ಹಿಜಾಬ್ ಪ್ರಕರಣದಲ್ಲಿ ಅಂಗಡಿಗಳನ್ನು ಮುಚ್ಚಲು ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಅಪರಾಧ ದಾಖಲು

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಜಾರಿ ಇಡುವದರ ಬಗ್ಗೆ ನೀಡಿದ ತೀರ್ಪಿಗೆ ವಿರೋಧಿಸಲು ಅಂಗಡಿಗಳನ್ನು ಮುಚ್ಚುವಂತೆ ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಮತ್ತು ಒಬ್ಬ ಅಧಿಕಾರಿಯ ಮೇಲೆ ಭಟ್ಕಳ ಪೊಲೀಸರು ಅಪರಾಧವನ್ನು ದಾಖಲಿಸಿದ್ದಾರೆ. ಅಜೀಮ ಅಹಮದ, ಮೊಹಿದ್ದಿನ ಅಬೀರ, ಶಾರಿಕ ಮತ್ತು ನ್ಯಾಯವಾದಿ ತೈಮೂರ ಹುಸೈನ ಗವಯಿ ಇವರ ಮೇಲೆ ಅಪರಾಧ ದಾಳಲಿಸಲಾಗಿದೆ.

ಸರಕಾರವು ಬೆದರಿಕೆಗೆ ಮಣಿಯುವದಿಲ್ಲ ! – ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ

ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣವರು, ಯಾರು `ನ್ಯಾಯಾಲಯದ ತೀರ್ಪು ಅವರ ಪರವಾಗಿ ಆಗಬೇಕಾಗಿತ್ತು’, ಎಂದು ಹೇಳುತ್ತಿದ್ದಾರೆ, ಅವರ ಬೆದರಿಕೆಗೆ ಸರಕಾರ ಬಗ್ಗುವದಿಲ್ಲ. ಮುಸ್ಲಿಂ ಹುಡುಗಿಯರು, ಅವರು ನ್ಯಾಯಾಲಯದ ನಿರ್ಣಯವನ್ನು ಪಾಲಿಸುವದಿಲ್ಲ’ ವೆಂದು ಹೇಳುತ್ತಿದ್ದಾರೆ, ಅದು ಯೋಗ್ಯವಲ್ಲ ಎಂದು ಹೇಳಿದರು.