ಪ್ರತ್ಯೇಕತಾವಾದಿ ಯಾಸಿನ್ ಮಲಿಕ್, ಶಬ್ಬೀರ ಶಾಹ ಮುಂತಾದವರ ಮೇಲೆ ಆರೋಪ ದಾಖಲಿಸಿ ! – ನ್ಯಾಯಾಲಯದ ಆದೇಶ

ಈ ಪ್ರತ್ಯೇಕತಾವಾದಿಗಳಿಗೆ ಇಲ್ಲಿಯವರೆಗೆ ಕಠಿಣ ಶಿಕ್ಷೆ ಆಗುವುದು ಅಪೇಕ್ಷಿತವಿರುವಾಗ ಆರೋಪ ಈಗ ಎಲ್ಲಿ ಅವರ ಮೇಲೆ ದೂರು ದಾಖಲಿಸಲಾಗಬಹುದು ಹಾಗೂ ‘ಈ ಪ್ರಕರಣದ ತೀರ್ಪು ಬರಲು ಎಷ್ಟು ವರ್ಷ ಆಗುವುದು ಮತ್ತು ಶಿಕ್ಷೆ ಯಾವಾಗ ಆಗುವುದು ?’, ಇದೊಂದು ಪ್ರಶ್ನೆಯೇ ಇದೆ !

ನವದೆಹಲಿ – ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು ಜಮ್ಮು-ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆ ಧನಸಹಾಯ ಮಾಡಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್, ಶಬ್ಬೀರ್ ಶಾಹ, ಮಾಸರತ ಆಲಮ ಸಹಿತ ಲಷ್ಕರ-ಏ-ತೋಯಬಾ ಈ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಆಫೀಸ್ ಸೈಯದ್, ಹಿಜ್ಬುಲ್ ಮುಜಾಹಿದ್ದೀನ್ ಪ್ರಮುಖ ಸೈಯದ್ ಸಲಾವುದ್ದೀನ್ ಮತ್ತು ಇತರ ಕೆಲವು ಜನರ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆ ನಿರ್ಬಂಧಿತ ಕಾನೂನಿನ’ ಅಡಿಯಲ್ಲಿ (‘ಯುಎಪಿಎ’ ಅಡಿಯಲ್ಲಿ) ಅಪರಾಧ ದಾಖಲಿಸಲು ಆದೇಶ ನೀಡಿದೆ.

೧. ಮಾಜಿ ಶಾಸಕ ರಶೀದ್ ಇಂಜಿನಿಯರ್, ಉದ್ಯಮಿ ಜಹುರ ಅಹಮದಶಾಹ ವತಾಲಿ, ಬಿಟ್ಟಾ ಕರಾಟೆ, ಅಫತಾಬ್ ಅಹ್ಮದ ಶಾಹ, ಅವತಾರ ಮಹಮ್ಮದ ಶಾಹ, ನಯೀಮ್ ಖಾನ್, ಬಷೀರ್ ಅಹಮದ್ ಭಟ್ಟ ಅಲಿಯಾಸ್ ಪಿರ ಸೈಫುಲ್ಲಾ ಮತ್ತು ಇತರ ಅನೇಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಅವರ ಮೇಲೆ ಸಹ ದೂರು ದಾಖಲಿಸಲಾಗುವುದು.

೨. ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯಕ್ಕೆ, ‘ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗಾಗಿ ಪಾಕಿಸ್ತಾನದಿಂದ ಧನಸಹಾಯ ಆಗುತ್ತಿದೆ ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದಕ ಆಫೀಜ್ ಸಯೀದ್ ಇವರಂತಹವರ ಕೈವಾಡವಿದೆ. ಹಾಗೂ ಲಷ್ಕರ್-ಎ-ತೊಯಬಾ, ಹಿಜ್ಬುಲ್ ಮುಜಾಹಿದ್ದೀನ್, ಜಮ್ಮು ಮತ್ತು ಕಾಶ್ಮೀರ ಲಿಬರೆಶನ್ ಫ್ರೆಂಟ ಮತ್ತು ಜೈಶೆ-ಎ-ಮಹಮ್ಮದ್ ಈ ಭಯೋತ್ಪಾದಕ ಸಂಘಟನೆಯ ಸಹಭಾಗ ಇದ್ದು ಅವುಗಳಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐ.ಎಸ್.ಐ.ನ ಬೆಂಬಲವಿದೆ. ಕಾಶ್ಮೀರ ಕಣಿವೆಯಲ್ಲಿ ಜನರ ಮೇಲೆ ಮತ್ತು ಭದ್ರತಾ ಪಡೆಯ ಮೇಲೆ ದಾಳಿ ನಡೆಸಿ ಹಿಂಸಾಚಾರ ನಡೆಸುವುದು ಇವರ ಉದ್ದೇಶವಾಗಿದೆ.’