ಕರ್ನಾಟಕದ ಹಿಜಾಬ್ ವಿವಾದದ ಪ್ರಕರಣದಲ್ಲಿ ‘ಕ್ಯಾಂಪಸ ಫ್ರಂಟ ಆಪ್ ಇಂಡಿಯಾ’ದ ವಿರುದ್ಧ ದೂರು ದಾಖಲು

ಉಡುಪಿ – ಉಡುಪಿ ಜಿಲ್ಲೆಯ ಸರಕಾರಿ ಕನಿಷ್ಠ ಮಹಿಳಾ ಮಹಾವಿದ್ಯಾಲಯದ ಕೆಲವು ಶಿಕ್ಷಕರಿಗೆ ಬೆದರಿಕೆಯನ್ನು ಹಾಕಿದ ಪ್ರಕರಣದಲ್ಲಿ ‘ಕ್ಯಾಂಪಸ ಫ್ರಂಟ್ ಆಪ್ ಇಂಡಿಯಾ’ (ಸಿ.ಎಪ್.ಐ) ಈ ಸಂಘಟನೆಯ ಸದಸ್ಯರ ವಿರುದ್ಧ ಪ್ರಾಥಮಿಕ ಮಾಹಿತಿಯ ವರದಿ (ಎಫ್.ಐ.ಆರ್) ದಾಖಲಿಸಲಾಗಿದೆ ಎಂದು ಕರ್ನಾಟಕ ಸರಕಾರವು ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ‘ರಾಜ್ಯದಲ್ಲಿಯ ಹಿಜಾಬ್ ವಿವಾದದ ಸಂಬಂಧದಲ್ಲಿ ಸಿ.ಎಫ್.ಐ. ಈ ಸಂಘಟನೆಯ ನಿಲುವು ಏನು ?’ ಇದರ ಮಾಹಿತಿಯನ್ನು ನೀಡಲು ನ್ಯಾಯಾಲಯವು ಸರಕಾರಕ್ಕೆ ಹೇಳಿತ್ತು. ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಅನುಮತಿಯನ್ನು ನೀಡದಿರುವುದನ್ನು ಖಂಡಿಸಿ ಒಂದು ಮಹಾವಿದ್ಯಾಲಯದ 6 ವಿದ್ಯಾರ್ಥಿನಿಯರು ಜನವರಿ 1 ರಂದು ಸಿ.ಎಪ್.ಐ. ಈ ಸಂಘಟನೆಯ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪರವನ್ನು ಮಂಡಿಸಿದ್ದರು.