ಹಿಂದೂಗಳು ವಿಶ್ವಕಲ್ಯಾಣದ ವಿಚಾರವನ್ನು ಮಂಡಿಸಿದರೆ ಮುಸಲ್ಮಾನರು ಹಿಂದೂಗಳ ವಿನಾಶದ ವಿಚಾರ ಮಾಡುತ್ತಾರೆ ! – ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ರಾಯಪೂರ (ಛತ್ತೀಸಗಡ) – ಯಾರು ಹಿಂದೂಗಳಿಗೆ ‘ಕಾಫೀರ’ ಎಂದು ಹೇಳುತ್ತಾರೆ, ಅವರಿಂದಲೇ ಹಿಂದೂಗಳಿಗೆ ಅಪಾಯವಿದೆ, ಅವರು ತಮ್ಮ ಪೂರ್ವಜರನ್ನೇ ‘ಕಾಫೀರ’ ಎಂದು ಹೇಳುತ್ತಿದ್ದಾರೆ; ಏಕೆಂದರೆ ಭಾರತದಲ್ಲಿನ ಎಲ್ಲರ ಪೂರ್ವಜರು ಸನಾತನ ವೈದಿಕ ಆರ್ಯ ಹಿಂದೂಗಳಾಗಿದ್ದರು. ನಾವು ವಿಶ್ವಕಲ್ಯಾಣದ ವಿಚಾರವನ್ನು ಮಂಡಿಸುತ್ತೇವೆ ಆದರೆ ಮುಸಲ್ಮಾನರು ಹಿಂದೂಗಳ ವಿನಾಶದ ವಿಚಾರ ಮಾಡುತ್ತಾರೆ, ಎಂದು ಪುರಿ (ಓಡಿಶಾ)ಯಲ್ಲಿನ ಪೂರ್ವಾನ್ಮಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮೀ ನಿಶ್ಚಲಾನಂದ ಸರಸ್ವತಿಯವರು ಒಂದು ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ಈ ಸಮಯದಲ್ಲಿ ವಿವಿಧ ವಿಷಯಗಳ ಮೇಲೆ ವಿಚಾರವನ್ನು ಮಂಡಿಸಿದರು.

ಶಂಕರಾಚಾರ್ಯರು ಮಂಡಿಸಿದ ವಿಚಾರಗಳು

೧. ತರುಣರನ್ನು ಧರ್ಮ ಹಾಗೂ ಆಧ್ಯಾತ್ಮದೊಂದಿಗೆ ಜೋಡಿಸಬೇಕು !

ಈಗಿನ ತರುಣರು ಸನಾತನ ಪರಂಪರೆಯಿಂದ ದೂರವಾಗಿದ್ದಾರೆ. ಅವರಿಗೆ ವಿಜ್ಞಾನದ ಶಿಕ್ಷಣದೊಂದಿಗೆ ಧರ್ಮ ಮತ್ತು ಆಧ್ಯಾತ್ಮದೊಂದಿಗೆ ಜೋಡಿಸಬೇಕು. ಅದರಿಂದ ಅವರು ಜಾಗೃತರಾಗುವರು ರಾಷ್ಟ್ರದ ಶಕ್ತಿಯಾಗುವರು, ಹಾಗೆಯೇ ಅದರಿಂದ ರಾಷ್ಟ್ರರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಉದ್ದೇಶವು ಯಶಸ್ವಿಯಾಗುವುದು. ಇದು ಎಲ್ಲ ಸಂಪ್ರದಾಯಗಳಿಗೆ ಲಾಭದಾಯಕವಾಗಿದೆ; ಏಕೆಂದರೆ ನಮಗೆ ವಿಶ್ವಕಲ್ಯಾಣ ಬೇಕಿದೆ.

೨. ಪ್ರತಿಯೊಂದು ಕುಟುಂಬ ತಮ್ಮ ಮಕ್ಕಳಿಗೆ ಸನಾತನ ಸಂಸ್ಕೃತಿಯ ಅನುಸಾರ ಶಿಕ್ಷಣ ನೀಡಬೇಕು !

ನಮ್ಮ ಸನಾತನ ವ್ಯವಸ್ಥೆಯು ಶಾಸ್ತ್ರಸಮ್ಮತ ಸಿದ್ಧಾಂತಗಳ ಮೇಲೆ ಆಧರಿಸಿದೆ. ಸಮಾಜದ ನಿರ್ಮಿತಿಯು ಸುಸಂಸ್ಕಾರಿತ, ಸುಶಿಕ್ಷಿತ ಮತ್ತು ಸುಸಂಸ್ಕೃತ ಆಚಾರ ವಿಚಾರಗಳಿಂದಾಗಿ ಆಗುತ್ತಿರುತ್ತದೆ. ಆಗಲೇ ರಾಮರಾಜ್ಯದ ವ್ಯವಸ್ಥೆಯು ನಿರ್ಮಾಣವಾಗುವುದು. ಇದನ್ನು ಯಾವುದೇ ಸರಕಾರ ಮಾಡಲಾರದು. ಪ್ರತಿಯೊಂದು ಕುಟುಂಬವು ತಮ್ಮ ಮಕ್ಕಳಿಗೆ ಸನಾತನ ಸಂಸ್ಕೃತಿಯ ಅನುಸಾರ ಶಿಕ್ಷಣ ನೀಡಬೇಕು, ಆಗಲೇ ಪೋಷಕ ವಾತಾವರಣದ ನಿರ್ಮಾಣವಾಗುತ್ತದೆ ಹಾಗೂ ಅದೇ ಹಿಂದೂ ರಾಷ್ಟ್ರವಾಗಿರುವುದು. ಇದರಲ್ಲಿ ಆಧ್ಯಾತ್ಮಿಕ ಶಕ್ತಿಯು ಅಪಾರ ಪ್ರಮಾಣದಲ್ಲಿರುವುದು. ಇದರಲ್ಲಿ ಯುವಶಕ್ತಿಯ ಭೂಮಿಕೆಯು ಮಹತ್ವದ್ದಾಗಿದೆ. ಇಂದಿನ ಯುವಶಕ್ತಿಯು ದಿಗ್ಭ್ರಮೆಗೊಳಗಾಗಿದ್ದು ನಿರಾಸೆಯಿಂದ ಪೀಡಿತವಾಗಿದೆ.

೩. ಹಿಂದೂ ರಾಷ್ಟ್ರವು ಸವರ್ಸಮಾವೇಶಕವಾಗಿರಲಿದೆ !

‘ಹಿಂದೂ ರಾಷ್ಟ್ರದಲ್ಲಿ ಮುಸಲ್ಮಾನರು ಇರುತ್ತಾರೆಯೇ ?’ ಎಂಬ ಪ್ರಶ್ನೆಗೆ ಶಂಕರಾಚಾರ್ಯರು ‘ಹಿಂದೂ ರಾಷ್ಟ್ರದಲ್ಲಿ ಸುಸಂಸ್ಕೃತ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಾಣ ಮಾಡಲು ಕೊಡುಗೆ ನೀಡುವ ಪ್ರತಿಯೊಂದು ಪಂಥ ಹಾಗೂ ಜಾತಿಗಳನ್ನು ಸ್ವಾಗತಿಸಲಾಗುವುದು.

೪. ರಾಜಕೀಯ ಪಕ್ಷಗಳಿಗೆ ‘ತಮ್ಮಿಂದ ಧರ್ಮಸಂಸತ್ತು ನಡೆಯಬೇಕು’ ಎಂದು ಅನಿಸುತ್ತದೆ !

ಧರ್ಮಸಂಸತ್ತಿನ ವಿಷಯದಲ್ಲಿ ವಿಹಿಂಪದ ಆಗಿನ ಅಧ್ಯಕ್ಷರಾದ ಅಶೋಕ ಸಿಂಘಲರವರು ನನ್ನ ಬಳಿ ೭೦ ಬಾರಿ ಬಂದಿದ್ದರು. ಅವರು ಧರ್ಮಸಂಸತ್ತನ್ನು ಸ್ಥಾಪಿಸಿದರು; ಆದರೆ ಈಗ ಭಾಜಪ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳಿಗೆ ತಮ್ಮಿಂದ ಧರ್ಮಸಂಸತ್ತು ನಡೆಯಬೇಕು ಎಂದು ಅನಿಸುತ್ತದೆ.

೫. ವಾದವು ನಡೆಯುತ್ತಿರುವುದರಿಂದ ಹಿಜಾಬಿನ ಮೇಲೆ ಮಾತನಾಡುವುದು ಯೋಗ್ಯವಲ್ಲ !

ಹಿಜಾಬಿನ ವಾದದ ಮೇಲೆ ಶಂಕರಾಚಾರ್ಯರು ‘ನನ್ನ ಬಳಿ ನೇತಾರರು ಬಂದರೆ ನಾನು ಅವರಿಗೆ ಎಲ್ಲ ಸ್ಥಿತಿಯನ್ನು ತಿಳಿಸಿ ಹೇಳುವೆನು. ನನ್ನ ವಿಚಾರವನ್ನು ಸರ್ವೋಚ್ಚ ನ್ಯಾಯಾಲಯವೂ ನಿರಾಕರಿಸಲಾರದು. ಈಗ ವಾದವು ನಡೆಯುತ್ತಿರುವುದರಿಂದ ಈ ಬಗ್ಗೆ ಮಾತನಾಡುವುದು ಯೋಗ್ಯವಲ್ಲ. ಅದರಿಂದ ವಾದವು ಉಲ್ಬಣಗೊಳ್ಳಬಹುದು. ಆದುದರಿಂದ ಮೊದಲಿಗೆ ಎಲ್ಲ ಪರಿಸ್ಥಿತಿಯನ್ನು ತಿಳಿದುಕೊಳ್ಳುವೆನು’ ಎಂದು ಹೇಳಿದರು.