ಮುಚ್ಚಿಹಾಕಿದ್ದ ಸತ್ಯವು ಬಹಿರಂಗವಾದ್ದದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದವರು ಗೊಂದಲಕ್ಕೀಡಾಗಿದ್ದಾರೆ ! – ಪ್ರಧಾನಿ

‘ದ ಕಶ್ಮೀರ ಫೈಲ್ಸ್’ ಚಲನಚಿತ್ರದ ವಿಷಯದಲ್ಲಿ ಹಿಂದುದ್ವೇಷಿಗಳನ್ನು ಕಠೋರವಾಗಿ ಟೀಕಿಸಿದ ಪ್ರಧಾನಿ

ನವ ದೆಹಲಿ – ‘ದ ಕಶ್ಮೀರ ಫೈಲ್ಸ್’ನಂತಹ ಚಲನಚಿತ್ರಗಳು ನಿರ್ಮಿಸಬೇಕು. ಇಂತಹ ಚಲನಚಿತ್ರಗಳ ಮೂಲಕ ಜನತೆಯ ಮುಂದೆ ಸತ್ಯ ಬರುತ್ತಿರುತ್ತದೆ. ಕಳೆದ ಅನೇಕ ದಶಕಗಳಿಂದ ಯಾವ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಲಾಯಿತೋ, ಅದು ಬಹಿರಂಗ ಪಡಿಸಲಾಗುತ್ತಿದೆ. ಆದ್ದರಿಂದ ಯಾರು ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿದರೋ, ಅವರು ಇಂದು ವಿರೋಧಿಸುತ್ತಿದ್ದಾರೆ. ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಾವುಟವನ್ನು ಹಿಡಿದುಕೊಂಡು ತಿರುಗಾಡುವ ‘ಗುಂಪು’ ಕಳೆದ ೫-೬ ದಿನಗಳಿಂದ ಗೊಂದಲಕ್ಕೀಡಾಗಿದ್ದಾರೆ, ಎಂದು ಪ್ರಧಾನಿ ನರೇಂದ್ರ ಮೋದಿಯವರು ಹಿಂದೂದ್ವೇಷಿಗಳನ್ನು ಟಾಂಟ್ ನೀಡಿದರು. ಅವರು ಭಾಜಪದ ಸಂಸತ್ತಿನ ಸಭೆಯಲ್ಲಿ ಮಾತನಾಡುತ್ತಿದ್ದರು. ದೇಶದಲ್ಲಿ ಕೆಲವು ಸ್ಥಳಗಳಲ್ಲಿ ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ಪ್ರದರ್ಶಿಸಲು ವಿವಾದ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿಯವರು ಈ ಮೇಲಿನ ಹೇಳಿಕೆ ನೀಡಿದರು.

(ಸೌಜನ್ಯ – Republic TV)

ಪ್ರಧಾನಿ ಮೋದಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಈ ಚಲನಚಿತ್ರದಲ್ಲಿರುವ ಸತ್ಯ ಹಾಗೂ ಕಲೆ ಇವುಗಳ ಬಗ್ಗೆ ಚರ್ಚೆ ಮಾಡುವ ಬದಲು ಈ ಚಲನಚಿತ್ರವನ್ನೇ ನಿರಾಕರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.

೨. ಚಲನಚಿತ್ರ ಮಾಡುವವರಿಗೆ ಕಾಣಿಸಿದ ಸತ್ಯವನ್ನು ತೋರಿಸಲು ಪ್ರಯತ್ನಿಸಿದ್ದಾರೆ.

೩. ನನ್ನ ವಿಷಯ ಚಲನಚಿತ್ರವಲ್ಲ. ನನ್ನ ವಿಷಯವೆಂದರೆ ಸತ್ಯವನ್ನು ದೇಶದ ಮುಂದೆ ತರುವುದು, ಇದು ದೇಶದ ಒಳಿತಿಗೋಸ್ಕರ ಆಗಿರುತ್ತದೆ. ಅದಕ್ಕೆ ವಿವಿಧ ಅಂಶಗಳಿರುತ್ತದೆ. ಒಬ್ಬರಿಗೆ ಒಂದು ವಿಷಯ ಕಾಣಿಸುತ್ತದೆ, ಹಾಗೂ ಮತ್ತೊಬ್ಬರಿಗೆ ಮತ್ತೊಂದು. ಯಾರಿಗಾದರೂ ಈ ಚಲನಚಿತ್ರ ಸರಿಯಾಗಿಲ್ಲ ಎಂದು ಅನಿಸಬಹುದು, ಹಾಗಾದರೆ ಅವನು ಮತ್ತೊಂದನ್ನು ಚಲನಚಿತ್ರ ಮಾಡಲಿ; ಆದರೆ ಈ ಸತ್ಯವನ್ನು ಇಷ್ಟು ದಿನಗಳವರೆಗೂ ಮುಚ್ಚಿಟ್ಟಿದ್ದರು ಹಾಗೂ ಈಗ ಅವರೊಂದಿಗೆ ಸತ್ಯ ಬೆಳಕಿಗೆ ಬರುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ. ಯಾರಾದರೂ ಶ್ರಮಪಟ್ಟು ಪ್ರಯತ್ನಿಸುತ್ತಿದ್ದರೆ, ಆಗ ಆ ಸತ್ಯಕ್ಕಾಗಿ ಜೀವಿಸುತ್ತಿರುವ ಜನರು ಸತ್ಯದ ಹಿಂದೆ ನಿಂತುಕೊಳ್ಳುವುದು ಅವರ ಹೊಣೆಯಾಗಿದೆ. ಪ್ರತಿಯೊಬ್ಬರೂ ಕೂಡ ಆ ಹೊಣೆಯನ್ನು ನಿರ್ವಹಿಸಬೇಕು ಎಂದು ಹೇಳಿದರು.

ತುರ್ತುಸಮಯದಂತಹ ದೊಡ್ಡ ಘಟನೆಯ ಮೇಲೆ ಏಕೆ ಇನ್ನೂ ಯಾರೂ ಕೂಡ ಯಾವುದೇ ಚಲನಚಿತ್ರವನ್ನು ತೆಗೆಯಲಿಲ್ಲ ?

ಮೋದಿಯವರು ತಮ್ಮ ಮಾತ್ನು ಮುಂದುವರೆಸುತ್ತಾ, ದೇಶದಲ್ಲಿ ತುರ್ತುಪರಿಸ್ಥಿತಿಯಂತಹ ದೊಡ್ಡ ಘಟನೆ ನಡೆದರೂ ಕೂಡ ಅದರ ಮೇಲೆ ಇನ್ನೂ ಸತ್ಯವನ್ನು ತೋರಿಸುವಂತಹ ಚಲನಚಿತ್ರವನ್ನು ತಯಾರಿಸಲಿಲ್ಲ. ಸತ್ಯವನ್ನು ಮುಚ್ಚಿಡಲು ಸತತವಾಗಿ ಪ್ರಯತ್ನಿಸಲಾಯಿತು.

ವಿಭಜನೆಯ ಸತ್ಯದ ಆಧಾರಿತವಾದ ಚಲನಚಿತ್ರವನ್ನು ಏಕೆ ತಯಾರಿಸಲಿಲ್ಲ ?

ಮೋದಿಯವರು ಭಾರತದ ವಿಭಜನೆಯ ವಿಷಯವಾಗಿ ಮಾತನಾಡುತ್ತಾ, ಯಾವಾಗ ನಾವು ವಿಭಜನೆಯ ಸಮಯದಲ್ಲಿ ಆದ ನರಸಂಹಾರದ ನೆನಪಿಗಾಗಿ ಆಗಸ್ಟ ೧೪ರಂದು ‘ವಿಭಜನೆಯ ಭೀಕರತೆ’ ಎಂದು ಘೋಷಿಸಿದೆವೋ, ಆಗ ಹಲವರಿಗೆ ಅದು ಅಡಚಣೆಯೆಂದು ಕಾಣಿಸಿತು. ಭಾರತದ ವಿಭಜನೆಯ ಸತ್ಯವನ್ನು ತೋರಿಸುವಂತಹ ಚಲನಚಿತ್ರ ಇನ್ನೂ ಏಕೆ ತಯಾರಾಗಲಿಲ್ಲ ? ಕೆಲವೊಮ್ಮೆ ಇಂತಹ ಸತ್ಯದಿಂದ ಕಲಿಯಲು ಸಿಗುತ್ತದೆ. ಈ ರೀತಿಯ ವಿಷಯವನ್ನು ದೇಶವು ಹೇಗೆ ತಾನೆ ಮರೆಯಲು ಸಾಧ್ಯ ?