ಮಸೀದಿಯೊಳಗೆ ಶುಕ್ರವಾರದ ನಮಾಜ ನಡೆಯುತ್ತಿರುವಾಗ ಆತ್ಮಾಹೂತಿ ಸ್ಫೋಟ !

ಪೇಶಾವರದ ಮಸೀದಿಯಲ್ಲಿ ಆದ ಬಾಂಬ್ ಸ್ಫೋಟದಲ್ಲಿ 36 ಜನರ ಮರಣ, 50ಕ್ಕಿಂತಲೂ ಹೆಚ್ಚು ಜನರಿಗೆ ಗಾಯ

* ಮತಾಂಧರು ಎಲ್ಲಿ ಅಲ್ಪಸಂಖ್ಯಾತರಾಗಿರುತ್ತಾರೆ ಅಲ್ಲಿ ಅವರು ಬಹುಸಂಖ್ಯಾತರಿಗೆ ತೊಂದರೆಯನ್ನು ನೀಡಿ ಅವರು ತಮ್ಮ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಾರೆ ಹಾಗೂ ಎಲ್ಲಿ ಬಹುಸಂಖ್ಯಾರಾಗಿರುತ್ತಾರೆ, ಅಲ್ಲಿ ಅಲ್ಪಸಂಖ್ಯಾತರ ನರಮೇಧ ಮಾಡುತ್ತಾರೆ ಹಾಗೂ ಎಲ್ಲಿ ಎಲ್ಲರೂ ಮತಾಂಧರಿರುತ್ತಾರೆ ಅಲ್ಲಿ ಒಬ್ಬರಿಗೊಬ್ಬರು ಸಾಯಿಸುತ್ತಾರೆ ! -ಸಂಪಾದಕರು 

* ಪಾಕಿಸ್ತಾನಲ್ಲಿ ಸುಳ್ಳು ‘ಕೇಸರಿ ಭಯೋತ್ಪಾದನೆ’ ಇಲ್ಲದಿರುವಾಗಲೂ ಮಸೀದಿಗಳಲ್ಲಿ ಬಾಂಬ್ ಸ್ಫೋಟ ಏಕೆ ಆಗುತ್ತದೆ ?, ಇದು ಭಾರತದಲ್ಲಿಯ ಕಪಟ ಜಾತ್ಯತೀತವಾದಿ ರಾಜಕೀಯ ಪಕ್ಷ ಹಾಗೂ ನೇತಾರರು ಹೇಳಬಲ್ಲರೆ ? -ಸಂಪಾದಕರು 

ಪೇಶಾವರ (ಪಾಕಿಸ್ತಾನ) – ಇಲ್ಲಿಯ ಒಂದು ಮಸೀದಿಯಲ್ಲಿ ಶುಕ್ರವಾರದ ನಮಾಜ ನಡೆಯುತ್ತಿರುವಾಗ ಆದಂತಹ ಆತ್ಮಾಹೂತಿ ಬಾಂಬ್ ಸ್ಫೋಟದಲ್ಲಿ 36 ಜನರು ಮೃತ ಪಟ್ಟಿದ್ದಾರೆ ಹಾಗೂ 50 ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಮಾಜ್‍ನ ಸಮಯದಲ್ಲಿ ಓರ್ವ ಆತ್ಮಹೂತಿ ಭಯೋತ್ಪಾದಕನು ತನ್ನನ್ನು ಸ್ಫೋಟಕದ ಮೂಲಕ ಸಿಡಿಸಿಕೊಂಡಿದ್ದಾನೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಗಳವೆ. ಈ ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯು ಸ್ವೀಕರಿಸಿಲ್ಲ.