180 ಕೋಟಿ ರೂಪಾಯಿಯ 36 ಕೇಜಿ ಹೇರಾಯಿನ್ ವಶ !
ಶ್ರೀನಗರ – ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಪಾಕಿಸ್ತಾನದಿಂದ ಭಾರತಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ನುಸುಳುಕೋರರ ಪ್ರಯತ್ನವನ್ನು ಗಡಿ ಭದ್ರತಾ ಪಡೆಗಳು ವಿಫಲಗೊಳಿಸಿವೆ.
#BSF killed three #Pakistani smugglers at J&K’s #Samba sector.#JammuAndKashmir | @sunilJbhathttps://t.co/REP268A0BJ
— IndiaToday (@IndiaToday) February 6, 2022
ಇಲ್ಲಿಯ ಸಾಂಬಾ ಸೆಕ್ಟರ್‍ನಲ್ಲಿ ಫೆಬ್ರವರಿ 5 ರಂದು ರಾತ್ರಿ ಪಾಕಿಸ್ತಾನದ 3 ನುಸುಳುಕೋರರು ಭಾರತದಲ್ಲಿ ನುಸುಳಲು ಪ್ರಯತ್ನಿಸುತ್ತಿರುವಾಗ ಗಡಿ ಭದ್ರತಾ ಪಡೆಯ ಸೈನಿಕರು ಅವರನ್ನು ಸಾಯಿಸಿದ್ದಾರೆ. ಅದರ ನಂತರ ಪರಿಸರದಲ್ಲಿ ದೊಡ್ಡಪ್ರಮಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅವರಿಂದ 36 ಕೇಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಹೀರೋಯಿನ್‍ನ ಬೆಲೆ 180 ಕೋಟಿ ರೂಪಾಯಿ ಇದೆ. ಜನವರಿ ತಿಂಗಳಿನಲ್ಲಿ ರಕ್ಷಣಾ ಪಡೆ ಮತ್ತು ಭಯೋತ್ಪಾದಕರ ನಡುವೆ 11 ಚಕಮಕಿಗಳು (ಘರ್ಷಣೆ) ನಡೆದಿವೆ. ಇದರಲ್ಲಿ 21 ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಜಮ್ಮು-ಕಾಶ್ಮೀರದಲ್ಲಿ 9 ಪಾಕಿಸ್ತಾನಿ ಭಯೋತ್ಪಾದಕರು ಹತರಾಗಿದ್ದಾರೆ.