‘ಹ್ಯುಂಡೈ’ ನಂತೆಯೇ ‘ಕಿಯಾ’ ಸಂಸ್ಥೆಯಿಂದಲೂ ಪ್ರತ್ಯೇಕತಾವಾದಿ ಕಾಶ್ಮೀರಿಗಳ ಆಂದೋಲನಕ್ಕೆ ಬೆಂಬಲ

ಈ ಸಂಸ್ಥೆಗಳ ಮೇಲೆ ಭಾರತ ಸರಕಾರವು ಇಲ್ಲಿಯವರೆಗೆ ಕಾರ್ಯಾಚರಣೆಯನ್ನು ಮಾಡುವುದು ಅಪೇಕ್ಷಿತವಿತ್ತು !

ನವದೆಹಲಿ – ‘ಹ್ಯುಂಡೈ’ ನಂತೆಯೇ ‘ಕಿಯಾ’ ಎಂಬ ಚತುಷ್ಚಕ್ರ ವಾಹನಗಳನ್ನು ನಿರ್ಮಿಸುವ ಸಂಸ್ಥೆಯ ಪಾಕಿಸ್ತಾನದಲ್ಲಿನ ಟ್ವಿಟ್ಟರ್ ಖಾತೆಯಿಂದ ಫೆಬ್ರುವರಿ 5ರಂದು ಪಾಕಿಸ್ತಾನದಿಂದ ಆಚರಿಸಲಾಗುವ ‘ಕಾಶ್ಮೀರ ದಿವಸ’ದ ನಿಮಿತ್ತ ಟ್ವೀಟ್ ಮಾಡಲಾಗಿದೆ. ಇದರೊಂದಿಗೆ ಪಾಕಿಸ್ತಾನದ ಧ್ವಜವನ್ನು ತೋರಿಸಲಾಗಿತ್ತು. ‘ನಾವು ಸಂಪೂರ್ಣ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಸಂಘಟಿತರಾಗಿ ನಿಂತಿದ್ದೇವೆ’ ಎಂದು ಹೇಳಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ನಂತರ ಈ ಟ್ವೀಟನ್ನು ತೆಗೆದು ಹಾಕಲಾಗಿದೆ. ಆದರೆ ಭಾರತೀಯರು ‘ಕಿಯಾ’ವು ಕ್ಷಮಾಯಾಚನೆ ಮಾಡಬೇಕು’, ಎಂದು ಮನವಿ ಮಾಡಿದ್ದಾರೆ. ಜನರು ‘ಪಾಕಿಸ್ತಾನಕ್ಕಿಂತಲೂ ಭಾರತದಲ್ಲಿ ಕಿಯಾದ ಹೆಚ್ಚಿನ ಗಾಡಿಗಳ ಮಾರಾಟವಾಗುತ್ತದೆ, ಆದರೂ ಕಿಯಾ ಸಂಸ್ಥೆಯು ಸುಳ್ಳುಕೋರ ಪಾಕಿಸ್ತಾನದ ಪರ ವಹಿಸಿದೆ’, ಎಂದು ಹೇಳಿದ್ದಾರೆ.