ಚೀನಾದ ವಿದೇಶಾಂಗ ಸಲಹೆಗಾರನಿಂದ ಎಚ್ಚರಿಕೆ
ಬೀಜಿಂಗ (ಚೀನಾ) – ಚೀನಾದ ವಿದೇಶಾಂಗ ಧೋರಣೆಯ ವಿಷಯದ ಸಲಹೆಗಾರರಾದ ಜಿಯಾ ಕಿಂಗ್ಗುಓ ಇವರು ‘ಚೀನಾ ಕೂಡ ಸೋವಿಯತ್ ಒಕ್ಕೂಟದಂತೆ ವಿಭಜನೆಗೊಳ್ಳಬಹುದು’, ಎಂದು ಎಚ್ಚರಿಸಿದ್ದಾರೆ.
೧. ಹಾಂಗಕಾಂಗ್‌ನಲ್ಲಿನ ‘ಸೌತ ಚೈನಾ ಮಾರ್ನಿಂಗ ಪೋಸ್ಟ’ ನಲ್ಲಿ ಜಿಯಾ ಇವರ ಲೇಖನ ಪ್ರಕಟಣೆಗೊಂಡಿದೆ. ಅದರಲ್ಲಿ ಅವರು, ‘ರಾಷ್ಟ್ರ ಭದ್ರತೆಯ ಹುಚ್ಚಿನಲ್ಲಿ ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಚೀನಾ ಕೂಡ ಸೋವಿಯತ ಒಕ್ಕೂಟದಂತೆ ವಿಭಜನೆಯಾಗಬಹುದು. ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಅಧಿಕ ಹಾನಿ ಮತ್ತು ಲಾಭ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಸುರಕ್ಷೆಗಾಗಿ ನಿಸರ್ಗವನ್ನು ನಿರ್ಲಕ್ಷಿಸಿರುವುದು ಮತ್ತು ಕಣ್ಣು ಮುಚ್ಚಿ ಅದನ್ನು ಪ್ರೋತ್ಸಾಹಿಸುವುದು ದೇಶ ಸುರಕ್ಷಿತಗೊಳ್ಳುವ ಬದಲಾಗಿ ಅಸುರಕ್ಷಿತವೇ ಆಗುತ್ತದೆ. ‘ಚೀನಾದಲ್ಲಿರುವ ದೊಡ್ಡ ಶಾಲೆಗಳಲ್ಲಿ ಮುಖ್ಯ ಪಾಠವೆಂದು ಸೋವಿಯತ ಒಕ್ಕೂಟವು ಯಾವ ಕಾರಣಗಳಿಂದ ವಿಭಜಿಸಲ್ಪಟ್ಟಿತು, ಆ ತಪ್ಪುಗಳು ಮಾಡದಿರುವಂತೆ ಕಲಿಸಲಾಗುತ್ತದೆ. ಈ ಪಾಠ ಚೀನಾದ ಆಡಳಿತಾರೂಢ ನಾಯಕರು ಕಲಿಯುವ ಅವಶ್ಯಕತೆಯಿದೆ’, ಎಂದೂ ಜಿಯಾ ಇವರು ಈ ಲೇಖನದಲ್ಲಿ ಹೇಳಿದ್ದಾರೆ.
China’s blind pursuit of ‘absolute national security’ may lead to Soviet-style collapse, warns advisor https://t.co/sVaXN5U2XO pic.twitter.com/jrEFf1cP5m
— The Times Of India (@timesofindia) January 23, 2022
೨. ಜಪಾನಿನ ‘ನಿಕ್ಕೆಇ ಏಶಿಯಾ’ ಈ ದೈನಿಕ ಪ್ರಕಟಿಸಿರುವ ಲೇಖನದಲ್ಲಿ ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ್ ಇವರ ಧೋರಣೆಗಳನ್ನು ‘ವಿಷಮ’ ಮತ್ತು ‘ಅಪಾಯಕಾರಿ’ ಎಂದು ಹೇಳಲಾಗಿದೆ. ‘ಶೀ ಜಿನ್‌ಪಿಂಗ್ ಸ್ವತಃ ತಮ್ಮ ದೇಶದ ಅರ್ಥವ್ಯವಸ್ಥೆಗೆ ಒಂದು ದೊಡ್ಡ ಸಂಕಟವಾಗಿದ್ದಾರೆ’, ಎಂದೂ ಅದರಲ್ಲಿ ತಿಳಿಸಲಾಗಿದೆ. ಅತಿಯಾದ ಆತ್ಮವಿಶ್ವಾಸ ಚೀನಾದ ಅಭಿವೃದ್ಧಿಗೆ ಅಪಾಯಕಾರಿಯಾಗಿದೆ. ಚೀನಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದ್ದರಿಂದ ಅಮೇರಿಕಾಗಿಂತ ಮುಂದೆ ಹೋಗುವ ಚೀನಾದ ಪ್ರಯತ್ನ ವಿಫಲವಾಗುತ್ತೊಇರುವುದು ಕಂಡು ಬರುತ್ತಿದೆ, ಎಂದು ತಿಳಿಸಲಾಗಿದೆ.