನು ಮಾಡದಿದ್ದರೆ ಇಂತಹ ಘಟನೆಗಳು ಸತತವಾಗಿ ನಡೆಯುತ್ತಿರುವವು ಎಂದು ಹೇಳಿದರೆ ತಪ್ಪಾಗಲಾರದು !

‘ಬಿಹಾರದ ಪೊಲೀಸರು ರಾಜ್ಯದಲ್ಲಿ ಪುನಃ ಜಂಗಲ್‌ರಾಜ್ ತರುತ್ತಿದ್ದಾರೆಯೇ ?’ ಎಂಬ ಪ್ರಶ್ನೆ ಉದ್ಭವಿಸಿದೆ !

ಪಾಟಲಿಪುತ್ರ (ಬಿಹಾರ) – ಬಿಹಾರ ರಾಜ್ಯದಲ್ಲಿ ಪಶ್ಚಿಮ ಚಂಪಾರಣ್ಯ ಜಿಲ್ಲೆಯಲ್ಲಿನ ಬಲಥರ ಪೊಲೀಸ್ ಠಾಣೆಯ ಪೊಲೀಸರು ಡಿಜೆ (ದೊಡ್ಡ ಧ್ವನಿಕ್ಷೇಪಕ ಯಂತ್ರ) ಹಾಕಿದ್ದರಿಂದ ಅನಿರುದ್ಧ ಎಂಬ ಯಾದವ ಯುವಕನನ್ನು ಬಂಧಿಸಿದ್ದರು. ಈ ಯುವಕನನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು ಹಿಗ್ಗಾಮುಗ್ಗಾ ಥಳಿಸಿಲಾಯಿತು. ಇದರಲ್ಲಿ ಅವನ ಮೃತ್ಯುವಾದ ನಂತರ ಸ್ಥಳೀಯ ಗ್ರಾಮಸ್ಥರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಠಾಣೆಯನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಇಟ್ಟರು. ಪೊಲೀಸರ ೩ ವಾಹನಗಳನ್ನೂ ಸುಡಲಾಯಿತು. ಹಾಗೆಯೇ ಓಡಿ ಹೋಗುತ್ತಿರುವ ಪೊಲೀಸರನ್ನು ಬೆನ್ನಟ್ಟಿ ಅವರನ್ನು ಚೆನ್ನಾಗಿ ಥಳಿಸಿದರು. ಈ ಹಿಂಸಾಚಾರದಲ್ಲಿ ಓರ್ವ ಪೊಲೀಸರು ಸಾವನ್ನಪ್ಪಿದರು . ಈ ಘಟನೆ ಮಾರ್ಚ್ ೧೯ ರಂದು ನಡೆದಿದೆ. ಗ್ರಾಮಸ್ಥರು ಮೃತ ಯುವಕನ ಮೃತದೇಹವನ್ನು ಅಲ್ಲಿಯ ಬಲಧರ ವೃತ್ತದಲ್ಲಿ ಇರಿಸಿ ಆಂದೋಲನ ನಡೆಸಿದರು.

ಇಲ್ಲಿನ ಪೊಲೀಸ್ ಅಧಿಕಾರಿ ಉಪೇಂದ್ರನಾಥ ವರ್ಮಾರವರು ‘ಪೊಲೀಸರು ಬಂಧಿಸಿದ್ದ ಅನಿರುದ್ಧ ಯಾದವನ ಮೃತ್ಯು ಜೇನು ಹುಳು ಕಚ್ಚಿದ್ದರಿಂದ ಆಗಿದೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ.