ಕೀವ (ಯುಕ್ರೇನ್) – ರಷ್ಯಾ ಮತ್ತು ಯುಕ್ರೇನ್ ಇವರಲ್ಲಿನ ಚರ್ಚೆಯ ಮೊದಲ ಸುತ್ತು ವಿಫಲವಾದ ನಂತರ ಮಾರ್ಚ್ 2 ರಂದು 2 ನೇ ಸುತ್ತಿನ ಮಾತುಕತೆ ನಡೆಯುವುದಿತ್ತು. ಈ ಚರ್ಚೆ ಮೊದಲೇ ಯುಕ್ರೇನ್‍ನ ರಾಷ್ಟ್ರಾಧ್ಯಕ್ಷ ಝೆಲೇಕ್ಸಿ ಇವರು ರಷ್ಯಾಗೆ ಯುದ್ಧ ವಿರಾಮ ಘೋಷಿಸಲು ಒತ್ತಾಯಿಸಿದ್ದರು. ಹಾಗೂ ರಶಿಯಾ `ಯುಕ್ರೇನ್‍ನಿನ ಸೈನ್ಯವು ಶಸ್ತ್ರವನ್ನು ಕೆಳಗಿಡಬೇಕು’, ಎಂದು ಷರತ್ತು ವಿಧಿಸಿದ್ದತ್ತು; ಆದರೆ ಪ್ರತ್ಯಕ್ಷದಲ್ಲಿ ಚರ್ಚೆಗೆ ಯುಕ್ರೇನ್‍ನಿನ ಶಿಷ್ಟ ಮಂಡಲ ಬಾರದೇ ಇದ್ದರಿಂದ ಈ ಸಭೆ ನಡೆಯಲಿಲ್ಲ. ಯುಕ್ರೇನ್ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಈ ಮೊದಲು ರಷ್ಯಾದ ವಿರುದ್ಧ ಮನವಿ ದಾಖಲಿಸಿದೆ. ಅದರ ಮೇಲೆ 7 ಮತ್ತು 8 ಮಾರ್ಚ್ ಈ ದಿನದಂದು ವಿಚಾರಣೆ ನಡೆಯಲಿದೆ.