ಭಾರತ ಸರಕಾರವು ಆಕ್ಷೇಪವೆತ್ತಿ ಸಿಂಗಾಪೂರಿನ ರಾಜದೂತರಿಗೆ ಸಮನ್ಸ್
* ಇದರಲ್ಲಿ ಭಾರತವು ಆಕ್ಷೇಪಿಸುವಂತಹದ್ದು ಏನಿದೆ ? ಸಿಂಗಾಪೂರಿನ ಪ್ರಧಾನಮಂತ್ರಿಗಳು ಸತ್ಯ ಸಂಗತಿಯನ್ನೇ ಹೇಳಿದ್ದಾರೆ. ಈ ಸತ್ಯವನ್ನು ಸ್ವೀಕರಿಸಿ ಭವಿಷ್ಯದಲ್ಲಿ ಈ ವಿಷಯದಲ್ಲಿ ಹೇಗೆ ಬದಲಾವಣೆ ಮಾಡಬಹುದು ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿದೆ !- ಸಂಪಾದಕರು * ಈ ಸಂಗತಿಯು ಸ್ವಾತಂತ್ರ್ಯಾನಂತರದ 74 ವರ್ಷಗಳಲ್ಲಿ ಆಗಿ ಹೋದ ರಾಜಕಾರಣಿಗಳಿಗೆ ಲಜ್ಜಾಸ್ಪದವಾಗಿದೆ !- ಸಂಪಾದಕರು |
ನವದೆಹಲಿ – ಸಿಂಗಾಪೂರಿನ ಪ್ರಧಾನಮಂತ್ರಿ ಲೀ ಸಿಯೆನ ಲೂಂಗರವರು ತಮ್ಮ ಸಂಸತ್ತಿನಲ್ಲಿ ಮಾತನಾಡುವಾಗ `ನೆಹರೂರವರ ಭಾರತದಲ್ಲಿ ಸದ್ಯ ಅರ್ಧಕ್ಕಿಂತಲೂ ಹೆಚ್ಚಿನ ಸಂಸದರ ಮೇಲೆ ಅಪರಾಧ ನೋಂದಣಿಯಾಗಿದೆ’ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಭಾರತವು ತನ್ನ ಆಕ್ಷೇಪವನ್ನು ನೋಂದಾಯಿಸುತ್ತ ವಿದೇಶ ಮಂತ್ರಾಲಯವು ಭಾರತದಲ್ಲಿನ ಸಿಂಗಾಪೂರದ ರಾಜದೂತರಾದ ಸಾಯಮನ ವೊಂಗರಿಗೆ ಸಮನ್ಸ್ ಕಳಿಸಿದೆ. `ಸಿಂಗಾಪೂರದ ಪ್ರಧಾನಮಂತ್ರಿಗಳು ನೀಡಿರುವ ಹೇಳಿಕೆಯು ಅನಗತ್ಯವಾಗಿದ್ದು ನಾವು ಈ ಅಂಶವನ್ನು ಅವರಿಗೆ ಹೇಳಿದ್ದೇವೆ’, ಎಂದು ಓರ್ವ ಅಧಿಕಾರಿಗಳು ಹೇಳಿದರು.
(ಸೌಜನ್ಯ: Hindustan Times )
1. `ವರ್ಕರ್ಸ ಪಾರ್ಟಿ’ಯ ಮಾಜಿ ಸಂಸದರ ವಿರುದ್ಧ ಇರುವ ಖಟ್ಲೆಗಳ ವಿಷಯದಲ್ಲಿನ ಸಮಿತಿಯ ವರದಿಯ ಮೇಲೆ ಚರ್ಚೆಯಾಗುತ್ತಿರುವಾಗ ಸಿಂಗಾಪೂರಿನ ಪ್ರಧಾನಮಂತ್ರಿಗಳಾದ ಲೀ ಸಿಯನ ಲೂಂಗರವರು `ತಮ್ಮ ದೇಶಕ್ಕಾಗಿ ಹೋರಾಡುವವರು ಹಾಗೂ ಸ್ವಾತಂತ್ರ್ಯವನ್ನು ದೊರಕಿಸಿ ಕೊಡುವವರು ಹೆಚ್ಚಿನಾಂಶ ಮಹಾನ ಧೈರ್ಯ, ಅಪಾರ ಸಂಸ್ಕೃತಿ ಮತ್ತು ಉತ್ಕೃಷ್ಟ ಕ್ಷಮತೆಯಿರುವ ಅಪವಾದಾತ್ಮಕ ವ್ಯಕ್ತಿಯಾಗಿರುತ್ತಾರೆ. ಅವರು ಸಂಘರ್ಷ ಮಾಡುತ್ತ ಜನರ ಹಾಗೂ ದೇಶದ ನೇತಾರರಾಗುತ್ತಾರೆ. ಇವರಲ್ಲಿ ಡೇವ್ಹಿಡ ಬೆನ-ಗುರುಯನ್ಸ ಹಾಗೂ ಜವಾಹರಲಾಲ ನೆಹರೂರವರೂ ಇದ್ದಾರೆ. ನೆಹರೂರವರ ಭಾರತವು ಇಂದು ಹೇಗಾಗಿದೆ ಅಂದರೆ ಮಾಧ್ಯಮಗಳ ವಾರ್ತೆಗಳ ಪ್ರಕಾರ ಲೋಕಸಭೆಯಲ್ಲಿನ ಸುಮಾರು ಅಧಕ್ರ್ಕಿಂತಲೂ ಹೆಚ್ಚಿನ ಸಂಸದರ ಮೇಲೆ ಬಲಾತ್ಕಾರ ಮತ್ತು ಹತ್ಯೆಗಳ ಆರೋಪದೊಂದಿಗೆ ಅಪರಾಧಗಳ ಪ್ರಕರಣಗಳು ಬಾಕಿ ಉಳಿದಿವೆ. ಅಂದರೆ ಇವುಗಳ ಪೈಕಿ ಅನೇಕ ಆರೋಪಗಳು ರಾಜಕೀಯ ದೃಷ್ಟಿಯಿಂದ ಪ್ರೇರಿತವಾಗಿವೆ ಎಂದು ಹೇಳಲಾಗುತ್ತವೆ’ ಎಂದು ಹೇಳಿದ್ದರು.
2. ಪ್ರಧಾನಮಂತ್ರಿ ಲೀ ಸಿಯೆನ ಲೂಂಗರವರು `ಸರಕಾರದಲ್ಲಿನ ಜನರು ಅಖಂಡತೆಯನ್ನು ಕಾಯ್ದುಕೊಂಡರೆ ಹಾಗೂ ಪ್ರತಿಯೊಬ್ಬರಿಗಾಗಿ ಸಮಾನ ನಿಯಮ ಮತ್ತು ಗುಣಮಟ್ಟವನ್ನು ನಿರ್ಧರಿಸಿದರೆ, ಸಿಂಗಾಪೂರಿನ ಜನರು ಅವರ ನೇತಾರರು, ವ್ಯವಸ್ಥೆ ಮತ್ತು ಸಂಸ್ಥೆಗಳ ಮೇಲೆ ವಿಶ್ವಾಸವನ್ನಿಡಬಹುದು’, ಎಂದೂ ಹೇಳಿದರು.