ಪರಾತ್ಪರ ಗುರು ಡಾ. ಆಠವಲೆಯವರು ಒಂದು ಕೈಬೆರಳನ್ನು ನೀರಿನಲ್ಲಿ ಮುಳುಗಿಸಿದ ನಂತರ ನೀರಿನಲ್ಲಿ ವಿವಿಧ ಬಣ್ಣಗಳು ನಿರ್ಮಾಣವಾಗುವುದು ಮತ್ತು ಅದರ ಆಧ್ಯಾತ್ಮಿಕ ವಿಶ್ಲೇಷಣೆ !

ಪರಾತ್ಪರ ಗುರು ಡಾ. ಆಠವಲೆ

‘೧೮.೯.೨೦೨೧’ ಈ ದಿನ ಪರಾತ್ಪರ ಗುರು ಡಾಕ್ಟರರು ಸಂತರು ಮತ್ತು ಸಾಧಕರೆದುರು ಒಂದು ಪ್ರಯೋಗವನ್ನು ಮಾಡಿದರು. ಅದರಲ್ಲಿ ಅವರು ಒಂದು ಪ್ಲಾಸ್ಟಿಕಿನ ಬಿಳಿ ಪಾತ್ರೆಯಲ್ಲಿಟ್ಟಿದ್ದ ನೀರಿನಲ್ಲಿ ಒಂದೊಂದರಂತೆ ಒಂದು ಕೈಯ ಐದೂ ಬೆರಳುಗಳನ್ನು ಮುಳುಗಿಸಿದರು. ಆಗ ನೀರಿನ ಬಣ್ಣವು ಉತ್ತರೋತ್ತರ ಬದಲಾವಣೆ ಆಗುವುದು ಕಂಡು ಬಂದಿತು. ಅದರ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರು ನೀರಿನಲ್ಲಿ ಬೆರಳುಗಳನ್ನು ಮುಳುಗಿಸುವ ಮೊದಲಿನ ಬಣ್ಣವಿಲ್ಲದ ನೀರು

 

ಪರಾತ್ಪರ ಗುರು ಡಾ. ಆಠವಲೆಯವರು ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದ ನಂತರ ತಿಳಿ ಗುಲಾಬಿಯಾದ ನೀರು
ವಾಚಕರಿಗೆ ಮನವಿ : ‘ಮುದ್ರಣದ ತಾಂತ್ರಿಕ ಅಡಚಣೆಯಿಂದ ಇಲ್ಲಿ ಮುದ್ರಿಸಿದ ಛಾಯಾಚಿತ್ರಗಳು ಇದ್ದ ಹಾಗೆ ಮುದ್ರಿಸಲ್ಪಡುವ ಸಾಧ್ಯತೆ ಇಲ್ಲ. ಅದಕ್ಕಾಗಿ ಮತ್ತು ಪ್ರತಿಯೊಬ್ಬರಿಗೆ ಈ ಬದಲಾವಣೆ ಕಾಣಿಸಬೇಕೆಂದು ಮತ್ತು ಅದರ ವಿಷಯ ತಿಳಿಯಬೇಕೆಂದು ಈ ಬದಲಾವಣೆಯನ್ನು ಗಣಕಯಂತ್ರದ ಸಹಾಯದಿಂದ ಇನ್ನಷ್ಟು ಎದ್ದು ಕಾಣಿಸುವಂತೆ ಮಾಡಲಾಗಿದೆ. ಮೂಲ ಛಾಯಾಚಿತ್ರಗಳು ಸ್ಪಷ್ಟವಾಗಿ ಕಾಣಿಸುವುದಕ್ಕಾಗಿ ವಾಚಕರು ‘ಸನಾತನ ಪ್ರಭಾತ’ದ ಜಾಲತಾಣದ bit.ly/3sBWVcM ಈ ಲಿಂಕ್‌ಗೆ ಭೇಟಿ ನೀಡಬೇಕು.

೧. ಪರಾತ್ಪರ ಗುರು ಡಾ. ಆಠವಲೆಯವರು ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದ ನಂತರ ನೀರಿನ ಬಣ್ಣದಲ್ಲಿ ಹಂತಹಂತವಾಗಿ ಆದ ಬದಲಾವಣೆ

ಅ. ಮೊದಲು ತರ್ಜನಿ (ತೋರುಬೆರಳು)ಯನ್ನು ನೀರಿನಲ್ಲಿ ಮುಳುಗಿಸುವುದು : ನೀರಿನ ಬಣ್ಣ ತಿಳಿಗುಲಾಬಿ ಕಾಣಿಸುವುದು

ಆ. ತರ್ಜನಿ ಮತ್ತು ಮಧ್ಯದ ಬೆರಳನ್ನು ನೀರಿನಲ್ಲಿ ಮುಳುಗಿಸುವುದು : ನೀರಿನ ಬಣ್ಣವು ಇನ್ನೂ ಗುಲಾಬಿಯಾಗಿ ಕಾಣಿಸುವುದು

ಇ. ತರ್ಜನಿ, ಮಧ್ಯದ ಬೆರಳು ಮತ್ತು ಉಂಗುರ ಬೆರಳನ್ನು ನೀರಿನಲ್ಲಿ ಮುಳುಗಿಸುವುದು : ನೀರಿನ ಬಣ್ಣವು ಇನ್ನಷ್ಟು ಗುಲಾಬಿಯಾಗಿ ಕಾಣಿಸುವುದು

ಈ. ತರ್ಜನಿ, ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಕಿರುಬೆರಳನ್ನು ನೀರಿನಲ್ಲಿ ಮುಳುಗಿಸುವುದು : ನೀರಿನ ಬಣ್ಣವು ಇನ್ನಷ್ಟು ಗುಲಾಬಿ ಕಾಣಿಸುವುದು

ಉ. ಐದೂ ಬೆರಳುಗಳನ್ನು ನೀರಿನಲ್ಲಿ ಮುಳುಗಿಸುವುದು : ಬಣ್ಣವು ಇನ್ನೂ ಹೆಚ್ಚು ಗುಲಾಬಿಯಾಗುವುದು

೨.  ಪರಾತ್ಪರ ಗುರು ಡಾ. ಆಠವಲೆಯವರು ಕೈಯ ಬೆರಳುಗಳನ್ನು ನೀರಿನಲ್ಲಿ ಮುಳುಗಿಸಿದ ನಂತರ ನೀರಿನ ಬಣ್ಣ ಗುಲಾಬಿಯಾಗುವುದರ ಹಿಂದಿನ ಅವರು ಹೇಳಿದ ಕಾರಣ !

ಕೈಯ ಕಿರುಬೆರಳಿನಿಂದ ಹೆಬ್ಬೆಟ್ಟಿನ ವರೆಗೆ ಎಲ್ಲ ಬೆರಳುಗಳಲ್ಲಿ ಪೃಥ್ವಿ, ಆಪ, ತೇಜ, ವಾಯು, ಆಕಾಶ ಈ ಪಂಚತತ್ತ್ವಗಳಿರುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರು ಮೊದಲು ತರ್ಜನಿಯನ್ನು ನೀರಿನಲ್ಲಿ ಮುಳುಗಿಸಿದಾಗ ತರ್ಜನಿಯಿಂದ (ತೋರುಬೆರಳು) ಪ್ರಕ್ಷೇಪಿಸುವ ತೇಜತತ್ತ್ವ ದಿಂದ ನೀರಿನ ಬಣ್ಣ ತಿಳಿ ಗುಲಾಬಿಯಾಯಿತು. ನಂತರ ತರ್ಜನಿಯೊಂದಿಗೆ ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಕಿರುಬೆರಳು ಹೀಗೆ ಒಂದೊಂದೇ ಬೆರಳನ್ನು ನೀರಿನಲ್ಲಿ ಮುಳುಗಿಸುತ್ತಾ ಹೋದಂತೆ ಪ್ರತಿ ಬೆರಳಿನಿಂದ ಪ್ರಕ್ಷೇಪಿಸುವ ತೇಜತತ್ತ್ವವು ನೀರಿನಲ್ಲಿ ಪ್ರವೇಶಿಸುತ್ತಾ ಹೋಗಿದ್ದರಿಂದ ನೀರಿನ ಗುಲಾಬಿ ಬಣ್ಣ ಕ್ರಮೇಣ ಹೆಚ್ಚಾಗುತ್ತಾ ಹೋಯಿತು. ನೀರಿನಲ್ಲಿ ಬೆರಳುಗಳನ್ನು ಮುಳುಗಿಸುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟಕ್ಕನುಸಾರ ಬಣ್ಣವು ಬೇರೆ ಬೇರೆ ಕಾಣಿಸುತ್ತದೆ.

೩. ಮೇಲಿನ ಪ್ರಯೋಗದ ಸಂದರ್ಭದಲ್ಲಿ ಶ್ರೀ. ರಾಮ ಹೊನಪ ಇವರು ಕೇಳಿದ ಪ್ರಶ್ನೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಅದಕ್ಕೆ ನೀಡಿದ ಉತ್ತರ

ಶ್ರೀ. ರಾಮ ಹೊನಪ

ಪ್ರಶ್ನೆ : ಸತ್ಸಂಗದಲ್ಲಿ ಉಪಸ್ಥಿತರಿದ್ದ ಕೆಲವು ಜನರೆದುರು ಮೇಲಿನ ಪ್ರಯೋಗ ಮಾಡಿದಾಗ, ನೀವು ನೀರಿನಲ್ಲಿ ಒಂದೊಂದೇ ಬೆರಳನ್ನು ಮುಳುಗಿಸಿದ ನಂತರ ನೀರಿನಲ್ಲಿ ಗುಲಾಬಿ ಬಣ್ಣ ಕ್ರಮೇಣ ಕಾಣಿಸತೊಡಗಿತು. ಈ ಪ್ರಯೋಗದ ನಂತರ ಇತರ ಉಪಸ್ಥಿತರೆದುರು ಇದೇ ಪ್ರಯೋಗವನ್ನು ಇನ್ನೊಮ್ಮೆ ಮಾಡಿದಾಗ ನೀವು ಪಾತ್ರೆಯ ನೀರಿನಲ್ಲಿ ಬೆರಳು ಮುಳುಗಿಸುವ ಮೊದಲೇ ನೀರಿನ ಮೇಲೆ ನನಗೆ ಸೂಕ್ಷ್ಮದಿಂದ ಗುಲಾಬಿ ಬಣ್ಣ ಕಾಣಿಸುತ್ತಿತ್ತು. ಅದರ ಕಾರಣವೇನು ?

ಪರಾತ್ಪರ ಗುರು ಡಾ. ಆಠವಲೆ : ನನ್ನ ಶರೀರದಿಂದ ಸತತ ಪಂಚತತ್ತ್ವಗಳ ಪ್ರಕ್ಷೇಪಣೆಯಾಗುತ್ತಿರುತ್ತದೆ. ಇದು ಅದರ ಪರಿಣಾಮವಾಗಿತ್ತು.

– ಶ್ರೀ. ರಾಮ ಪದ್ಮಾಕರ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೯.೨೦೨೧)

ಪರಾತ್ಪರ ಗುರು ಡಾ. ಆಠವಲೆಯವರು ಪ್ಲಾಸ್ಟಿಕಿನ ಪಾತ್ರೆಯಲ್ಲಿನ ನೀರಿನಲ್ಲಿ ಅವರ ಬಲಗೈಯ ಬೆರಳುಗಳನ್ನು ಮುಳುಗಿಸಿದಾಗ ನೀರಿನಲ್ಲಿ ಪಂಚತತ್ತ್ವಗಳ ಸ್ತರದಲ್ಲಿ ಗಮನಕ್ಕೆ ಬಂದ ಬದಲಾವಣೆಗಳು

ಟಿಪ್ಪಣಿ – ಬೆರಳುಗಳನ್ನು ಮುಳುಗಿಸಿದ ನೀರಿನಲ್ಲಿ ಪೃಥ್ವಿ, ಆಪ, ತೇಜ, ವಾಯು ಈ ತತ್ತ್ವಗಳ ಪ್ರಮಾಣವು ಹೆಚ್ಚಾದುದರಿಂದ ಆಯಾ ತತ್ತ್ವಗಳ ಗುಣಗಳ ಅನುಭೂತಿಯು ಹೆಚ್ಚು ಪ್ರಮಾಣದಲ್ಲಿ ಬಂದಿತು. ತದ್ವಿರುದ್ಧ ಆಕಾಶತತ್ತ್ವವು ನಿರ್ಗುಣದ ಸಮೀಪವಿರುವುದರಿಂದ ಬೆರಳುಗಳನ್ನು ಮುಳುಗಿಸಿದಾಗ ಆಕಾಶತತ್ತ್ವದ ನಿರ್ಗುಣತೆ ಕಡಿಮೆಯಾದುದರಿಂದ ನಾದ ಕಡಿಮೆ ಪ್ರಮಾಣದಲ್ಲಿ ಕೇಳಿಸಿತು.

ಅನುಕ್ರಮವಾಗಿ ಬೆರಳುಗಳಿಗೆ ಬರುವ ಗಂಧ : ಕಿರುಬೆರಳಿನಿಂದ ತರ್ಜನಿಯವರೆಗೆ ಗಂಧವು ಕಡಿಮೆಯಾಗುತ್ತಾ ಹೋಯಿತು ಮತ್ತು ಹೆಬ್ಬೆಟ್ಟಿಗೆ ಎಲ್ಲಕ್ಕಿಂತ ಕಡಿಮೆ ಪ್ರಮಾಣದಲ್ಲಿ ಗಂಧ ಬಂದಿತು.

– (ಪರಾತ್ಪರ ಗುರು) ಡಾ. ಆಠವಲೆ (೧೭.೧೧.೨೦೨೧)