ಶ್ರೀಮತಿ ಸುಧಾ ಸಿಂಗಬಾಳ ಇವರು ಸನಾತನದ ೧೧೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಶ್ರೀಮತಿ ಸುಧಾ ಸಿಂಗಬಾಳ

ಫೊಂಡಾ (ಗೋವಾ) – ಸ್ಥಿರ, ತ್ಯಾಗ ವೃತ್ತಿಯ ಮತ್ತು ದೇವರ ಬಗ್ಗೆ ಶ್ರದ್ಧೆ ಹಾಗೂ ಭಾವವಿರುವ ಶ್ರೀಮತಿ ಸುಧಾ ಉಮಾಕಾಂತ ಸಿಂಗಬಾಳ (ವಯಸ್ಸು 82) ಸನಾತನದ 117ನೇ ಸಂತಪದವಿಯಲ್ಲಿ ವಿರಾಜಮಾನರಾದರು. ಫೊಂಡಾದಲ್ಲಿನ ಅವರ ವಾಸ್ತವ್ಯದಲ್ಲಿ ಒಂದು ಅನೌಪಚಾರಿಕ ಸಮಾರಂಭದಲ್ಲಿ ಈ ಶುಭವಾರ್ತೆಯನ್ನು ಘೋಷಿಸಲಾಯಿತು. ಈ ಸಮಯದಲ್ಲಿ ಪೂ. (ಶ್ರೀಮತಿ) ಸುಧಾ ಸಿಂಗಬಾಳ ಇವರ ಸುಪುತ್ರ ಹಾಗೆಯೇ ಹಿಂದು ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸಂತರಾದ ಪೂ. ನಿಲೇಶ ಸಿಂಗಬಾಳ ಇವರು ಅವರಿಗೆ ಸನ್ಮಾನಿಸಿದರು. ಈ ಸಮಯದಲ್ಲಿ ಪೂ. (ಶ್ರೀಮತಿ) ಸುಧಾ ಸಿಂಗಬಾಳ ಇವರ ಸೊಸೆ ಶ್ರೀಸತ್‍ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಮೊಮ್ಮಗ ಶ್ರೀ. ಸೋಹಮ್ (ವಯಸ್ಸು 24) ಇವರೆಲ್ಲರೂ ಉಪಸ್ಥಿತರಿದ್ದರು.

ಕಳೆದ ಅನೇಕ ವರ್ಷಗಳಿಂದ ಕುಟುಂಬದಲ್ಲಿನ ಸದಸ್ಯರಂತೆ ಸಿಂಗಬಾಳ ಕುಟುಂಬದವರ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಸುಶ್ರೀ (ಕು.) ಕಲಾ ಖೆಡೆಕರ (ವಯಸ್ಸು 53) ಇವರು ಸಹ ಶೇ. 61 ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಶುಭವಾರ್ತೆಯನ್ನು ಈ ಸಮಯದಲ್ಲಿ ಘೋಷಿಸಲಾಯಿತು.