ಜಗತ್ತು ಸುದೀರ್ಘ ಯುದ್ಧಕ್ಕೆ ಸನ್ನದ್ಧವಾಗಬೇಕು ! – ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ


ರಷ್ಯಾ – ಉಕ್ರೇನ್ ಯುದ್ಧವು ಸುದೀರ್ಘಕಾಲ ನಡೆಯಲಿದ್ದು ಜಗತ್ತು ಅದಕ್ಕಾಗಿ ಸನ್ನದ್ಧವಾಗಿರಬೇಕು ಎಂದು ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು. ಮ್ಯಾಕ್ರನ್ ಮುಂದೆ ಮಾತನಾಡುತ್ತಾ, “ಈ ಯುದ್ಧ ಮತ್ತು ಅದರ ನಂತರದ ದೂರಗಾಮಿ ಪರಿಣಾಮಗಳಾಗುತ್ತವೆ. ಈ ಯುದ್ಧದಲ್ಲಿ ಉಕ್ರೇನ್‌ಗೆ ಫ್ರಾನ್ಸ್ ಎಲ್ಲ ರೀತಿಯಿಂದ ಸಹಾಯ ಮಾಡಲಿದೆ ಮತ್ತು ರಷ್ಯಾದ ಕ್ರಮಗಳನ್ನು ಬಲವಾಗಿ ಮತ್ತು ಒಗ್ಗಟ್ಟಿನಿಂದ ವಿರೋಧಿಸುವುದು. ಈಗ ನಡೆಯುತ್ತಿರುವ ಯುದ್ಧವು ಯುರೋಪ್ ಮತ್ತು ಫ್ರಾನ್ಸ್ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿದೆ. ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಯುರೋಪ್‌ನಲ್ಲಿ ಸ್ಥಿರತೆ ಮತ್ತು ಶಾಂತಿಗೆ ಭಂಗ ತಂದಿದ್ದಾರೆ. ಫ್ರಾನ್ಸ್ ಮತ್ತು ಅದರ ಮಿತ್ರರಾಷ್ಟ್ರಗಳು ಈ ಬಿಕ್ಕಟ್ಟನ್ನು ತಪ್ಪಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದರು; ಆದರೆ ಅದು ವ್ಯರ್ಥವಾಯಿತು”, ಎಂದರು.

ಒಂದು ವರ್ಷದ ಹಿಂದೆ ಭಾರತೀಯ ಪಂಚಾಂಗದಲ್ಲಿ ಮಾಡಲಾಗಿತ್ತು ಭವಿಷ್ಯವಾಣಿ !

ಭಾರತೀಯ ಜ್ಯೋತಿಷ್ಯಶಾಸ್ತ್ರ ಎಷ್ಟು ಮುಂದುವರೆದಿದೆ, ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಇದರ ಆಧಾರದಲ್ಲಿ ಭಾರತೀಯ ಆಡಳಿತಗಾರರು ರಾಜ್ಯವನ್ನು ನಡೆಸಿದರೆ, ಭಾರತವು ಅನೇಕ ಸಮಸ್ಯೆಗಳನ್ನು ಎದುರಿಸಲು ಮೊದಲೇ ಸಿದ್ಧವಾಗಬಹುದು !

ನವ ದೆಹಲಿ – ರಷ್ಯಾ ಮತ್ತು ಉಕ್ರೇನ್ ಪ್ರಾರಂಭವಾದ ಯುದ್ಧದ ಬಗ್ಗೆ ಒಂದು ವರ್ಷದ ಹಿಂದೆಯೇ ಭಾರತೀಯ ಪಂಚಾಂಗದ ಮೂಲಕ ಭವಿಷ್ಯ ನುಡಿಯಲಾಗಿತ್ತು. ಈ ಯುದ್ಧದ ಹಿಂದೆ ಅಂಗಾರಕ ಯೋಗವಿದೆ ಎಂದು ಜ್ಯೋತಿಷಿ ಪಂಡಿತ್ ಮುಖೇಶ್ ಮಿಶ್ರಾ ಹೇಳಿದ್ದಾರೆ.

ಈ ಸಮಯದಲ್ಲಿ ವಿಕ್ರಮ್ ಸಂವತ್ ೨೦೭೮ ರ ಅಡಿಯಲ್ಲಿ ‘ಆನಂದ್’ ಎಂಬ ಸಂವತ್ಸರ ನಡೆಯುತ್ತಿದೆ. ಈ ಸಂವತ್ಸರದ ಆರಂಭ ಮಂಗಳವಾರವಾಗಿತ್ತು. ಈ ಸಂವತ್ಸರದ ರಾಜಾ ಮತ್ತು ಮಂತ್ರಿ ಮಂಗಳ ಗ್ರಹವಿದೆ. ಮಂಗಳನಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ‘ಯುದ್ಧಕಾರಕ ಗ್ರಹ’ ಎಂದು ಪರಿಗಣಿಸಲಾಗಿದೆ. ಸದ್ಯ ಶನಿಗ್ರಹವು ಮಕರ ರಾಶಿಯಲ್ಲಿದ್ದಾನೆ. ಫೆಬ್ರುವರಿ ೨೬ ರಂದು ಮಂಗಳ ಗ್ರಹವೂ ಇದರೊಳಗೆ ಪ್ರವೇಶಿಸಿದೆ.

ಇಬ್ಬರೂ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ‘ಅಂಗಾರಕ ಯೋಗ’ ಸೃಷ್ಟಿಯಾಗಿದೆ. ಈ ಯೋಗವು ಏಪ್ರಿಲ್ ೭ ರ ವರೆಗೆ ಇರುತ್ತದೆ. ಈ ಯೋಗದಿಂದಾಗಿ ಯುದ್ಧ, ಭೂಕಂಪಗಳು ಅಥವಾ ಗಡಿ ಉದ್ವಿಗ್ನತೆಗಳು ಸೃಷ್ಟಿಯಾಗುತ್ತವೆ ಅಥವಾ ಉಲ್ಬಣಗೊಳ್ಳುತ್ತವೆ. ಅರಾಜಕತೆ, ಹಿಂಸಾಚಾರ, ರಕ್ತಪಾತ ಅಥವಾ ನೈಸರ್ಗಿಕ ವಿಕೋಪಗಳಲ್ಲಿ ವೃದ್ಧಿಯಾಗುತ್ತವೆ. ಪಂಚಾಂಗದಲ್ಲಿ ಈ ‘ಅಂಗಾರಕ ಯೋಗ’ದಿಂದ ಯುರೋಪಿನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿದೆ.

ಜ್ಯೋತಿಷಾಚಾರ್ಯ ಮಿಶ್ರಾವರು ತಮ್ಮ ಮಾತನ್ನು ಮುಂದುವರೆಸುತ್ತಾ, ಗ್ರಹಗಳು ಯಾವಾಗ ತಮ್ಮ ಸ್ಥಾನವನ್ನು ಬದಲಿಸುತ್ತವೆಯೋ ಆಗ ಅವುಗಳ ಪ್ರಭಾವವು ೨-೩ ದಿನಗಳ ಮೊದಲೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ಫೆಬ್ರುವರಿ ೨೬ ರಂದು ಮಂಗಳ ಮಕರ ರಾಶಿಯನ್ನು ಪ್ರವೇಶಿಸುವ ಮೊದಲು ಅಂದರೆ ಫೆಬ್ರುವರಿ ೨೩ರ ರಾತ್ರಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಯಿತು.

ಭಾರತವು ‘ವಿಶ್ವಶಕ್ತಿ’ಯಾಗಿ ಹೊರಹೊಮ್ಮಲಿದೆ !

ಜ್ಯೋತಿಷಾಚಾರ್ಯ ಪಂಡಿತ ಮುಖೇಶ್ ಮಿಶ್ರಾವರು ಮಾತನಾಡುತ್ತಾ, ಪಂಚಾಂಗಕ್ಕನುಸಾರ ಗ್ರಹಗಳ ಸ್ಥಿತಿಯಿಂದ ಮುಂಬರುವ ಕಾಲವು ಉದ್ವಿಗ್ನವಾಗಿದ್ದರೂ ಭಾರತದ ಸ್ಥಿತಿ ಬಲಶಾಲಿಯಾಗಿರುತ್ತದೆ. ಗ್ರಹಗಳ ಪಾಲನೆ ಭಾರತದ ಪರವಾಗಿ ಇವೆ. ಆದ್ದರಿಂದ ಭಾರತವು ಒಂದು ‘ವಿಶ್ವ ಶಕ್ತಿ’ಯಾಗಿ ಹೊರಹೊಮ್ಮುತ್ತಿರುವುದು ಕಂಡು ಬರಲಿದೆ. ಮಕರರಾಶಿಯಲ್ಲಿಯ ಶನಿಯು ಯಾವಾಗಲೂ ಕಷ್ಟದಾಯಕನಾಗಿರುತ್ತಾನೆ. ಭಾರತದ ಸಂದರ್ಭದಲ್ಲಿ ಇದು ತೊಂದರೆದಾಯಕವಾಗಿದೆ. ವಿಶ್ವ ಮಟ್ಟದಲ್ಲಿ ಇದು ಯುದ್ಧ, ಅರಾಜಕತೆ, ಹಣದುಬ್ಬರಕ್ಕೆ ಕಾರಣವಾಗಲಿದೆ ಇಂತಹ ಪರಿಸ್ಥಿತಿ ೧೯೬೨ ರಲ್ಲಿ ಮತ್ತು ೧೯೯೨-೯೩ ರಲ್ಲಿ ನಿರ್ಮಾಣವಾಗಿತ್ತು. ೨೦೨೦ ರಲ್ಲಿ ಶನಿ ಗ್ರಹ ಮಕರರಾಶಿಯಲ್ಲಿ ಪ್ರವೇಶ ಮಾಡುವಾಗ ಭಾರತ ಮತ್ತು ಚೀನಾದ ನಡುವೆ ಸಂಘರ್ಷ ಏರ್ಪಟ್ಟಿತ್ತು ಎಂದು ಹೇಳಿದರು.