ಬ್ರಿಟನ್ನಿನ ರಾಜಕುಮಾರ ಸೆರೆಮನೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಅತ್ಯಾಚಾರಗೈದ ಮಹಿಳೆಗೆ ೯೧೪ ಕೋಟಿ ರೂಪಾಯಿ ಪರಿಹಾರ !

ಬ್ರಿಟನ್ನಿನ ರಾಜಮನೆತನದವರ ಮಂಡಳಿಯ ಚಾರಿತ್ರ್ಯಹೀನ ಮತ್ತು ವ್ಯಭಿಚಾರಿ ಕೃತ್ಯಕ್ಕಾಗಿ ಕುಪ್ರಸಿದ್ಧರಾಗಿದ್ದಾರೆ. ಪ್ರಿನ್ಸ್ ಆಂಡ್ರೂಯು ಇವರ ಈ ಕೃತಿಯಿಂದ ರಾಜಮನೆತನದ ಮೇಲೆ ಇನ್ನೊಂದು ಕಳಂಕ ಹತ್ತಿತು, ಇಂತಹ ರಾಜಮನೆತನಕ್ಕೆ ಭಾರತೀಯರು ಹೊಗಳಬಾರದು, ಅಷ್ಟೇ !

ರಾಜಕುಮಾರ ಪ್ರಿಂನ್ಸ ಆಂಡ್ರೂಯು ಮತ್ತು ವರ್ಜಿನಿಯಾ ಗಿಫ್ರೆ

ಲಂಡನ್ (ಬ್ರಿಟನ್) – ಬ್ರಿಟನ್‌ನ ೬೧ ವಯಸ್ಸಿನ ರಾಜಕುಮಾರ ಪ್ರಿಂನ್ಸ ಆಂಡ್ರೂಯು ಮತ್ತು ಅವರ ವಿರೋಧದಲ್ಲಿ ಬಲಾತ್ಕಾರದ ಆರೋಪ ಮಾಡಿರುವ ವರ್ಜಿನಿಯಾ ಗಿಫ್ರೆ ಇವರಲ್ಲಿ ಒಂದು ಒಪ್ಪಂದ ನಡೆದಿದೆ. ಈ ಒಪ್ಪಂದದ ಪ್ರಕಾರ ಪ್ರಿನ್ಸ್ ಅಡ್ರೋಯು ಅವರು ಗಿಫ್ರೆ ಅವರಿಗೆ ನಷ್ಟಪರಿಹಾರ ಎಂದು ೯೧೪ ಕೋಟಿ ೪೦ ಲಕ್ಷ ರೂಪಾಯಿ ನಿಡುವವರಿದ್ದಾರೆ. ಆದ್ದರಿಂದ ಅವರು ಸೆರೆಮನೆಗೆ ಹೋಗುವುದನ್ನು ತಪ್ಪಿಸಕೊಳ್ಳ ಬಹುದು. ‘೧೭ ವರ್ಷದವರಾಗಿದ್ದಾಗ ಆಂಡ್ರೂ ಇವರು ನನ್ನ ಮೇಲೆ ೩ ಸಲ ಬಲಾತ್ಕಾರ ಮಾಡಿದ’. ಎಂದು ಗಿಫ್ರೆಯು ದೂರು ನೀಡಿದ್ದರು. ಗಿಫ್ರೆ ಅವರ ನ್ಯಾಯವಾದಿ ಡೇವಿಡ್ ಬೋಯಿಸ್ ಇವರು ಮ್ಯಾನ್ಹ್ಯಾಟನ್ ಅಲ್ಲಿನ ಫೆಡರಲ್ ನ್ಯಾಯಾಲಯದಲ್ಲಿ ದಾಖಲಿಸಿರುವ ಕಾಗದಪತ್ರಗಳಲ್ಲಿನ ಪ್ರಕಾರ, ಎರಡೂ ಕಡೆಯ ನ್ಯಾಯಾಲಯದ ಹೊರಗೆ ಒಪ್ಪಂದ ಮಾಡಿಕೊಳ್ಳಸಾಗಿದೆ ಎಂದು ಹೇಳಿದ್ದಾರೆ. ಇದರ ನಂತರ ಎರಡು ಪಕ್ಷದ ನ್ಯಾಯವಾದಿಗಳು ಮೊಕದ್ದಮೆ ರದ್ದು ಪಡಿಸಲು ಅರ್ಜಿಯನ್ನು ದಾಖಲಿಸುವವರಿದ್ದಾರೆ.

ಪ್ರಿನ್ಸ್ ಆಂಡ್ರೂ ಇವರು ಬ್ರಿಟನ್ನಿನ ರಾಣಿ ಎಲಿಜಬೆತ್ ಅವರ ಎರಡನೇ ಪುತ್ರರಾಗಿದ್ದಾರೆ. ಎಲಿಜಬೆತ್ ಇವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸಿ ಪ್ರಿನ್ಸ್ ಆಂಡ್ರೂ ಇವರಿಗೆ ಆರ್ಥಿಕ ಸಹಾಯ ಮಾಡಿರುವುದಾಗಿ ಹೇಳಲಾಗುತ್ತಿದೆ.