ಯುದ್ಧದಿಂದಾಗಿ ಪೆಟ್ರೋಲಿನ ದರ ಹೆಚ್ಚಾಗಿದ್ದರಿಂದ ಶ್ರೀಲಂಕಾದಲ್ಲಿ ಅಪಾರ ಬೆಲೆಯೇರಿಕೆ !
* ಭಾರತದಲ್ಲಿ ಹೀಗೆ ಆಗದಿರಲು ಭಾರತವು ತೈಲ ಮತ್ತು ನೈಸರ್ಗಿಕ ಅನಿಲದ ಸಂದರ್ಭದಲ್ಲಿ ಸ್ವಯಂಪೂರ್ಣವಾಗಲು ತತ್ಪರತೆಯಿಂದ ಕೃತಿ ಮಾಡಬೇಕು ! * ಶ್ರೀಲಂಕಾದ ಈ ಸ್ಥಿತಿಯ ದುರುಪಯೋಗ ಪಡೆಯುತ್ತ ಚೀನಾವು ಅದನ್ನು ವಶಕ್ಕೆ ಪಡೆದರೆ ಅದರಲ್ಲಿ ಆಶ್ಚರ್ಯವೇನಿಲ್ಲ ! |
ಕೋಲಂಬೋ – ರಷ್ಯಾ-ಉಕ್ರೇನ ಯುದ್ಧದ ದೃಶ್ಯ ಪರಿಣಾಮಗಳು ವಿವಿಧ ದೇಶಗಳಲ್ಲಿ ಕಂಡು ಬರುತ್ತಿವೆ. ಶ್ರೀಲಂಕಾದಲ್ಲಿ ಪೆಟ್ರೋಲಿನ ದರವು ಹೆಚ್ಚಾಗಿದ್ದರಿಂದ ಎಲ್ಲ ಕ್ಷೇತ್ರಗಳಲ್ಲಿ ಬೆಲೆಯೇರಿಕೆ ಹೆಚ್ಚಾಗಿದೆ. ಅದರೊಂದಿಗೆ ಆಹಾರಧಾನ್ಯಗಳ ಕೊರತೆಯ ಸಂಕಟವೂ ಎದುರಾಗಿದೆ. ಕೊರೋನಾದಿಂದಾಗಿ ಈ ದೇಶಕ್ಕೆ ಭಾರೀ ಆರ್ಥಿಕ ಅಡಚಣೆಯನ್ನು ಎದುರಿಸಬೇಕಾಯಿತು. ಹಾಲಿನ ಬೆಲೆಯು ಚಿನ್ನಕ್ಕಿಂತಲೂ ಹೆಚ್ಚಾಗಿದೆ. ಬೆಲೆಯೇರಿಕೆಯಿಂದಾಗಿ ಗ್ಯಾಸ್‌ನ ದರವು ಆಕಾಶ ತಲುಪಿದೆ. ಇದರಿಂದಾಗಿ ಸುಮಾರು ೧ ಸಾವಿರ ಬೇಕರಿಗಳು ಮುಚ್ಚಿವೆ. ಒಂದು ಪ್ಯಾಕೆಟ್ ಬ್ರೆಡ್‌ನ ಬೆಲೆಯು ೧೫೦ ರೂಪಾಯಿ ವರೆಗೆ ತಲುಪಿದೆ. ಈ ಎಲ್ಲ ಸಂಗತಿಗಳಿಂದಾಗಿ ಬೆಲೆಯೇರಿಕೆಯು ಹೆಚ್ಚಿದ್ದು ಸಾಲವು ಹೆಚ್ಚಾಗಿದ್ದರಿಂದ ಶ್ರೀಲಂಕಾವು ‘ದಿವಾಳಿಗೊಂಡ ದೇಶ’ ಎಂದು ಘೋಷಿಸಲ್ಪಡುವ ಹೊಸ್ತಿಲಿನಲ್ಲಿದೆ.
IMF in Sri Lanka to discuss worsening economic crisis https://t.co/OCh5CeiWW3
— TODAY (@todayng) March 15, 2022
ಶ್ರೀಲಂಕಾದಲ್ಲಿ ದಿನದಲ್ಲಿ ೭ ಗಂಟೆಗಿಂತಲೂ ಹೆಚ್ಚಿನ ಸಮಯದ ವರೆಗೆ ವಿದ್ಯುತ್ ಕಡಿತವಿರುವುದರಿಂದ ಜನರಿಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಶ್ರೀಲಂಕಾದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಮಹತ್ವವಿದೆ. ಕೊರೋನಾದಿಂದಾಗಿ ಪ್ರವಾಸೋದ್ಯಮವು ಮೊದಲೇ ನಿಂತಿದೆ. ಸುಮಾರು ೫ ಲಕ್ಷ ಜನರ ಉದ್ಯೋಗವು ಪ್ರವಾಸೋದ್ಯಮದ ಮೇಲೆ ಅವಲಂಬಿಸಿದ್ದರೆ ೨೦ ಲಕ್ಷ ಜನರು ಪರೋಕ್ಷವಾಗಿ ಪ್ರವಾಸೋದ್ಯಮದೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಜನವರಿಯಲ್ಲಿ ಶ್ರೀಲಂಕಾದ ಪರಕೀಯ ನಾಣ್ಯಪದ್ಧತಿಯು ಶೇ. ೭೦ರಷ್ಟು ಕಡಿಮೆಯಾಗಿ ೨.೩೬ ನೂರು ಕೋಟಿ ಡಾಲರ್‌ನಷ್ಟಾಗಿದೆ. ಶ್ರೀಲಂಕಾಗೆ ಮುಂಬರುವ ೧೨ ತಿಂಗಳಲ್ಲಿ ೫೪ ಸಾವಿರ ಕೋಟಿ ರೂಪಾಯಿಗಳ ದೇಶೀಯ ಹಾಗೂ ವಿದೇಶಿ ಸಾಲವನ್ನು ತೆರಬೇಕಿದೆ.