ಆದರ್ಶ ಗುರುಸೇವೆಯ ಆದರ್ಶ ಉದಾಹರಣೆಯೆಂದರೆ ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜರು !

೧೩ ಮಾರ್ಚ್ ೨೦೨೨ ರಂದು ಸನಾತನದ ಪ್ರೇರಣಾಸ್ಥಾನರಾಗಿರುವ ಪ.ಪೂ. ರಾಮಾನಂದ ಮಹಾರಾಜರ ಪುಣ್ಯತಿಥಿ ಇದೆ. ಆ ನಿಮಿತ್ತ….

ಸಂತ ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ರೊಂದಿಗೆ ‘ಸಂಪೂರ್ಣ ಜೀವನ ನೆರಳಿನಂತಿದ್ದು ಅವರ ಅವಿರತ ಸೇವೆಯನ್ನು ಮಾಡುವ ಮತ್ತು ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜ’ರ (ರಾಮಜಿದಾದಾ) ೮ ನೇ ಪುಣ್ಯತಿಥಿ ಇದೆ. ಆ ನಿಮಿತ್ತ ಅವರ ಅಲೌಕಿಕ ಜೀವನ ಚರಿತ್ರೆಯನ್ನು ಸಂಕ್ಷಿಪ್ತದಲ್ಲಿ ನೀಡುತ್ತಿದ್ದೇವೆ.

ಪ.ಪೂ. ರಾಮಾನಂದ ಮಹಾರಾಜರ ಪೂರ್ವಾಶ್ರಮದ ಹೆಸರು ಶ್ರೀ. ರಾಮಚಂದ್ರ ಲಕ್ಷ್ಮಣ ನಿರಗುಡಕರ ! ರಾಮಜಿದಾದಾರವರ ಜನ್ಮವು ೨೦ ಅಕ್ಟೋಬರ್ ೧೯೨೪ ಈ ದಿನ ನಾಸಿಕನಲ್ಲಾಯಿತು. ಅವರ ಶಿಕ್ಷಣ ಮಧ್ಯಪ್ರದೇಶದ ಮಂದಸೌರ ಜಿಲ್ಲೆಯ ಗರೋಠ ಮತ್ತು ನಂತರ ಇಂದೂರನಲ್ಲಾಯಿತು. ೧೯೪೨ ನೇ ಇಸವಿಯಲ್ಲಿ ಮೆಟ್ರಿಕ್‌ವರೆಗೆ ಶಿಕ್ಷಣವು ಪೂರ್ಣಗೊಂಡ ನಂತರ ಮನೆಯ ಬಡತನದಿಂದಾಗಿ ನೌಕರಿ ಮಾಡಬೇಕಾಯಿತು.

೧. ಪ.ಪೂ. ರಾಮಜಿದಾದಾರವರು ಮಾಡಿದ ವಿವಿಧ ನೌಕರಿಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಾಡಿದ ಕಾರ್ಯ !

೧೯೪೨ ರಿಂದ ೪೬ ನೇ ಇಸವಿಯ ಕಾಲದಲ್ಲಿ ಅವರು ನಾಸಿಕದ ಹತ್ತಿರವಿರುವ ದೆವಳಾಲಿಯಲ್ಲಿ ಮಿಲಿಟರಿ ಇಂಜಿನೀಯರಿಂಗ್ ಸರ್ವಿಸ್‌ನಲ್ಲಿ ನೌಕರಿ ಮಾಡಿದರು. ೧೯೪೮ ನೇ ಇಸವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದರು. ದಾದಾರವರು ೧೯೪೮ ರಿಂದ ೧೯೬೪ ನೇ ಇಸವಿಯ ಕಾಲಾವಧಿಯಲ್ಲಿ ಸಂಘದ ಬಹಳಷ್ಟು ಕಾರ್ಯವನ್ನು ಮಾಡಿದರು. ೧೯೪೯ ರಲ್ಲಿ ದಾದಾರವರು ಇಂದೂರನ ‘ಗವರ್ಮೆಂಟ್ ಪ್ರೆಸ್’ನಲ್ಲಿ ನೌಕರಿಯನ್ನು ಮಾಡಿದರು. ಅಕ್ಟೋಬರ್ ೧೯೮೨ ನೇ ಇಸವಿಯಲ್ಲಿ ಅವರಿಗೆ ಅಧಿಕೃತವಾಗಿ ನಿವೃತ್ತಿ ದೊರಕಿತು; ಆದರೆ ಈ ೩೩ ವರ್ಷಗಳ ಅವಧಿಯಲ್ಲಿ ನೌಕರಿಯಲ್ಲಿದ್ದರೂ ಅವರಿಗೆ ಗುರುಸೇವೆಯಲ್ಲಿ ಎಂದಿಗೂ ಯಾವುದೇ ಅಡಚಣೆಯ ಅರಿವಾಗಲಿಲ್ಲ.

೨. ನಗುಮುಖ ಮತ್ತು ಸ್ಥಿತಪ್ರಜ್ಞ ಸ್ವಭಾವ !

‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು. ‘ಬಾಬಾರವರು, ದಾದಾರವರ ತಪ್ಪಿರಲಿ ಅಥವಾ ಇಲ್ಲದಿರಲಿ ಅವರನ್ನು ಬಹಳ ಜೋರು ಮಾಡುತ್ತಿದ್ದರು, ತೀರಾ ಚುಚ್ಚಿ ಮಾತನಾಡುತ್ತಿದ್ದರು ಮತ್ತು ಅದು ಸಹ ಎಲ್ಲರೆದುರು’. ಆದರೆ ದಾದಾರವರ ಮೇಲೆ ಎಂದಿಗೂ ಈ ಬಗ್ಗೆ ಪರಿಣಾಮ ಕಾಣಿಸುತ್ತಿರಲಿಲ್ಲ ಅಥವಾ ಹಣೆ ಗಂಟಿಕ್ಕುತ್ತಿರಲಿಲ್ಲ. ಅವರ ನಿರ್ವಿಕಾರ ಸ್ಥಿತಿಯಲ್ಲಿ ಸೇವೆಯು ಮುಂದುವರಿಯುತ್ತಿತ್ತು. ಸೇವೆಯಲ್ಲಿ ಎಂದಿಗೂ ವ್ಯತ್ಯಯ ಬರಲಿಲ್ಲ. ಬೈಗಳು ಮತ್ತು ಪುಷ್ಟವೃಷ್ಟಿ ಅವರ ಮಟ್ಟಿಗೆ ಒಂದೇ ಸಮನಾಗಿದ್ದವು. ಬಾಬಾ ಒಂದು ಸಲ ಓರ್ವ ಭಕ್ತನಿಗೆ, ‘ನಾನು ರಾಮಜಿಯನ್ನು ಸ್ಥಿತಪ್ರಜ್ಞನನ್ನಾಗಿ ಮಾಡಿದ್ದೇನೆ. ಆದುದರಿಂದಲೇ ನನ್ನ ಬಾಯಿಯಿಂದ ಸುರಿಮಳೆಯಾಗತೊಡಗಿದರೆ, ದಾದಾ ಸ್ಥಿತಪ್ರಜ್ಞತೆಯ ಛತ್ರಿಯನ್ನು ತೆರೆದು ಶಾಂತವಾಗಿ ಎದ್ದು ನಿಲ್ಲುತ್ತಾರೆ’, ಎಂದು ಹೇಳಿದರು.

೩. ಗುರುಪ್ರಾಪ್ತಿ

ಅಕ್ಟೋಬರ್ ೧೯೫೬ ನೇ ಇಸವಿಯಲ್ಲಿ ರಾಮಜಿದಾದಾರವರು ಓರ್ವ ಮಿತ್ರನ ಹೇಳಿಕೆಯ ಮೇರೆಗೆ ತಮ್ಮ ಪತ್ನಿ (ಸೌ. ಅಕ್ಕಾ) ಯೊಂದಿಗೆ ಓರ್ವ ಸಂತರ ದರ್ಶನಕ್ಕಾಗಿ ಹೋದರು. ಆ ಸಂತರೆಂದರೆ ಅವರ ಗುರು ಪ.ಪೂ. ಶ್ರೀ ಅನಂತಾನಂದ ಸಾಯೀಶ ಇವರು ! ಅದೇ ತಿಂಗಳಲ್ಲಿ ಗುರುಗಳ ಚರಣಗಳು ರಾಮಜಿದಾದಾರವರ ಮನೆಯಲ್ಲಿ ಮೊದಲ ಬಾರಿಗೆ ಸ್ಪರ್ಶ ಮಾಡಿದವು. ಕೆಲವು ವಾರಗಳ ನಂತರ ಗುರುಗಳು ಅನೇಕ ಸಲ ಮನೆಗೆ ಬರತೊಡಗಿದರು. ನಂತರ ಗುರುಗಳ ವಾಸ್ತವ್ಯ ರಾಮಜಿ ದಾದಾರವರ ಮನೆಯಲ್ಲಿಯೇ ಆಯಿತು. ಅವರೊಂದಿಗೆ ದಿನೂ ಸಹ(ಸಂತ ಭಕ್ತರಾಜ ಮಹಾರಾಜ) ಇರುತ್ತಿದ್ದರು. ಈಗ ಮಾತ್ರ ಪ್ರತಿದಿನ ಭಜನೆ ಮತ್ತು ಅನ್ನ ಭಂಡಾರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯತೊಡಗಿದವು.

೪. ಪ.ಪೂ. ಬಾಬಾರವರ ಮಾಡಿದ ಅವಿರತ ಸೇವೆ !

‘ಪ.ಪೂ. ಶ್ರೀ ಸಾಯೀಶರ ದೇಹತ್ಯಾಗದ ನಂತರ ದಾದಾರವರು ಪ.ಪೂ. ಬಾಬಾರವರೊಂದಿಗೆ ನೆರಳಿನಂತೆ ಇರುತ್ತಿದ್ದರು. ಅವರು ಇಂದೂರಿನಲ್ಲಿರಲಿ ಅಥವಾ ಮಹಾರಾಷ್ಟ್ರದಲ್ಲಿರಲಿ, ದೆಹಲಿಯಲ್ಲಿರಲಿ ಅಥವಾ ವಿಶಾಖಪಟ್ಟಣಮ್‌ದಲ್ಲಿರಲಿ ಅವರು ಅಲ್ಲಿರುತ್ತಿದ್ದರು. ದಾದಾರವರಿಗೆ ಕೇವಲ ಭಜನೆ ಮಾಡುವಾಗ ವಿಶ್ರಾಂತಿ ಸಿಗುತ್ತಿತ್ತು. ತಾಳ ಬಾರಿಸುವವರು ದಾದಾರವರೇ ಆಗಿರುತ್ತಿದ್ದರು. ಒಂದು ಪಕ್ಕಕ್ಕೆ ಕುಳಿತುಕೊಂಡು ತಾಳವನ್ನು ಬಾರಿಸುತ್ತಿದ್ದರು ಮತ್ತು ಭಜನೆ ಹೇಳುತ್ತಿದ್ದರು. ಅದು ಸಹ ತಾಸುಗಟ್ಟಲೇ. ಇತರ ಸಮಯದಲ್ಲಿಯೂ ಅವರು ವಿಶ್ರಾಂತಿಯನ್ನು ಪಡೆಯುತ್ತಿರಲಿಲ್ಲ.’ – ಶ್ರೀ. ದಾದಾ ದಳವಿ

ಬಾಬಾರವರ ಬಾಯಿಯಿಂದ ಹೊರಟ ಶಬ್ದಗಳನ್ನು ಸಹಿಸಲು ದಾದಾರವರು ತನು-ಮನದಿಂದ ದಕ್ಷರಾಗಿದ್ದರು. ಪರವೂರುಗಳಿಗೆ ಹೋಗುವುದಿರಲಿ ಅಥವಾ ಭಜನೆಗೆ ಹೋಗುವುದಿರಲಿ. ಅವರು ರಾತ್ರಿ ಹಗಲು ನೋಡದೇ ಯಾವಾಗಲೂ ಸೇವಾವ್ರತಧಾರಣೆ ಮಾಡಿದಂತೆ ನಿಶ್ಚಲರಾಗಿರುತ್ತಿದ್ದರು. ಬಾಬಾರವರದು ಕೇವಲ, ಭಜನೆ, ಆದರೆ ದಾದಾರವರದು ನೌಕರಿ ಮತ್ತು ಭಜನೆ ಇವೆರಡು ಇರುತ್ತಿದ್ದವು ! ದಾದಾ ಯಾವಾಗಲೂ ತತ್ಪರ ! ಗುರುನಿಷ್ಠೆ ಮತ್ತು ಗುರುಗಳ ಬಗೆಗಿನ ಪ್ರೇಮವನ್ನು ಕಲಿಯುವುದಿದ್ದರೆ ಅದನ್ನು ಬಾಬಾರವರೊಂದಿಗೆ ನೆರಳಿನಂತಿದ್ದ, ಅವರ ಸೇವೆ ಮಾಡುವ ದಾದಾರವರಿಂದ ಕಲಿಯಬಹುದು.

‘ಗುರುಸೇವೆ ಮತ್ತು ಗುರು ಚಿಂತನೆಯಲ್ಲಿ ಯಾವಾಗಲೂ ಇದ್ದುದರಿಂದ ದಾದಾರವರಿಗೆ ತಮ್ಮ ಕುಟುಂಬದ ಕಡೆಗೆ ನೋಡಲು ಸಮಯ ಸಿಗುತ್ತಿರಲಿಲ್ಲ; ಆದರೆ ಸೇವೆಯಲ್ಲಿ ಮಗ್ನರಾಗಿರುವಾಗ ನೆನಪಾದರೂ ಆಗುತ್ತಿತ್ತೋ ಇಲ್ಲವೋ, ಯಾರಿಗೆ ಗೊತ್ತು !’ ಬಾಬಾ, “ಇವರು ಕುಟುಂಬದ ಚಿಂತೆಯನ್ನು ಮಾಡುವುದಿಲ್ಲ, ಅವರಿಗೆ ಏನೂ ಬೇಕು, ಏನು ಬೇಡ ಎಂಬುದನ್ನು ನೋಡುವುದಿಲ್ಲವೆಂದು ನನಗೆ ಅವರ ಕಾಳಜಿ ವಹಿಸಬೇಕಾಗುತ್ತದೆ”, ಎಂದು ಹೇಳುತ್ತಿದ್ದರು. – ಶ್ರೀ. ದಾದಾ ದಳವಿ

೫. ಆದರ್ಶ ಶಿಷ್ಯ

ಅ. ೧೯೫೬ ರಿಂದ ೧೯೯೫ ನೇ ಇಸವಿಯವರೆಗೆ, ಸತತ ೪೦ ವರ್ಷಗಳ ಕಾಲ ರಾಮಜಿದಾದಾರವರು ನೆರಳಿನಂತೆ ಬಾಬಾರೊಂದಿಗೆ ಇದ್ದರು. ತನು-ಮನ-ಧನ ಈ ಎಲ್ಲವುಗಳ ತ್ಯಾಗವನ್ನು ಶಿಷ್ಯನು ಹೇಗೆ ಮಾಡಬೇಕು ಎಂಬುದರ ಸಾಕಾರರೂಪವೆಂದರೆ ರಾಮಜಿದಾದಾ.

ಆ. ಬಾಬಾರವರಿಗೆ, ಯಾರಾದರೂ ಏನಾದರೂ ಅರ್ಪಣೆ ಮಾಡಿದರೆ, ಬಹುತೇಕ ಬಾರಿ ದಾದಾರವರಿಗು ಸಹ ಅರ್ಪಣೆಯನ್ನು ಮಾಡುತ್ತಿದ್ದರು. ದಾದಾ ಆ ವಸ್ತು, ಹಣ ಇತ್ಯಾದಿಗಳನ್ನು ಬಾಬಾರಿಗೆ ಕೊಡುತ್ತಿದ್ದರು.

ಇ. ಪ.ಪೂ. ಬಾಬಾರವರ ಶಬ್ದಗಳನ್ನು, ಆಜ್ಞೆಯೆಂದು ಸ್ವೀಕರಿಸಿ ಶಾಂತರಾಗಿದ್ದು ಪಾಲನೆ ಮಾಡುತ್ತಿದ್ದರು, ತಕರಾರು ಮಾಡದೇ, ಪ್ರತಿಕ್ರಿಯೆ ವ್ಯಕ್ತಪಡಿಸದೇ ಆಜ್ಞೆಯ ಪಾಲನೆ ಹೇಗೆ ಮಾಡಬೇಕೆಂಬ ಆದರ್ಶ ಉದಾಹರಣೆಯೆಂದರೆ ದಾದಾ ಆಗಿದ್ದರು.

೬. ಪ.ಪೂ. ರಾಮಾನಂದ ಮಹಾರಾಜರು

ಕಠಿಣ ಸೇವೆಗಳಿಂದ, ೧೯೮೭ ನೇ ಇಸವಿಯಲ್ಲಿ ಮೊರಟಕ್ಕಾ ಆಶ್ರಮದಲ್ಲಿ ನೆರವೇರಿದ ವಿಷ್ಣುಯಾಗದ ಸಮಯದಲ್ಲಿ ಬಾಬಾರವರು ದಾದಾರವರ ನಾಮಕರಣವನ್ನು ‘ರಾಮಾನಂದ’ ಎಂದು ಮಾಡಿದರು ಮತ್ತು ಅವರನ್ನು ಭಾವೂ ಬಿಡವಯೀಯವರೊಂದಿಗೆ ಉತ್ತರಾಧಿಕಾರಿಯನ್ನಾಗಿ ಮಾಡಿದರು. ನಮ್ಮೊಂದಿಗೆ ಮಾತನಾಡುವಾಗ ದಾದಾರವರ ಅವಸ್ಥೆಯ ವರ್ಣನೆಯನ್ನು ಬಾಬಾರವರು ‘ಸ್ಥಿತಪ್ರಜ್ಞ’ರೆಂದು ಮಾಡಿದ್ದಾರೆ. ‘ಅಧ್ಯಾತ್ಮದ ಅಭ್ಯಾಸಕಾಲದ ಸ್ಥಿತಪ್ರಜ್ಞೆಯ ಲಕ್ಷಣಗಳು ಯಾವುವು ?’, ‘ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ | ಸ್ಥಿತಧಿಃ ಕಿಂ ಪ್ರಭಾಷೆತ ಕಿಮಾಸಿತ ವ್ರಜೆತ ಕಿಮ್ || (ಶ್ರೀಮದ್ಭಗವದ್ಗೀತೆ ೨.೫೪)’, ಎಂಬುದನ್ನು ತಿಳಿದುಕೊಳ್ಳಲು ಗೀತೆಯ ಅಭ್ಯಾಸ ಮಾಡುವುದು ಬೇಕಿಲ್ಲ, ಆದರೆ ದಾದಾರವರ ಜೀವನದ ಅಭ್ಯಾಸ ಮಾಡಿದರೆ ಥಟ್ಟನೆ ತಿಳಿಯುವುದು.

೭. ಸ್ವತಃ ಗುರುಗಳು ಮಾಡಿದ ಗೌರವ

ಅ. ‘ಭಕ್ತರಾಜರು ಅನೇಕರಾಗಬಹುದು; ಆದರೆ ರಾಮಜಿಯಾಗುವುದು ಕಠಿಣವಿದೆ’, ಎಂಬುದರ ಅರ್ಥ ಹೇಗಿದೆಯೆಂದರೆ, ಮಹಾರಾಜರೆಂದು ತಿರುಗಾಡುವುದು ಸುಲಭವಿದೆ; ಆದರೆ ಸತತವಾಗಿ ಶಿಷ್ಯನೆಂದು ಸೇವೆಯನ್ನು ಮಾಡುವುದು ಕಠಿಣವಿದೆ.

ಆ. ಅಮೃತ ಮಹೋತ್ಸವದ ಪ್ರಾತಃಕಾಲ ಬಾಬಾರವರು ಕು. ಸೀಮಾ ಮತ್ತು ಶ್ರೀ. ಭೋಸೆಕರ ಇವರಿಗೆ, “ರಾಮಜಿಯವರಿಗೆ ನಮಸ್ಕಾರ ಮಾಡಿದರೆ ನನಗೆ ತಲುಪುತ್ತದೆ”, ಎಂದು ಹೇಳಿದರು.

ಪ.ಪೂ. ಬಾಬಾಜಿಯವರು ಜೀವಮಾನವಿಡಿ ನೆರಳಿನಂತಿದ್ದು ಸೇವೆಯನ್ನು ಮಾಡುವ ಪ.ಪೂ. ರಾಮಜಿದಾದಾರವರು ಸಹ ಕೊನೆಯವರೆಗೆ ಪ.ಪೂ. ಬಾಬಾರವರ ಆಜ್ಞಾಪಾಲನೆಯನ್ನು ಮಾಡುತ್ತಾ ಭಕ್ತರಿಗೆ ಮತ್ತು ಸಮಾಜಕ್ಕೆ ಸಾಧನೆ ಮತ್ತು ಅಧ್ಯಾತ್ಮದ ಮಹತ್ವವನ್ನು ಹೇಳಿದರು. ಅವರು ಫಾಲ್ಗುಣ ಶುಕ್ಲ ಪಕ್ಷ ದಶಮಿಯಂದು (೧೧ ಮಾರ್ಚ್ ೨೦೧೪ ಈ ದಿನ) ದೇಹತ್ಯಾಗ ಮಾಡಿದರು.

(ಆಧಾರ : ಸನಾತನದ ಗ್ರಂಥ ‘ಸಂತ ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವ, ದೇಹತ್ಯಾಗ ಮತ್ತು ಉತ್ತರಾಧಿಕಾರಿ’ (ಮರಾಠಿ ಭಾಷೆಯಲ್ಲಿರುವ ಗ್ರಂಥ)