‘ಭಾರತದ ನಿಜವಾದ ಶತ್ರು ಪಾಕಿಸ್ತಾನ ಅಲ್ಲ, ಚೀನಾ ಆಗಿದೆ’ (ಅಂತೆ)

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ ಯಾದವ ಇವರು ಪಾಕಿಸ್ತಾನದ ಪರ ವಹಿಸಿದ ಹೇಳಿಕೆ !

ಪಾಕಿಸ್ತಾನವಿರಲಿ ಅಥವಾ ಚೀನಾ ಇರಲಿ ಇಬ್ಬರೂ ಭಾರತದ ಶತ್ರು ಆಗಿದ್ದಾರೆ; ಮುಸಲ್ಮಾನರ ಮತಗಳ ಸಲುವಾಗಿ ಸಮಾಜವಾದಿ ಪಕ್ಷ ಪಾಕಿಸ್ತಾನದ ಕಡೆಗೆ ನಿರ್ಲಕ್ಷಿಸಲು ಪ್ರಯತ್ನಿಸುತ್ತಿದೆ, ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ಅದು ಪಾಕಿಸ್ತಾನದ ನುಸುಳುಕೋರರಿಗೆ ಕೆಂಪುಹಾಸು ಹಾಕಿದರೆ ಆಶ್ಚರ್ಯಪಡಬಾರದು !

ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಾರತದ ನಿಜವಾದ ಶತ್ರು ಪಾಕಿಸ್ತಾನವಲ್ಲ, ಚೀನಾ ಆಗಿದೆ. ಭಾಜಪ ಮಾತ್ರ ನಿರಂತರವಾಗಿ ಪಾಕಿಸ್ತಾನವನ್ನು ಗುರಿ ಮಾಡುತ್ತದೆ. ಸಮಾಜವಾದಿ ಡಾ. ರಾಮ ಮನೋಹರ ಲೋಹಿಯಾ ಮತ್ತು ಮುಲಾಯಂ ಸಿಂಹ ಯಾದವ ಇವರದ್ದೂ ಇದೇ ನಿಲುವು ಇತ್ತು, ಎಂದು ಸಮಾಜವಾದಿ ಪಕ್ಷದ ಮುಖಂಡ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ ಇವರು ಹೇಳಿದ್ದಾರೆ. ಭಾಜಪ ಅವರ ಹೇಳಿಕೆಯನ್ನು ಟೀಕಿಸಿದೆ. ‘ಯಾರು ಜಿನ್ನಾರನ್ನು ಪ್ರೀತಿಸುತ್ತಾರೆಯೋ, ಅವರು ಪಾಕಿಸ್ತಾನವನ್ನು ಹೇಗೆ ನಿರಾಕರಿಸುತ್ತಾರೆ ?’, ಎಂದು ಭಾಜಪ ವಕ್ತಾರ ಡಾ. ಸಂಬಿತ ಪಾತ್ರಾ ಇವರು ಟೀಕಿಸಿದ್ದಾರೆ.