೧. ಕನ್ಯಾಕುಮಾರಿಯ ಕ್ರೈಸ್ತೀಕರಣವನ್ನು ತಿಳಿಯಿರಿ !
೨೦೧೧ ರ ಜನಗಣತಿಗನುಸಾರ ತಮಿಳುನಾಡಿನ ಕನ್ಯಾ ಕುಮಾರಿ ಜಿಲ್ಲೆಯಲ್ಲಿ ಶೇ. ೪೮.೫ ರಷ್ಟು ಹಿಂದೂಗಳಿದ್ದಾರೆ ಎನ್ನಲಾಗಿತ್ತು; ಆದರೆ ಶೇ. ೬೨ ರಷ್ಟು ಜನರು ಹಿಂದೂ ಹೆಸರಿರುವ ಕ್ರೈಸ್ತರಿದ್ದಾರೆಂದು ಮದ್ರಾಸ ಉಚ್ಚ ನ್ಯಾಯಾಲಯ ಹೇಳಿದೆ.
೨. ಹಿಂದೂಗಳೇ, ‘ಕೋಟೆ ಜಿಹಾದ್’ನ ಸಂಚನ್ನು ತಿಳಿಯಿರಿ !
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್ ಬಳಿಯ ‘ಕುಲಾಬಾ ಕೋಟೆ’ಯಲ್ಲಿರುವ ಪುರಾತತ್ವ ಇಲಾಖೆಯ ಕಚೇರಿ ಬಳಿ ಅನಧಿಕೃತವಾಗಿ ಗೋರಿಗಳನ್ನು ನಿರ್ಮಿಸಲಾಗಿದೆ. ಐಹಾಸಿಕವಾಗಿ ಮಹತ್ವದ ಕೋಟೆಗಳು ಹಾಗೂ ಅವುಗಳ ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಇಂತಹ ಷಡ್ಯಂತ್ರಗಳು ನಡೆಯುತ್ತಿವೆ ಎಂಬುದು ಬೆಳಕಿಗೆ ಬಂದಿದೆ.
೩. ಪಾಕಿಸ್ತಾನದ ಮಾತುಗಳಿಗೆ ಮರುಳಾಗದೇ ಅದನ್ನು ನಿರ್ನಾಮ ಮಾಡುವುದು ಆವಶ್ಯಕ !
ಪಾಕಿಸ್ತಾನವು ಆರ್ಥಿಕ ಸಂಕಷ್ಟದಲ್ಲಿ ಮುಳುಗಿರುವುದರಿಂದ ತನ್ನ ರಾಷ್ಟ್ರೀಯ ನೀತಿಯನ್ನು ಬದಲಾಯಿಸಿ, ‘ಮುಂದಿನ ೧೦೦ ವರ್ಷಗಳ ಪಾಕಿಸ್ತಾನವು ಭಾರತದೊಂದಿಗೆ ಶತ್ರುತ್ವವಿಡುವುದಿಲ್ಲ’ ಎಂದಿದೆ. ಆದರೆ ಕಾಶ್ಮೀರದ ಮೇಲೆ ತನ್ನ ಹಕ್ಕಿದೆ ಎಂದಿದೆ.
೪. ಚೀನಾದ ಅಮಾನವೀಯ ಕೃತ್ಯಗಳನ್ನು ತಿಳಿಯಿರಿ !
ಫೆಬ್ರವರಿ ೨೦೨೨ ರಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ‘ಒಲಿಂಪಿಕ್ಸ್’ ಸ್ಪರ್ಧೆಯ ಹಿನ್ನೆಲೆಯಲ್ಲಿ, ಚೀನಾ ಸರಕಾರವು ‘ಝಿರೋ ಕೊರೊನಾ ಪಾಲಿಸಿ’ಯ ಹೆಸರಿನಲ್ಲಿ ೨ ಕೋಟಿ ಚೀನಿ ನಾಗರಿಕರನ್ನು ಅತ್ಯಂತ ಸಣ್ಣ ಲೋಹದ ಕೋಣೆಗಳಲ್ಲಿ ೨೧ ದಿನಗಳ ಕಾಲ ಕೂಡಿಟ್ಟಿದೆ.
೫. ಇಂತಹ ಘಟನೆಗಳು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !
ಆತ್ಮಕೂರ್ (ಆಂಧ್ರಪ್ರದೇಶ) ನಗರದಲ್ಲಿ ಅನಧಿಕೃತ ಮಸೀದಿಯ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಮತಾಂಧರ ಗುಂಪು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿತು ಹಾಗೂ ಭಾಜಪದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿತು. ಈ ವೇಳೆ ಮತಾಂಧರು ವಾಹನಗಳನ್ನು ಧ್ವಂಸಗೊಳಿಸಿದರು ಮತ್ತು ಅವುಗಳ ಮೇಲೆ ಕಲ್ಲು ತೂರಿದರು.
೬. ತಮಿಳುನಾಡಿನಲ್ಲಿ ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಿಳಿಯಿರಿ !
ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ವಡಾಮದುರೈಯ ಶ್ರೀ ಗಣೇಶ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ್ದಕ್ಕಾಗಿ ಬಾಲಕೃಷ್ಣನ್ ಎಂಬ ಮತಾಂತರಿತ ಕ್ರೈಸ್ತನನ್ನು ಬಂಧಿಸಲಾಗಿದೆ. ಆತ ಒಟ್ಟು ೫ ದೇವತೆಗಳ ವಿಗ್ರಹಗಳನ್ನು ಭಗ್ನಗೊಳಿಸಿದ್ದಾನೆ.
೭. ಬಾಂಗ್ಲಾದೇಶಿ ನುಸುಳುಕೋರರ ದೇಶವಿರೋಧಿ ಚಟುವಟಿಕೆಗಳನ್ನು ತಿಳಿಯಿರಿ !
ನಕ್ಸಲೀಯರಿಗೆ ನಿಧಿ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಬಾಂಗ್ಲಾದೇಶಿ ನುಸುಳುಕೋರ ಕನಿಜ್ ಫಾತಿಮಾಳನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆಕೆಯಿಂದ ೭೧ ಲಕ್ಷ ರೂಪಾಯಿ ನಗದು ಹಾಗೂ ೨ ದುಬಾರಿ ಚತುಶ್ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.