ದೈನಿಕ ‘ಸನಾತನ ಪ್ರಭಾತ’ ಮತ್ತು ಸಮಾಜದಲ್ಲಿರುವ ಒಂದು ಪ್ರಸಿದ್ಧ ದೈನಿಕದಲ್ಲಿನ ಆಧ್ಯಾತ್ಮಿಕ ಸ್ತರದ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಸಂಶೋಧನೆ !

ನಿಯತಕಾಲಿಕೆಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಹೆಚ್ಚಿನಂಶ ದೈನಿಕಗಳು ಕೇವಲ ವ್ಯಾವಸಾಯಿಕ ಉದ್ದೇಶದಿಂದ ಪ್ರೇರಣೆ ಪಡೆದು ಕಾರ್ಯನಿರತವಾಗಿವೆ. ದೈನಿಕಗಳಿಗೆ ಸಂಬಂಧಿಸಿ ಕೆಲಸ ಮಾಡುವ ಕಾರ್ಮಿಕರು ಕೇವಲ ಉದರ ಪೋಷಣೆಗಾಗಿ ಅಲ್ಲಿ ನೌಕರಿ ಮಾಡುತ್ತಾರೆ, ತದ್ವಿರುದ್ಧ ‘ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿ’ಯು ದೈನಿಕ ‘ಸನಾತನ ಪ್ರಭಾತ’ದ ಉದ್ದೇಶವಾಗಿದೆ. ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದ ಸೇವೆ ಮಾಡುವ ಎಲ್ಲರೂ ಸಾಧಕರಿದ್ದಾರೆ. ಅವರು ದೈನಿಕಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ಸಾಧನೆಯೆಂದು ಮಾಡುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಆರಂಭದಿಂದಲೇ ಸಾಧಕರಿಗೆ ಸಾಧನೆಯ ಯೋಗ್ಯ ದೃಷ್ಟಿಕೋನವನ್ನು ನೀಡಿ ಪ್ರತಿಯೊಂದು ಸೇವೆಯನ್ನು ಪರಿಪೂರ್ಣಗೊಳಿಸಲು ಕಲಿಸಿದರು. ಇಂದು ಕೂಡ ಅವರು ಸಾಧಕರಿಗೆ ಈ ವಿಷಯದಲ್ಲಿ ತಳಮಳದಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ದೈನಿಕ ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದ ಸೇವೆ ಮಾಡುವ ಸಾಧಕರ ಸಾಧನೆಯು ವೃದ್ಧಿಯಾಗಿ ಅವರ ಸಾಧನೆಯಲ್ಲಿ ಶೀಘ್ರ ಪ್ರಗತಿಯಾಗಬೇಕು, ಎನ್ನುವ ತಳಮಳದಿಂದ ೨೦.೫.೨೦೨೧ ರಿಂದ ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಅವರಿಂದಾಗುವ ವ್ಯಾಕರಣ ಮತ್ತು ಸಂಕಲನದ ಸ್ತರದ ಚಿಕ್ಕ-ಪುಟ್ಟ ತಪ್ಪುಗಳನ್ನು ತಿಳಿಸಲು ಆರಂಭಿಸಿದರು. ಕಳೆದ ೪ ತಿಂಗಳಿಂದ ಸಾಧಕರು ತಳಮಳದಿಂದ ಮಾಡಿದ ಪ್ರಯತ್ನದಿಂದ ಅವರಿಂದಾಗುವ ತಪ್ಪುಗಳ ಪ್ರಮಾಣ ತುಂಬಾ ಕಡಿಮೆಯಾಯಾಯಿತು. ಅದರ ಸಕಾರಾತ್ಮಕ ಪರಿಣಾಮವು ದೈನಿಕ ‘ಸನಾತನ ಪ್ರಭಾತ’ಕ್ಕೆ ಆಗಿರುವುದು ಕಂಡುಬಂದಿದೆ. ಸಮಾಜದಲ್ಲಿನ ದೈನಿಕ ಹಾಗೂ ‘ಸನಾತನ ಪ್ರಭಾತ’ದಲ್ಲಿನ ಆಧ್ಯಾತ್ಮಿಕ ಸ್ತರದ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.

ಸೌ. ಮಧುರಾ ಕರ್ವೆ

೧. ಪರಿಶೀಲನೆಯಲ್ಲಿನ ನಿರೀಕ್ಷಣೆಯ ವಿವೇಚನೆ

ಜೂನ್ ೨೦೨೧ ರಿಂದ ದೈನಿಕ ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದ ಸೇವೆ ಮಾಡುವ ಸಾಧಕರು ತಪ್ಪುಗಳನ್ನು ಸುಧಾರಿಸುವ ಪ್ರಕ್ರಿಯೆಯನ್ನು ಆರಂಭಿಸಿದರು. ಅಕ್ಟೋಬರ್ ೨೦೨೧ ರಿಂದ ದೈನಿಕದಲ್ಲಿನ ತಪ್ಪುಗಳು ತುಂಬಾ ಕಡಿಮೆಯಾದವು. ಈ ಪರಿಶೀಲನೆಯಲ್ಲಿ ೨.೧೦.೨೦೨೧ ರ ತಪ್ಪು ಇಲ್ಲದ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆ (ಟಿಪ್ಪಣಿ) ಮತ್ತು ಅದೇ ದಿನದ ಸಮಾಜದಲ್ಲಿನ ಒಂದು ಪ್ರಸಿದ್ಧ ದೈನಿಕವನ್ನು ‘ಯು.ಎ.ಎಸ್.’ ಈ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು.

ಟಿಪ್ಪಣಿ – ದೈನಿಕ ‘ಸನಾತನ ಪ್ರಭಾತ’ದ ೨.೧೦.೨೦೨೧ ರ ಸಂಚಿಕೆಯಲ್ಲಿನ ಒಂದೇ ಒಂದು ತಪ್ಪನ್ನೂ ಪರಾತ್ಪರ ಗುರು ಡಾಕ್ಟರರು ತಿಳಿಸಲಿಲ್ಲ.

೧ ಅ. ತಪ್ಪು ಇಲ್ಲದ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯು ಸ್ವಲ್ಪವೂ ಇಲ್ಲದೇ ತುಂಬಾ ಹೆಚ್ಚು ಸಕಾರಾತ್ಮಕ ಊರ್ಜೆ ಇರುವುದು : ಸಮಾಜದಲ್ಲಿನ ಪ್ರಸಿದ್ಧ ದೈನಿಕಗಳಲ್ಲಿ ಸಕಾರಾತ್ಮಕ ಊರ್ಜೆಯು ಸ್ವಲ್ಪವೂ ಇಲ್ಲದೇ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಇವೆರಡೂ ಪ್ರಕಾರದ ನಕಾರಾತ್ಮಕ ಊರ್ಜೆಯು ತುಂಬಾ ಪ್ರಮಾಣದಲ್ಲಿ ಕಂಡು ಬಂತು. ತಪ್ಪು ಇಲ್ಲದಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯು ಸ್ವಲ್ಪವೂ ಇಲ್ಲದೆ ತುಂಬಾ ಸಕಾರಾತ್ಮಕ ಊರ್ಜೆ ಇದೆ. ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಅರಿವಾಗುತ್ತದೆ.

೨. ನಿಷ್ಕರ್ಷ

೨ ಅ. ಸಮಾಜದಲ್ಲಿನ ಒಂದು ಪ್ರಸಿದ್ಧ ದೈನಿಕದಲ್ಲಿ ತುಂಬಾ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯು ಕಂಡುಬರುವುದು : ದೈನಿಕದ ಸಾತ್ತ್ವಿಕತೆಯು ಆ ದೈನಿಕದ ಉದ್ದೇಶ, ಅದರಲ್ಲಿನ ವಾರ್ತೆಗಳ ಬೆರಳಚ್ಚು, ಸಂಕಲನ ಮತ್ತು ಮುದ್ರಣಶೋಧನೆ, ಜಾಹೀರಾತುಗಳ ಸಂರಚನೆ ಇತ್ಯಾದಿ ಅನೇಕ ಘಟಕಗಳನ್ನು ಅವಲಂಬಿಸಿರುತ್ತದೆ. ಈ ಘಟಕಗಳು ಎಷ್ಟು ಸಾತ್ತ್ವಿಕ ಅಥವಾ ಅಸಾತ್ತ್ವಿಕವೋ ಅಷ್ಟೇ ಆ ದೈನಿಕದಿಂದ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಣೆಯಾಗುತ್ತವೆ. ಸಮಾಜದಲ್ಲಿನ ಪ್ರಸಿದ್ಧ ದೈನಿಕದಲ್ಲಿ ತುಂಬಾ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬಂತು. ಈ ದೈನಿಕವನ್ನು ಓದುವಾಗ ಅದರಿಂದ ಪ್ರಕ್ಷೇಪಣೆಯಾಗುವ ನಕಾರಾತ್ಮಕ ಸ್ಪಂದನದ ಪರಿಣಾಮವು ವಾಚಕರ ಮೇಲಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಹಾನಿಯಾಗುತ್ತದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೨ ಆ. ತಪ್ಪು ಇಲ್ಲದಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯಲ್ಲಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಇಂಧನ ಇರುವುದು : ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯು ‘ದೈನಿಕ’ ‘ಸನಾತನ ಪ್ರಭಾತ’ದ ಧ್ಯೇಯವಾಗಿದೆ. ದೈನಿಕದಿಂದ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಮಾರ್ಗದರ್ಶಕ ಲೇಖನವನ್ನು ಪ್ರಕಟಿಸಲಾಗುತ್ತದೆ. ‘ಸಮಾಜಕ್ಕೆ ಏನು ಇಷ್ಟವಾಗುತ್ತದೆ ? ಎನ್ನುವ ಬದಲು ಸಮಾಜಕ್ಕೆ ಏನು ಆವಶ್ಯಕವಿದೆ’, ಎನ್ನುವ ವಿಚಾರ ಮಾಡಲಾಗುತ್ತದೆ. ದೈನಿಕ ‘ಸನಾತನ ಪ್ರಭಾತ’ ಭಾಷಾಶುದ್ಧಿಗೆ ಮಹತ್ವ ನೀಡುತ್ತದೆ; ಏಕೆಂದರೆ ಭಾಷೆ ಎಷ್ಟು ಶುದ್ಧವೊ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಅಷ್ಟು ಒಳ್ಳೆಯ ಸ್ಪಂದನದ ಪ್ರಕ್ಷೇಪಣೆಯಾಗುತ್ತದೆ. ದೈನಿಕದಲ್ಲಿ ಸಂಸ್ಕೃತ ಶುಭಾಶಿತಗಳು, ಶ್ಲೋಕ, ಸಂತರ ಸುವಚನಗಳು ಇತ್ಯಾದಿ ಪ್ರಕಟಿಸಲಾಗುತ್ತದೆ. ಆದ್ದರಿಂದ ದೈನಿಕದ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.

೨೦.೫.೨೦೨೧ ರಿಂದ ಪರಾತ್ಪರ ಗುರು ಡಾಕ್ಟರರು ದೈನಿಕಕ್ಕೆ ಸಂಬಂಧಿಸಿದ ಸೇವೆ ಮಾಡುವ ಸಾಧಕರಿಗೆ ಅವರಿಂದಾಗುವ ವ್ಯಾಕರಣ ಮತ್ತು ಸಂಕಲನದ ಸ್ತರದ ಚಿಕ್ಕ-ಪುಟ್ಟ ತಪ್ಪುಗಳನ್ನು ತಿಳಿಸಲು ಆರಂಭಿಸಿದರು. (ದೈನಿಕ ‘ಸನಾತನ ಪ್ರಭಾತ’ದ ೨೪.೫.೨೦೨೧ ರ ಸಂಚಿಕೆಯಲ್ಲಿ ಅತೀ ಹೆಚ್ಚು ತಪ್ಪುಗಳಿದ್ದವು. ಈ ಸಂಚಿಕೆಯಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ೮.೭೨ ಮೀಟರ್‌ ಮತ್ತು ಸಕಾರಾತ್ಮಕ ಊರ್ಜೆ ೬.೦೬ ಮೀಟರ್ ಇತ್ತು.) ಜೂನ್ ೨೦೨೧ ರಿಂದ ಸಾಧಕರು ತಮ್ಮಿಂದಾಗುವ ತಪ್ಪುಗಳ ಪ್ರಮಾಣವನ್ನು ಕಡಿಮೆಗೊಳಿಸಲು ತಳಮಳದಿಂದ ಪ್ರಯತ್ನವನ್ನು ಆರಂಭಿಸಿದರು. ದೈನಿಕ ‘ಸನಾತನ ಪ್ರಭಾತ’ದ ೨.೧೦.೨೦೨೧ ರ ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯು ಬಹಳಷ್ಟು ಕಡಿಮೆಯಾಗಿ ಸಕಾರಾತ್ಮಕ ಊರ್ಜೆಯು ತುಂಬಾ ಹೆಚ್ಚು ಪ್ರಮಾಣದಲ್ಲಿ (೪೦.೮೦ ಮೀಟರ್) ಇರುವುದು ಕಂಡುಬಂತು. ಇದರಿಂದ ‘ದೈನಿಕಕ್ಕೆ ಸಂಬಂಧಿಸಿದ ಸೇವೆ ತಪ್ಪುರಹಿತ ಹಾಗೂ ಪರಿಪೂರ್ಣವಾಗಿ ಮಾಡಿರುವುದರಿಂದ ಸಾಧಕರ ಸಾಧನೆಯು ವೃದ್ಧಿಯಾಗಿ ಅದರ ಸೂಕ್ಷ್ಮ ಪರಿಣಾಮವು ದೈನಿಕದ ಮೇಲಾಯಿತು’, ಎಂಬುದು ಅರಿವಾಗುತ್ತದೆ ಹಾಗೂ ದೈನಿಕ ‘ಸನಾತನ ಪ್ರಭಾತ’ದಿಂದ ಪ್ರಕ್ಷೇಪಣೆಯಾಗುವ ಸಕಾರಾತ್ಮಕ ಸ್ಪಂದನದಿಂದ ವಾಚಕರಿಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವಾಗುತ್ತದೆ.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.