ಸಪ್ತರ್ಷಿಗಳ ಆಜ್ಞೆಗನುಸಾರ ತಮಿಳುನಾಡಿನ ‘ಈಂಗೋಯಿಮಲೈ’ ಪರ್ವತಕ್ಕೆ ಹೋದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗಾದ ದೈವೀ ಅನುಭವ !

ಔಷಧಶಾಸ್ತ್ರದ ಜ್ಞಾನಿ ಸಿದ್ಧ ‘ಭೋಗರ ಋಷಿ’ಗಳ ಸ್ಥಾನದ ದರ್ಶನ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ದೇವಿಯ ಮಂದಿರದ ಹಿಂದೆ ಕಾಣಿಸಿದ ಗೂಬೆ (ಗೋಲಾಕಾರದಲ್ಲಿ ತೋರಿಸಲಾಗಿದೆ.)

 

‘ಈಂಗೋಯೀಮಲೈ’ ಪರ್ವತ ಮತ್ತು ಅದರ ಮೇಲಿರುವ ‘ಶ್ರೀಮರಗದಾಚಲೇಶ್ವರ’ ಮತ್ತು ‘ಶ್ರೀಮರಗದಂಬಿಕಾ’ ದೇವತೆಗಳ ಮಂದಿರ

೧. ಪೂ. ಡಾ. ಓಂ ಉಲಗನಾಥನ್ ಇವರು ಸದ್ಗುರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗೆ ‘ಈಂಗೋಯಿಮಲೈ’ ಪರ್ವತದ ಮೇಲೆ ಹೋಗಲು ಹೇಳುವುದು

ಶ್ರೀ. ವಿನಾಯಕ ಶಾನಭಾಗ

೧೨.೩.೨೦೨೦ ರಂದು ಸದ್ಗುರು (ಸೌ.) ಅಂಜಲಿ ಗಾಡಗೀಳರು ತಮಿಳುನಾಡಿನ ‘ಈರೋಡ್’ನಲ್ಲಿ ತಂಗಿದ್ದರು. ಆ ದಿನ ಬೆಳಿಗ್ಗೆ ಪೂ. ಡಾ. ಓಂ ಉಲಗನಾಥನ್ ಇವರ ಸಂಚಾರಿವಾಣಿ ಕರೆ ಬಂದಿತು ಹಾಗೂ ಅವರು, “೧೨.೩.೨೦೨೦ ಈ ದಿನ ಸಾಯಂಕಾಲ ಸದ್ಗುರು (ಸೌ.) ಅಂಜಲಿ ಗಾಡಗೀಳರು ೧೦೦ ಕಿ.ಮೀ. ದೂರದಲ್ಲಿರುವ ‘ಈಂಗೋಯಿಮಲೈ’ ಪರ್ವತದ ಮೇಲೆ ಹೋಗಿ ಬರಬೇಕು. ಈ ಪರ್ವತದ ಮೇಲಿನ ಶಿವ ಮಂದಿರಕ್ಕೆ ಅಗಸ್ತಿ ಋಷಿಗಳು ಜೇನುನೊಣದ ರೂಪದಲ್ಲಿ ಶಿವದರ್ಶನಕ್ಕೆ ಹೋಗಿದ್ದರು. ಈ ಪರ್ವತದ ಮೇಲೆ ಔಷಧಶಾಸ್ತ್ರದ ಜ್ಞಾನಿ ಸಿದ್ಧಪುರುಷ ‘ಭೋಗರ’ ಋಷಿಗಳು ತಪಶ್ಚರ್ಯ ಮಾಡಿದ ಸ್ಥಳವಿದೆ; ಆದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಆರೋಗ್ಯಕ್ಕಾಗಿ ಹಾಗೂ ಸಾಧಕರ ಔಷಧಕ್ಕಾಗಿ ಅಲ್ಲಿಗೆ ಹೋಗಿ ಪ್ರಾರ್ಥನೆ ಮಾಡಬೇಕು” ಎಂದು ಹೇಳಿದರು.

೨. ‘ಈಂಗೋಯಿಮಲೈ’ ಪರ್ವತದ ಮೇಲೆ ಪಚ್ಚೆಯ ಶಿವಲಿಂಗವನ್ನು ನೋಡುವಾಗ ‘ಇಂದ್ರ ಹೇಗೆ ಶಾಪಮುಕ್ತನಾಗುತ್ತಾನೆ ?’, ಎಂಬುದರ ಕಥೆ ತಿಳಿಯುವುದು

ಈ ಪರ್ವತದ ಮೇಲೆ ಶಿವನ ‘ಶ್ರೀಮರಗದಾಚಲೇಶ್ವರ’ ಎಂಬ ಹೆಸರಿನ ಮಂದಿರವಿದೆ ಹಾಗೂ ‘ಶ್ರೀಮರಗದಂಬಿಕಾ’ ಎಂಬ ಹೆಸರಿನ ಪಾರ್ವತಿ ದೇವಿಯ ಮಂದಿರವಿದೆ. ತಮಿಳುಭಾಷೆಯಲ್ಲಿ ‘ಮರಗದ’ವೆಂದರೆ ಪಚ್ಚೆ.ಇಲ್ಲಿನ ಶಿವಲಿಂಗ ಪಚ್ಚೆಯದ್ದಾಗಿದೆ. ಇಂದ್ರನಿಗೆ ಶಾಪ ಸಿಕ್ಕಿದ್ದರಿಂದ ಅವನು ಮಂಗನ ಯೋನಿಯಲ್ಲಿ ಜನ್ಮತಾಳುತ್ತಾನೆ. ಇಂದ್ರನು ಮಂಗನ ಯೋನಿಯಲ್ಲಿರುವಾಗ ವೃಕ್ಷಗಳ ಮೇಲಿರುವ ಜೇನುನೊಣಗಳ ಗೂಡು ಕದಲಲ್ಪಡುತ್ತದೆ ಹಾಗೂ ಆ ಗೂಡು ಚದುರುತ್ತದೆ. ಆಗ ಅದರಲ್ಲಿನ ಜೇನು ಪಚ್ಚೆಯ ಶಿವಲಿಂಗದ ಮೇಲೆ ಬಿದ್ದು ಜೇನಿನ ಅಭಿಷೇಕವಾಗುತ್ತದೆ. ಅದರಿಂದ ಇಂದ್ರನು ಶಾಪಮುಕ್ತನಾಗುತ್ತಾನೆ ಹಾಗೂ ಮನುಷ್ಯ ಯೋನಿಯಲ್ಲಿ ರಾಜನ ರೂಪದಲ್ಲಿ ಜನ್ಮ ತಾಳುತ್ತಾನೆ. ಆಗ ಅವನು ಪಚ್ಚೆಯ ಶಿವಲಿಂಗದ ಮಂದಿರವನ್ನು ನಿರ್ಮಿಸುತ್ತಾನೆ.

೩. ‘ಜೇನುನೊಣದ ರೂಪದಲ್ಲಿ ಬಂದು ದರ್ಶನ ಪಡೆಯಿರಿ’, ಎನ್ನುವ ಅಶರೀರವಾಣಿ ಕೇಳುವುದು; ಆದ್ದರಿಂದ ಅಗಸ್ತಿ ಮಹರ್ಷಿಗಳು ಜೇನುನೊಣದ ರೂಪ ಧರಿಸಿ ಶಿವಲಿಂಗದ ದರ್ಶನ ಪಡೆಯುವುದು

ಈ ಪರ್ವತದ ಮೇಲಿನ ಪಚ್ಚೆಯ ಶಿವಲಿಂಗದ ದರ್ಶನಕ್ಕಾಗಿ ಅಗಸ್ತಿ ಮಹರ್ಷಿಗಳು ಬರುತ್ತಾರೆ. ಆಗ ಮಂದಿರದ ಬಾಗಿಲು ಮುಚ್ಚಿರುತ್ತದೆ. ಆಗ ಅವರಿಗೆ ‘ಜೇನುನೊಣದ ರೂಪದಲ್ಲಿ ಬಂದು ದರ್ಶನ ಪಡೆಯಿರಿ’, ಎನ್ನುವ ಅಶರೀರವಾಣಿ ಕೇಳಿಸುತ್ತದೆ. ಆಗ ಅಗಸ್ತಿ ಮಹರ್ಷಿಗಳು ಜೇನುನೊಣದ ರೂಪವನ್ನು ಧರಿಸುತ್ತಾರೆ ಹಾಗೂ ಹಾರುತ್ತಾ ಮಂದಿರದ ಒಳಗೆ ಹೋಗಿ ಶಿವಲಿಂಗದ ದರ್ಶನ ಪಡೆಯುತ್ತಾರೆ. ತಮಿಳುಭಾಷೆಯಲ್ಲಿ ಜೇನುನೊಣಕ್ಕೆ ‘ತೇನ್-ಈ’, ಎಂದು ಹೇಳುತ್ತಾರೆ. ಅದರಲ್ಲಿನ ‘ತೇನ್’ ಅಂದರೆ ಜೇನು ಮತ್ತು ‘ಈ’ ನೊಣ; ಆದ್ದರಿಂದ ಈ ಪರ್ವತಕ್ಕೆ ಈಂಗೋಯಿಮಲೈ, ಅಂದರೆ, ‘ನೊಣಗಳ ಪರ್ವತ’, ಎಂಬ ಹೆಸರು ಬಂದಿದೆ.

೪. ಸಪ್ತರ್ಷಿಗಳು ಹೇಳಿದಂತೆ ಸದ್ಗುರು (ಸೌ.) ಅಂಜಲಿ ಗಾಡಗೀಳರು ಈಂಗೋಯಿಮಲೈ ಪರ್ವತದ ಮೇಲೆ ಹೋಗುವುದು ಹಾಗೂ ಔಷಧಶಾಸ್ತ್ರದ ಜ್ಞಾನಿ ‘ಭೋಗರ’ ಋಷಿಗಳ ಸ್ಥಾನದ ದರ್ಶನ ಪಡೆಯುವುದು

೧೨.೩.೨೦೨೦ ರಂದು ಸಾಯಂಕಾಲ ಸಪ್ತರ್ಷಿಗಳು ಹೇಳಿದಂತೆ ಸದ್ಗುರು (ಸೌ.) ಗಾಡಗೀಳರು ಈಂಗೋಯಿಮಲೈ ಪರ್ವತದ ಮೇಲೆ ಹೋದರು. ಅವರು ಪರ್ವತದ ಬುಡದಲ್ಲಿ ಔಷಧಶಾಸ್ತ್ರದ ಜ್ಞಾನಿ ಸಿದ್ಧ ‘ಭೋಗರ’ ಋಷಿಗಳ ಸ್ಥಾನದ ದರ್ಶನ ಪಡೆದರು. ನಂತರ ಅವರಿಗೆ ೫೫೦ ಮೆಟ್ಟಿಲುಗಳನ್ನು ಏರಿಕೊಂಡು ಪರ್ವತದ ಮೇಲೆ ಹೋಗಲಿಕ್ಕಿತ್ತು. ಆಗ ಅವರು ಸ್ಥಳೀಯ ಜನರ ಸಹಾಯದಿಂದ ಡೋಲಿಯಲ್ಲಿ ಪರ್ವತದ ಮೇಲೆ ಹೋದರು.

೫. ಪರ್ವತದ ಮೇಲೆ ಹೋಗುವಾಗ ಗಮನಕ್ಕೆ ಬಂದ ಅಂಶಗಳು

ಅ. ಈಂಗೋಯಿಮಲೈ ಪರ್ವತದ ಮೇಲೆ ಹೋಗುವಾಗ ಸದ್ಗುರು (ಸೌ.) ಅಂಜಲಿ ಗಾಡಗೀಳರ ಚತುಷ್ಚಕ್ರ ವಾಹನದ ಮುಂದೆ ಒಂದು ಭಾರದ್ವಾಜ ಪಕ್ಷಿ ಬಂತು. ಅದು ವಾಹನದ ಎದುರಿನಲ್ಲಿ ನಿಧಾನವಾಗಿ ನಡೆಯುತ್ತಾ ಹೋಗುತ್ತಿತ್ತು.

ಆ. ಮಂದಿರಕ್ಕೆ ಕರೆದುಕೊಂಡು ಹೋಗಲು ನಾವು ಡೋಲಿಯವರೊಂದಿಗೆ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳರು ವಾಹನದಲ್ಲಿ ಕುಳಿತು ನೇರವಾಗಿ ಗುಡ್ಡದ ಮೇಲಿನ ಮಂದಿರಗಳನ್ನು ನೋಡುತ್ತಿದ್ದರು. ಆಗ ಅವರಿಗೆ ಒಂದು ಸುಂದರ ಗರುಡ ಪಕ್ಷಿಯು ಮಂದಿರದ ಸುತ್ತ ತಿರುಗುವುದು ಕಾಣಿಸಿತು ಹಾಗೂ ‘ಅದು ಪ್ರದಕ್ಷಿಣೆ ಹಾಕುತ್ತಿದೆ’, ಎಂದು ಅನಿಸಿತು.

೬. ಮಂದಿರಕ್ಕೆ ಹೋದಾಗ ಬಂದ ಅನುಭವ

ಅ. ಸದ್ಗುರು (ಸೌ.) ಅಂಜಲಿ ಗಾಡಗೀಳರು ಮಂದಿರಕ್ಕೆ ಹೋದಾಗ ಅವರಿಗೆ ದೇವಿಯ ಮಂದಿರದ ಹಿಂದೆ ಗೂಬೆ ಕುಳಿತಿರುವುದು ಕಾಣಿಸಿತು. ಸದ್ಗುರು (ಸೌ.) ಅಂಜಲಿ ಗಾಡಗೀಳರು ಆ ಗೂಬೆಯ ಸಮೀಪ ಹೋದರೂ ಅದು ಕದಲಲಿಲ್ಲ.

ಆ. ನಾವು ಪೂ. ಡಾ. ಓಂ ಉಲಗನಾಥನ್ ಅವರಿಗೆ ಘಟಿಸಿದ ಪ್ರಸಂಗವನ್ನು ಹೇಳಲು ಸಂಚಾರಿವಾಣಿ ಕರೆ ಮಾಡಿದೆವು. – ಶ್ರೀ. ವಿನಾಯಕ ಶಾನಭಾಗ

ಆಗ ಅವರು ‘ಇಂದು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಮೂರು ಪಕ್ಷಿಗಳ ರೂಪದಲ್ಲಿ ದೈವೀ ಸಾಕ್ಷಿ ಸಿಕ್ಕಿತಲ್ಲ ?’ ಎಂದರು.

ಇ. ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳರು ಮಹರ್ಷಿಗಳು ಹೇಳಿದಂತೆ ಮಂದಿರದ ಶಿವನ ಮುಂದೆ ಕುಳಿತು ಪ್ರಾರ್ಥನೆ ಮಾಡುತ್ತಿದ್ದರು. ಆಗ ಅಲ್ಲಿಗೆ ಒಂದು ಜೇನುನೊಣ ಬಂತು, ಅದು ತುಂಬಾ ಹೊತ್ತು ಅಲ್ಲಿಯೇ ಇತ್ತು. ಸ್ವಲ್ಪ ಸಮಯದ ನಂತರ ಅದು ಚಿತ್ರೀಕರಣ ನಡೆಯುತ್ತಿದ್ದ ಕೆಮರಾದ ಮೇಲೆ ಹೋಗಿ ಕುಳಿತಿತು. ಇದನ್ನು ಪೂ. ಡಾ. ಓಂ ಉಲಗನಾಥನ್ ಇವರಿಗೆ ಹೇಳಿದಾಗ ಅವರು, “ಅಗಸ್ತಿ ಋಷಿಗಳು ಜೇನುನೊಣದ ರೂಪದಲ್ಲಿ ದರ್ಶನ ನೀಡಿದರು” ಎಂದರು.

ಈ. ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಮಹರ್ಷಿಗಳು ಕೆಲವೇ ಗಂಟೆಗಳ ಮೊದಲು ಮಂದಿರಕ್ಕೆ ಹೋಗಲು ಹೇಳಿದ್ದರು. ಅಷ್ಟು ಕಡಿಮೆ ಸಮಯದಲ್ಲಿ ಅಲ್ಲಿಗೆ ಹೋಗುವ ಹಾಗೂ ಗುಡ್ಡದ ಮೇಲೆ ಹತ್ತಲು ಡೋಲಿಯ ಸೌಲಭ್ಯವು ಅವರ ಕೃಪೆಯಿಂದಲೇ ಆಯಿತು.

ಇವೆಲ್ಲ ಪರಾತ್ಪರ ಗುರು ಡಾ. ಆಠವಲೆ ಮತ್ತು ಮಹರ್ಷಿಗಳ ಕೃಪೆಯಿಂದಲೇ ಸಾಧ್ಯವಾಯಿತು. ಅದಕ್ಕಾಗಿ ನಾವೆಲ್ಲ ಸಾಧಕರು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬), ಬೆಂಗಳೂರು (೧೪.೩.೨೦೨೦)

(ಟಿಪ್ಪಣಿ – ಈ ಲೇಖನವು ಮಹರ್ಷಿಗಳು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ’ ಎಂದು ಸಂಬೋಧಿಸುವ ಮೊದಲಿನದ್ದಾಗಿರುವುದರಿಂದ ಇಲ್ಲಿ ಅವರನ್ನು ‘ಸದ್ಗುರು’ ಎಂದು ಉಲ್ಲೇಖಿಸಲಾಗಿದೆ.)