ರಶಿಯಾದಿಂದ ಉಕ್ರೇನ ಸೈನ್ಯ ನೆಲೆಯ ಮೇಲೆ ನಡೆದ ಆಕ್ರಮಣದಲ್ಲಿ 70 ಸೈನಿಕರು ಸಾವು

ಕೀವ್(ಉಕ್ರೇನ) – ಉಕ್ರೇನ ಮತ್ತು ರಶಿಯಾ ನಡುವಿನ ಯುದ್ಧ 6ನೇ ದಿನಕ್ಕೆ ಅತ್ಯಂತ ಭೀಕರ ರೂಪವನ್ನು ಪಡೆದುಕೊಂಡಿದೆ. ರಶಿಯಾ ಉಕ್ರೇನನ ಒಖ್ತಿಯಾರ್ಕ ನಗರದ ಸೈನ್ಯನೆಲೆಯ ಮೇಲೆ ಬೃಹತ್ ಆಕ್ರಮಣ ನಡೆಸಿದೆ. ಇದರಲ್ಲಿ ಉಕ್ರೇನಿನ 70ಕ್ಕಿಂತ ಅಧಿಕ ಸೈನಿಕರು ಮರಣ ಹೊಂದಿದ್ದಾರೆ. ಈ ನಗರ ಖಾರ್ಕಿವ್ ಮತ್ತು ಕೀವ್ ಈ ನಗರಗಳ ಮಧ್ಯದಲ್ಲಿದೆ. ರಶಿಯಾ ಸೈನ್ಯ ವೇಗವಾಗಿ ಉಕ್ರೇನ ರಾಜಧಾನಿ ಕೀವ ಕಡೆಗೆ ಮುಂದುವರಿಯುತ್ತಿದೆ. ರಶಿಯಾ ತನ್ನ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸಿದೆ. ರಶಿಯಾ ಸೈನ್ಯ ಪಡೆಯು 64 ಕಿ.ಮಿ. ದೂರ ಇದೆಯೆಂದು ಉಪಗ್ರಹದ ಮುಖಾಂತರ ತೆಗೆದ ಛಾಯಾಚಿತ್ರಗಳಿಂದ ಕಂಡು ಬಂದಿದೆ. ರಶಿಯಾ ಉಕ್ರೇನಗೆ ಕಳುಹಿಸಿರುವ ಇಲ್ಲಿಯವರೆಗಿನ ಅತಿ ದೊಡ್ಡ ಸೈನ್ಯ ಪಡೆಯಾಗಿದೆ.

ರಶಿಯಾದಿಂದ ಖಾರ್ಕಿವ ನಗರದ ಮುಖ್ಯ ಸರಕಾರಿ ಕಚೇರಿಯ ಮೇಲೆ ಬಾಂಬ್ ಎಸೆತ

ರಶಿಯಾ ರಾಜಧಾನಿ ಕೀವ ಬಳಿಕ ಅತ್ಯಂತ ಮಹತ್ವದ ನಗರವಾಗಿರುವ ಖಾರ್ಕಿವ ಮುಖ್ಯ ಸರಕಾರಿ ಕಟ್ಟಡದ ಮೇಲೆ ಬಾಂಬ್ ಎಸೆದಿದೆ.

ರಶಿಯಾ ಉಕ್ರೇನ್ ಮೇಲೆ ನಿಷೇಧಿಸಲ್ಪಟ್ಟಿರುವ `ವ್ಯಾಕ್ಯೂಮ್ ಬಾಂಬ್’ ಎಸೆದಿದೆ

ರಶಿಯಾ ಮಾರ್ಚ 28 ರಂದು ರಾತ್ರಿ ಉಕ್ರೇನ್ ಮೇಲೆ `ವ್ಯಾಕ್ಯೂಮ್ (ಥರ್ಮೋಬಾರಿಕ್) ಬಾಂಬ್’ ಮೂಲಕ ಆಕ್ರಮಣ ನಡೆಸಿದೆಯೆಂದು ಉಕ್ರೇನ್ ತಿಳಿಸಿದೆ. ಈ ಆಕ್ರಮಣದಲ್ಲಿ ಎಷ್ಟು ಜನರು ಮರಣ ಹೊಂದಿದ್ದಾರೆ ಅಥವಾ ಎಷ್ಟು ಜನರಿಗೆ ಹಾನಿಯಾಗಿದೆ? ಎಂದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. `ಜಿನೀವಾ ಒಪ್ಪಂದ’ ದಂತೆ ಈ ಬಾಂಬ್ ಉಪಯೋಗವನ್ನು ನಿಷೇಧಿಸಲಾಗಿದೆ. ಇದನ್ನು` ಫಾದರ ಆಫ್ ಆಲ್? ಬಾಂಬ್’ ಎಂದೂ ಹೇಳುತ್ತಾರೆ.

ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳು ಪಾರಂಪಾರಿಕ ಮದ್ದುಗುಂಡುಗಳನ್ನು ಉಪಯೋಗಿಸುವುದಿಲ್ಲ. ಇದು ಅತ್ಯಂತ ಸಾಮಥ್ರ್ಯಶಾಲಿ ಸ್ಫೋಟಕದಿಂದ ತುಂಬಿರುತ್ತದೆ. ಈ ಶಕ್ತಿಶಾಲಿ ಸ್ಫೋಟಕವು ಆಸುಪಾಸಿನ ವಾತಾವರಣದ ಪ್ರಾಣವಾಯುವನ್ನು ಹೀರಿಕೊಳ್ಳುತ್ತದೆ. ಥರ್ಮೋಬಾರಿಕ್ ಬಾಂಬ್ ಅನ್ನು ಜಗತ್ತಿನಲ್ಲಿಯೇ ಪರಿಣಾಮಕಾರಿ ಬಾಂಬ್ ಆಗಿದೆ. 7 ಸಾವಿರ 100 ಕಿಲೋ ಭಾರದ ಈ ಬಾಂಬ್ ಉಪಯೋಗಿಸಿದರೆ ಕಟ್ಟಡಗಳು ಮತ್ತು ಮನುಷ್ಯರು ಸರ್ವನಾಶವಾಗುತ್ತದೆ. ಈ ಹಿಂದೆಯೂ ರಶಿಯಾ 2016ರಲ್ಲಿ ಸಿರಿಯಾ ಮೇಲೆ `ವ್ಯಾಕ್ಯೂಮ್ ಬಾಂಬ್’ ಉಪಯೋಗಿಸಿತ್ತು. ಈ ಬಾಂಬ್ ಸ್ಫೋಟದಿಂದ `ಅಲ್ಟ್ರಾಸೋನಿಕ್ ಶಾಕ್ ವೇವ್?’ ಹೊರಬೀಳುತ್ತದೆ ಮತ್ತು ಅತ್ಯಧಿಕ ವಿನಾಶವನ್ನುಂಟು ಮಾಡುತ್ತದೆ.

ಅಮೇರಿಕೆಯ `ಮದರ ಆಫ್ ಬಾಂಬ್’ಗೆ ಪ್ರತ್ಯುತ್ತರವೆಂದು ರಶಿಯಾದ `ಫಾದರ್ ಆಫ್ ಆಲ್ ಬಾಂಬ್’.

ಅಮೇರಿಕೆಯು 2003 ರಲ್ಲಿ `ಮದರ ಆಫ್ ಆಲ್? ಬಾಂಬ್?’ ತಯಾರಿಸಿತ್ತು. ಅದರ ಹೆಸರು ಜೀಬೀಯು –43/ಬೀ ಆಗಿದೆ. ಅದು 11 ಟನ್? `ಟಿಎನ್ ಟಿ’ ಶಕ್ತಿಯಿಂದ ಸ್ಫೋಟಗೊಳಿಸುವ ಕ್ಷಮತೆಯನ್ನು ಹೊಂದಿದೆ. ಆದರೆ ರಶಿಯಾದ `ವ್ಯಾಕ್ಯೂಮ್ ಬಾಂಬ್?’ 44 ಟನ್? `ಟಿಎನ್ ಟಿ’ ಶಕ್ತಿಯಿಂದ ಸ್ಫೋಟಗೊಳಿಸುವ ಕ್ಷಮತೆಯನ್ನು ಹೊಂದಿದೆ. ಅಮೇರಿಕಾ ತಯಾರಿಸಿರುವ ಬಾಂಬ್ ಗೆ ಪ್ರತ್ಯುತ್ತರವೆಂದು ರಶಿಯಾ `ಫಾದರ ಆಫ್ ಆಲ್ ಬಾಂಬ್’ ತಯಾರಿಸಿದೆ. ಈ ಬಾಂಬ್ 300 ಮೀಟರಗಳ ಪರಿಧಿಯನ್ನು ಹಾನಿಗೊಳಿಸಬಲ್ಲದು. ಈ ಬಾಂಬ್? ಯುದ್ಧ ವಿಮಾನದ ಮೂಲಕ ಎಸೆಯಲಾಗುತ್ತದೆ ಮತ್ತು ಅದು ಗಾಳಿಯಲ್ಲಿ ಸ್ಫೋಟಗೊಳ್ಳುತ್ತದೆ ಹಾಗೂ ಗಾಳಿಯಲ್ಲಿರುವ ಪ್ರಾಣವಾಯುವನ್ನು ಹೀರಿಕೊಳ್ಳುತ್ತದೆ. ಅತ್ಯಧಿಕ ಉಷ್ಣತೆ ನಿರ್ಮಾಣವಾಗಿ ದೊಡ್ಡ ಸ್ಫೋಟವಾಗುತ್ತದೆ. ಇದರಿಂದ ಸಾಮಾನ್ಯ ಸ್ಫೋಟಕ್ಕಿಂತ ಅಧಿಕ ಅವಧಿಯವರೆಗೆ ಸ್ಫೋಟದ ಲಹರಿಗಳ ನಿರ್ಮಾಣವಾಗುತ್ತದೆ. ಮಾನವನ ಶರೀರ ಹೊಗೆಯಲ್ಲಿ ರೂಪಾಂತರಗೊಳಿಸುವ ಕ್ಷಮತೆಯು ಈ ಬಾಂಬ್ ನಲ್ಲಿ ಇದೆ. ಚಿಕ್ಕ ಅಣುಶಸ್ತ್ರದಂತೆಯೇ ಅದರ ಪ್ರಭಾವ ನಿರ್ಮಾಣವಾಗುತ್ತದೆ. ಈ ಶಕ್ತಿಶಾಲಿ ಬಾಂಬ್ ನಿಂದ ಅಣ್ವಸ್ತ್ರಗಳಂತೆ ಪರ್ಯಾವರಣಕ್ಕೆ ಯಾವುದೇ ಹಾನಿಯಿಲ್ಲ.

ಮಾನವಾಧಿಕಾರ ಸಂಘಟನೆಯಿಂದ ರಶಿಯಾ ವಿರೋಧ

ಅಮೇರಿಕೆಯಲ್ಲಿರುವ ಉಕ್ರೇನ ರಾಯಭಾರಿ ಮತ್ತು ಮಾನವಾಧಿಕಾರ ಸಂಘಟನೆಯು ರಶಿಯಾ ಉಕ್ರೇನ್ ಮೇಲೆ `ವ್ಯಾಕ್ಯೂಮ್ ಬಾಂಬ್’ ಮತ್ತು `ಕ್ಲಸ್ಟರ ಬಾಂಬ್’ ಮೂಲಕ ಆಕ್ರಮಣ ನಡೆಸಿದೆ ಎಂದು ಹೇಳಿಕೆ ನೀಡಿದೆ. ಮಾನವಾಧಿಕಾರ ಸಂಘಟನೆಗಳಾದ `ಆಮ್ನೆಸ್ಟಿ ಇಂಟರನ್ಯಾಶನಲ್?’ ಮತ್ತು `ಹ್ಯೂಮನ್ ರೈಟ್ಸ ವಾಚ್?’ ಇವರು ರಶಿಯಾದ ಈ ಕ್ರಮವನ್ನು ವಿರೋಧಿಸಿ, `ರಶಿಯಾದ ಸೈನ್ಯ ದೊಡ್ಡ ಪ್ರಮಾಣದಲ್ಲಿ ನಿರ್ಬಂಧಿಸಿರುವ ಕ್ಲಸ್ಟರ ಯುದ್ಧ ಸಾಮಗ್ರಿಗಳನ್ನು ಉಪಯೋಗಿಸುತ್ತಿದೆ. ರಶಿಯಾ ಈ ಅಪಾಯಕಾರಿ ಬಾಂಬ್? ಈಶಾನ್ಯ ಉಕ್ರೇನ್ ನಲ್ಲಿರುವ ಪ್ರೀ ಸ್ಕೂಲ ನಗರದ ಮೇಲೆ ಎಸೆದಿದೆ, ಅಲ್ಲಿ ನಾಗರೀಕರು ಆಶ್ರಯ ಪಡೆಯಲು ಗುಂಪುಗೂಡಿದ್ದಾರೆ ಎಂದು ಹೇಳಿದೆ.

ಅಮೇರಿಕೆಯೂ ಅಣ್ವಸ್ತ್ರಗಳನ್ನು ಆಕ್ರಮಣ ನಡೆಸಲು ಸಿದ್ಧಗೊಳಿಸಿದೆ

ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುಟಿನ್? ತಮ್ಮ ಅಣ್ವಸ್ತ್ರ ಕ್ಷಿಪಣಿಯಾಸ್ತ್ರವನ್ನು ಸಿದ್ಧ ಪಡಿಸಿ ಇಟ್ಟುಕೊಳ್ಳುವಂತೆ ಆದೇಶ ನೀಡಿದ ಬೆನ್ನ ಹಿಂದೆಯೇ, ಅಮೇರಿಕೆಯ ರಾಷ್ಟ್ರಾಧ್ಯಕ್ಷರಾಗಿರುವ ಜೋ ಬೈಡನ್ ಇವರು `ಯೂರೋಪನ್ನು ರಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಅಣ್ವಸ್ತ್ರ ಯುದ್ಧದ ಕುರಿತು ಅಮೇರಿಕೆ ಹೆದರುವ ಕಾರಣವಿಲ್ಲ . ಈ ಆಕ್ರಮಣಕ್ಕೆ ಅಮೇರಿಕಾ ತಕ್ಕ ಉತ್ತರ ನೀಡಬಲ್ಲದು’. ಎಂದು ಹೇಳಿದ್ದಾರೆ,