ಯುವಕರೇ, ಹಿಂದೂ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಿ !

೧೪ ಫೆಬ್ರವರಿ ೨೦೨೨ ರಂದು ‘ವೆಲೆಂಟೈನ್ ಡೇ’ ಇದೆ. ಅದರ ನಿಮಿತ್ತ…

ಶ್ರೀ. ಅತುಲ ದಿಘೆ

೧. ಹಿಂದೂ ಧರ್ಮದಲ್ಲಿ ಪ್ರೇಮವನ್ನು ನಿಷಿದ್ಧವೆಂದು ಪರಿಗಣಿಸಿಲ್ಲ

ಹಿಂದೂ ಧರ್ಮದಲ್ಲಿ ಪ್ರೇಮಕ್ಕೆ ಅಥವಾ ಪ್ರೇಮವನ್ನು ವ್ಯಕ್ತ ಪಡಿಸುವುದನ್ನು ಯಾವತ್ತೂ ನಿಷಿದ್ಧವೆಂದು ಪರಿಗಣಿಸಿಲ್ಲ. ಹಿಂದೂ ಧರ್ಮದಲ್ಲಿ ಮಾನಸಿಕ ಸ್ತರದ ಪ್ರೇಮಕ್ಕಿಂತಲೂ ಮುಂದಿನ ಆಧ್ಯಾತ್ಮಿಕ ಸ್ತರದ (ನಿರಪೇಕ್ಷ ಪ್ರೇಮವನ್ನು) ಶ್ರೇಷ್ಠವೆಂದು ನಂಬಲಾಗುತ್ತದೆ. ಪ್ರೇಮಭಾವವಿಲ್ಲದೇ ಪ್ರೀತಿ ಎಂಬ ಗುಣವನ್ನು ವಿಕಸನಗೊಳಿಸಲು ಸಾಧ್ಯವಿಲ್ಲ; ಹಾಗಿರುವಾಗ ಹಿಂದೂ ಧರ್ಮವು ಪ್ರೇಮವನ್ನು ನಿಷೇಧಿಸುವುದೇನು ?(ಹಿಂದೂಗಳ ವಿರೋಧ ವ್ಯಾಲೆಂಟೈನ್ ಡೇಯಂತಹ ಅಸಭ್ಯ, ಅಸಾಂಸ್ಕೃತಿಕ ಹಾಗೂ ಅಸಾಮಾಜಿಕ ರೂಢಿಗಳಿಗೆ ಮಾತ್ರ ಇದೆ. ಇಂತಹ ಡೇಗಳನ್ನು ಆಚರಿಸದೆಯೆ ಮಾನವನು ಆವಶ್ಯಕವಿರುವುದನ್ನು ಸಾಧ್ಯಗೊಳಿಸಲು ಸಾಧ್ಯವಿದೆ. ವ್ಯಾಲೆಂಟೈನ್ ಡೇಯನ್ನು ಆಚರಿಸುವುದರಿಂದ ಸಮಾಜದಲ್ಲಿ ಅನೈತಿಕತೆ ಹರಡುತ್ತದೆ, ಸ್ತ್ರೀಯರ ಶೀಲಹರಣವಾಗುತ್ತದೆ, ಅವರ ಮೇಲೆ ಅತ್ಯಾಚಾರವಾಗುತ್ತದೆ. ಅದಕ್ಕಾಗಿ ಜನರಿಗೆ ಅದರ ಬಗ್ಗೆ ಅರಿವು ಮೂಡಿಸುವುದು, ಅವರಿಗೆ ಪ್ರಬೋಧನೆ ಮಾಡುವುದು ಹಾಗೂ ಇಂತಹ ಅಯೋಗ್ಯ ರೂಢಿಪರಂಪರೆಗಳನ್ನು ನಿಲ್ಲಿಸುವುದೇ ಸ್ವಾಭಿಮಾನಿ ಹಿಂದೂಗಳ ಕರ್ತವ್ಯವಾಗಿದೆ. – ಸಂಕಲನಕಾರರು)

೨. ‘ವ್ಯಾಲೆಂಟೈನ್ ಡೇ’ಯನ್ನು ಆಚರಿಸುವುದರಿಂದ ತನ್ನಿಂತಾನೇ ಪ್ರೇಮ ಹೆಚ್ಚಾಗುವುದಿಲ್ಲ !

ಕೇವಲ ಇಂತಹ ಡೇಗಳನ್ನು ಆಚರಿಸುವುದರಿಂದ ನಮ್ಮಲ್ಲಿ ತನ್ನಿಂತಾನೇ ಪ್ರೇಮ ಮತ್ತು ಸ್ನೇಹವು ಹೇಗೆ ಹೆಚ್ಚಾಗುತ್ತದೆ ? ನಮ್ಮಲ್ಲಿ ಪ್ರೇಮಭಾವವನ್ನು ಹೆಚ್ಚಿಸಲು ನಾವು ಪ್ರತಿದಿನ ಪ್ರಯತ್ನಿಸಬೇಕಾಗುತ್ತದೆ. ಆಗ ಅನೇಕ ದಿನಗಳ ನಂತರ ನಮ್ಮಲ್ಲಿ ಪ್ರೇಮ ಭಾವವು ಮೂಡುತ್ತದೆ.

೩. ‘ವ್ಯಾಲೆಂಟೈನ್ ಡೇ’ಯಂದು ಮಾತ್ರ ಪ್ರೇಮವನ್ನು ವ್ಯಕ್ತಪಡಿಸಲು ಸಾಧ್ಯ, ಎಂದೇನಿಲ್ಲ !

ಹುಡುಗ-ಹುಡುಗಿಯರಲ್ಲಿ ಪರಸ್ಪರರಲ್ಲಿ ಪ್ರೇಮ ಉತ್ಪನ್ನವಾಗುವುದು ಸ್ವಾಭಾವಿಕವಾಗಿದೆ. ವ್ಯಾಲೆಂಟೈನ್ ಡೇ ಇಲ್ಲದಿದ್ದರೂ ಅವರು ಪರಸ್ಪರ ಪ್ರೇಮವನ್ನು ವ್ಯಕ್ತಪಡಿಸಬಹುದು. ‘ವ್ಯಾಲೆಂಟೈನ್ ಡೇ’ಯಂದು ಹುಡುಗ-ಹುಡುಗಿಯರು ಪ್ರೇಮವನ್ನು ವ್ಯಕ್ತಪಡಿಸದಿದ್ದರೆ, ಅವರು ಭವಿಷ್ಯದಲ್ಲಿ ಎಂದಿಗೂ ಪ್ರೇಮವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ಎಂದೇನಿಲ್ಲ.

೪. ಭಾರತದಲ್ಲಿ ವ್ಯಾಲೆಂಟೈನ್ ಡೇ ಆಚರಣೆಯಾಗುತ್ತಿರಲಿಲ್ಲ; ಆಗ ಹುಡುಗ-ಹುಡುಗಿಯರಲ್ಲಿ ಪ್ರೇಮವಿರಲಿಲ್ಲವೇ ?

೫. ಹಿಂದೂಗಳ ಕೃತಿಯಿಂದಲೇ ಪ್ರೇಮ ವ್ಯಕ್ತವಾಗುತ್ತಿರುತ್ತಿದ್ದರಿಂದ ಅವರಿಗೆ ಪಾಶ್ಚಾತ್ಯರ ಹಾಗೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’, ಎಂದು ಪದೇ ಪದೇ ಹೇಳುವ ಅವಶ್ಯಕತೆಯಿರುವುದಿಲ್ಲ

ಪಾಶ್ಚಾತ್ಯರ ವಿಚಾರಶೈಲಿಯಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಪರಸ್ಪರ ನಾನು ನಿನ್ನನ್ನು ಪ್ರೇಮಿಸುತ್ತೇನೆ (I love you), ಎಂದು ಪದೇ ಪದೇ ಹೇಳುತ್ತಾರೆ. ಯಾರಾದರೂ ಮನೆಯಿಂದ ಹೊರಡುತ್ತಿದ್ದರೆ, ಆಗ ಮುತ್ತು ಕೊಟ್ಟು ಈ ಮೇಲಿನ ವಾಕ್ಯವನ್ನು ಹೇಳುತ್ತಾರೆ. ಮೂಲತಃ ಪಾಶ್ಚಾತ್ಯರಲ್ಲಿ ಸ್ವಕೇಂದ್ರೀಕರಣ ಮತ್ತು ಸ್ವಾರ್ಥ ಹೆಚ್ಚು ಇರುವುದರಿಂದ ಅವರಿಗೆ ಇಂತಹ ವಾಕ್ಯಗಳನ್ನು ಪದೇ ಪದೇ ಉಚ್ಚರಿಸಿ ತಮ್ಮಲ್ಲಿನ ಪ್ರೇಮವನ್ನು ಸಿದ್ಧಪಡಿಸಬೇಕಾಗುತ್ತದೆ. ತದ್ವಿರುದ್ಧವಾಗಿ ಹಿಂದೂ ಧರ್ಮದಲ್ಲಿ ತ್ಯಾಗ, ವ್ಯಾಪಕತೆ ಹಾಗೂ ಪ್ರೀತಿಯನ್ನು ಹೇಗೆ ಹೆಚ್ಚಿಸಬೇಕೆಂಬುದನ್ನು ಕಲಿಸಿರುವುದರಿಂದ ಹಿಂದೂಗಳು ತಾಯಿ, ತಂದೆ ಮತ್ತು ಮಕ್ಕಳು ಪರಸ್ಪರ ‘ನಾನು ನಿನ್ನನ್ನು ಪ್ರೇಮಿಸುತ್ತೇನೆ (I love you) ಎಂದು ನಿರಂತರ ಹೇಳುವ ಅವಶ್ಯಕತೆಯಿರುವುದಿಲ್ಲ. ಅವರ ಕೃತಿಯಿಂದಲೇ ಎಲ್ಲವೂ ವ್ಯಕ್ತವಾಗುತ್ತದೆ.

೬. ಹಿಂದೂ ಯುವಕ-ಯುವತಿಯರೇ, ಇದನ್ನು ಗಮನದಲ್ಲಿಡಿ !

೬ ಅ. ನಮ್ಮ ಸಂಸ್ಕೃತಿ ಹೇಳುತ್ತದೆ, ವ್ಯಕ್ತಿಗಿಂತ ಕುಟುಂಬ, ಕುಟುಂಬಕ್ಕಿಂತ ಸಮಾಜ ಮತ್ತು ಸಮಾಜಕ್ಕಿಂತ ದೇಶವು ಹೆಚ್ಚು ಮಹತ್ವದ್ದಾಗಿದೆ. ಇದೇ ದೃಷ್ಟಿಕೋನವನ್ನಿಟ್ಟುಕೊಂಡು ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ ಇವರಂತಹ ಅನೇಕ ವೀರರು ತಮ್ಮ ಯೌವನವನ್ನು ಸಮರ್ಪಿಸಿದರು ಮತ್ತು ಅದರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು, ವ್ಯಾಲೆಂಟೈನ್‌ನ ಪ್ರೇಮದ ಸಂದೇಶವನ್ನು ಸ್ವೀಕರಿಸಿ ಅವರು ವಿವಾಹವಾಗಿ ಕುಳಿತುಕೊಳ್ಳುತ್ತಿದ್ದರೆ, ನಮಗೆ ಸ್ವಾತಂತ್ರ್ಯ ಸಿಗುತ್ತಿತ್ತೇ ?

೬ ಆ. ‘ಇಂಟರ್‌ನ್ಯಾಶನಲ್ ಬಿಝಿನೆಸ್ ಟೈಮ್ಸ್’ ಈ ಇ-ದೈನಿಕಕ್ಕೆ ಅನುಸಾರ ‘ವ್ಯಾಲೆಂಟೈನ್ ಡೇ’ಯ ದಿನ ‘ಸುಸೈಡ್ ಹೆಲ್ಪ್‌ಲೈನ್’ಗೆ ಅತೀ ಹೆಚ್ಚು ದೂರವಾಣಿ ಕರೆಗಳು ಬರುತ್ತವೆ. ‘ವ್ಯಾಲೆಂಟೈನ್ ಡೇ’ಯ ದಿನದಂದು ತನ್ನ ಇಚ್ಛೆಯಂತೆ ಪ್ರೇಮ ಸಿಗದ ಕಾರಣ ಉಂಟಾಗುವ ಒಂಟಿತನ ಮತ್ತು ಭಗ್ನ ಮಾನಸಿಕತೆಯು ಅದರ ಕಾರಣವಾಗಿದೆ.

೬ ಇ. ವ್ಯಾಲೆಂಟೈನ್ ಡೇ ಮತ್ತು ಅಂತಹ ಇತರ ಡೇಗಳು ಪಾಶ್ಚಾತ್ಯರು ಮಾಡಿರುವ ಅಯೋಗ್ಯ ರೂಢಿಗಳಾಗಿವೆ. ನಾವು ಹಿಂದೂ ಧರ್ಮದ ಅಭ್ಯಾಸ ಮಾಡಿ ಅದನ್ನು ಆಚರಿಸಿದರೆ ಕೇವಲ ಒಂದು ದಿನವಲ್ಲ, ಅನೇಕ ಜನ್ಮಗಳ ಮತ್ತು ಜನನ-ಮರಣದ ಆಚೆಗೆ ಹೋಗಲು ಸಾಧ್ಯವಿದೆ. ನಮಗೆ ಇಂತಹ ಡೇಗಳನ್ನು ಆಚರಿಸಿ ಸಿಗುವ ಸುಖಕ್ಕಿಂತಲೂ ಮುಂದಿನ ಆನಂದವನ್ನು ಗಳಿಸಿಕೊಡುವ ಕ್ಷಮತೆಯು ಹಿಂದೂ ಧರ್ಮದ ಬೋಧನೆಯಲ್ಲಿದೆ; ಆದ್ದರಿಂದ ವ್ಯಾಲೆಂಟೈನ್ ಡೇಯಂತಹ ದಿನವನ್ನು ಆಚರಿಸುವ ಬದಲು ಹಿಂದೂ ಧರ್ಮದ ಬಗ್ಗೆ ಯೋಗ್ಯವಾದ ಶಿಕ್ಷಣವನ್ನು ಪಡೆದು ಧರ್ಮಾಚರಣೆ ಮಾಡಿರಿ ಮತ್ತು ನಿಮ್ಮ ಗೆಳೆಯ-ಗೆಳತಿಯರಿಗೂ ಹಾಗೆ ಮಾಡಲು ಪ್ರೋತ್ಸಾಹಿಸಿರಿ.

ಸಂಕಲನಕಾರರು : ಶ್ರೀ. ಅತುಲ ದಿಘೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೦೧೪)