ಅರ್ಚಕರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ಪರಿಣಾಮ !
* ಈಗ ಕೇಂದ್ರದ ಭಾಜಪ ಸರಕಾರವು ದೇಶದಾದ್ಯಂತ ಸರಕಾರಿಕರಣಗೊಂಡಿರುವ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ ! – ಸಂಪಾದಕರು
ಡೆಹ್ರಾಡೂನ್ : ಅರ್ಚಕರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದಿಂದ ಉತ್ತರಾಖಂಡದ ಭಾಜಪ ಸರಕಾರವು ಚಾರಧಾಮ್ (ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ) ಮಂದಿರದ ನಿರ್ವಹಣಾ ಕಾನೂನು ರದ್ದುಗೊಳಿಸಿದೆ. ಮುಖ್ಯಮಂತ್ರಿ ಪುಷ್ಕರ್‍ಸಿಂಗ್ ಧಾಮಿ ಇವರ ಸರಕಾರವು ಚಳಿಗಾಲದ ಆಧಿವೇಶನದಲ್ಲಿ ಈ ಕಾನೂನನ್ನು ರದ್ದುಗೊಳಿಸುವಂತೆ ಮಸೂದೆಯನ್ನು ಅಂಗಿಕರಿಸಿ ರಾಜ್ಯಪಾಲರ ಸಹಿಗಾಗಿ ಕಳುಹಿಸಲಾಗಿತ್ತು. ರಾಜ್ಯಪಾಲರು ಅದರ ಮೇಲೆ ಮೊಹರು ಮಾಡಿದ ನಂತರ ಕಾನೂನನ್ನು ರದ್ದುಗೊಳಿಸಲಾಯಿತು. ಇದಾದ ಬಳಿಕ ಸರಕಾರವು ಆ ರೀತಿಯ ಮಸೂದೆಯನ್ನೂ ಹೋರಡಿಸಿದೆ. ಈ ಕಾನೂನಿನ ವಿರುದ್ಧ ಭಾಜಪದ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ಇವರು ಕೂಡಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕಾನೂನನ್ನು ರದ್ದು ಪಡಿಸಿದ ನಂತರ ಚಾರಧಾಮ ಮಂದಿರಗಳ ವ್ಯವಸ್ಥೆಯು ಮೊದಲಿನಂತೆಯೇ ಇರುತ್ತದೆ. ಕೇದಾರನಾಥ ಮತ್ತು ಬದ್ರಿನಾಥ ಮಂದಿರಗಳ ನಿರ್ವಹಣೆಯನ್ನು `ಬದ್ರಿನಾಥ ಮಂದಿರ ಸಮಿತಿ’ಯು ನೋಡಿಕೊಳ್ಳುತ್ತದೆ.
Priests regain control of Char Dham shrines in Uttarakhand
The priests of the Char Dham shrines and the BJP-led state government had been at loggerheads on the issue since November 2019.https://t.co/Z4kBXOuHbv
— The Times Of India (@timesofindia) March 1, 2022
ಭಾಜಪದ ಅಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ನವೆಂಬರ 27, 2019 ರಂದು ಮಂತ್ರಿ ಮಂಡಲದ ಸಭೆಯಲ್ಲಿ `ಉತ್ತರಾಖಂಡ್ ಚಾರಧಾಮ ಮಂದಿರ ನಿರ್ವಹಣಾ ಮಸೂದೆ’ಯನ್ನು ಅನುಮೋದಿಸಿದ್ದರು. ಡಿಸೆಂಬರ್ 9, 2019 ರಂದು ಈ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗಿಕರಿಸಲಾಯಿತು. ನಂತರ ರಾಜ್ಯಪಾಲರ ಹಸ್ತಾಕ್ಷರಕ್ಕಾಗಿ ಕಳುಹಿಸಲಾಗಿತು. ರಾಜ್ಯಪಾಲರು ಅದರ ಮೇಲೆ ಮೊಹರು ಹಾಕಿದ ನಂತರ ಈ ಕಾನೂನು ಅಸ್ತಿತ್ವಕ್ಕೆ ಬಂದಿತ್ತು. ಸರಕಾರವು ಫೆಬ್ರುವರಿ 25, 2020 ರಂದು ಅಧಿಸೂಚನೆಯನ್ನು ಹೊರಡಿಸಿ ಕಾರ್ಯದರ್ಶಿ ಮಂಡಳಿಯನ್ನು ಸಹ ನೇಮಿಸಿತ್ತು. ಮುಖ್ಯಮಂತ್ರಿ ಇದರ ಅಧ್ಯಕ್ಷರಾಗಿದ್ದು ಸಾಂಸ್ಕ್ರತಿಕ ಮಂತ್ರಿ ಉಪಾಧ್ಯಕ್ಷರಾಗಿದ್ದರು. ಚಾರಧಾಮ ಮಂದಿರಗಳ ಅರ್ಚಕರು `ನಮ್ಮ ಧಾರ್ಮಿಕ ಹಕ್ಕುಗಳ ಅಪಹಾಸ್ಯ ಮಾಡಲಾಗುತ್ತಿದೆ’, ಎಂದು ಹೇಳುತ್ತಾ ಈ ಕಾನೂನಿಗೆ ಬಲವಾಗಿ ವಿರೋಧಿಸಿದ್ದರು, ಅದೇ ರೀತಿ ಹಿಂದುತ್ವನಿಷ್ಠರೂ ಸಹ ಇದರ ವಿರುದ್ಧ ಧ್ವನಿ ಎತ್ತಿದ್ದರು. ಅಂತಿಮವಾಗಿ, ಹಾಲಿ ಮುಖ್ಯಮಂತ್ರಿ ಧಾಮಿ ಇವರು ಈ ಕಾನೂನನ್ನು ರದ್ದುಗೊಳಿಸಬೇಕಾಯಿತು.