ದುಬೈ ಮತ್ತು ಅಬುಧಾಬಿಯ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನದ ನಿರ್ಮಾಣ !

ಪ್ರಧಾನ ಮಂತ್ರಿ ಮೋದಿಯವರಿಂದ ಕೃತಜ್ಞತೆ !

ಮನಾಮಾ(ಬಹರೀನ) – ಸಂಯುಕ್ತ ಅರಬ ಅಮೆರಾಟ್ಸನ ಅಬುಧಾಬಿ ಮತ್ತು ದುಬೈ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನ ನಿರ್ಮಾಣವಾಗಲಿದೆ. ಇದಕ್ಕಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಬಹರೀನ ಪ್ರಧಾನಮಂತ್ರಿ ಸಲ್ಮಾನ ಬಿನ್ ಹಮಾದ ಅಲ್ ಖಲಿಫಾರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸಲ್ಮಾನ ಬಿನ್ ಹಮಾದ ಅಲ್ ಖಲಿಫಾರೊಂದಿಗೆ ದೂರವಾಣಿಯಲ್ಲಿ ಸಂವಾದ ಮಾಡಿದರು. ಈ ಸಂದರ್ಭದಲ್ಲಿ ಅವರಲ್ಲಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಚರ್ಚೆಗಳಾದವು. ಭಾರತ ಮತ್ತು ಬಹರೀನ ಈ ಉಭಯ ದೇಶಗಳು ೨೦೨೧-೨೨ರಲ್ಲಿ ತಮ್ಮ ರಾಜಕೀಯ ಸಂಬಂಧಗಳ ಸ್ಥಾಪನೆಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಈ ಸಂವಾದದ ವಿಷಯದ ಮಾಹಿತಿಯನ್ನು ನೀಡಿದರು. ಅವರು ಮಾತನಾಡುತ್ತಾ, ಸ್ವಾಮಿ ನಾರಾಯಣ ಮಂದಿರಕ್ಕಾಗಿ ಭೂಮಿ ಹಂಚಿಕೆಯ ನಿರ್ಣಯದೊಂದಿಗೆ ಭಾರತೀಯ ಸಮುದಾಯಗಳ ಅವಶ್ಯಕತೆಯ ಬಗ್ಗೆ ಗಮನಹರಿಸಿದಕ್ಕೆ ನಾನು ಖಲಿಫಾರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದರು.